ಮಡಿಕೇರಿ ರೋಟರಿ ಕ್ಲಬ್‌ನ 2026-27ನೇ ಸಾಲಿನ ಅಧ್ಯಕ್ಷರಾಗಿ ಮಡಿಕೇರಿಯ ಮನೋಹರ್ ಕಾಮತ್ ಪದಗ್ರಹಣ ಮಾಡಿದರು. ಡಾ. ಕೆ. ರವಿ ಅಪ್ಪಾಜಿ, ಆದರ್ಶ್ ಸೋಮಣ್ಣ ಇದ್ದರು.
ರೋಟರಿ ಇಂಟರ್‌ನ್ಯಾಷನಲ್ ಜಿಲ್ಲಾ 3181ರ ಮೂರನೇ ಅತ್ಯಂತ ಹಿರಿಯ ಕ್ಲಬ್ ಆಗಿರುವ ರೋಟರಿ ಕ್ಲಬ್ ಮಡಿಕೇರಿಯ 76ನೇ ಅಧ್ಯಕ್ಷರಾಗಿ 2026–27ನೇ ಸಾಲಿಗೆ ಮಡಿಕೇರಿಯ ಗೋಪಾಲ್ ಕಾಮತ್ ಸಂಸ್ಥೆಯ ಮಾಲೀಕ ಮನೋಹರ್ ಕಾಮತ್ ಗುರುವಾರ ಪದಗ್ರಹಣ ಮಾಡಿದರು.
ನಗರದ ರೋಟರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಜಿಲ್ಲಾ ಪ್ರಾಂತಪಾಲ ಡಾ. ಕೆ. ರವಿ ಅಪ್ಪಾಜಿ ನೂತನ ಅಧ್ಯಕ್ಷರು ಹಾಗೂ ಕಾರ್ಯಕಾರಿ ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ರೋಟೇರಿಯನ್ನರು, ಕುಟುಂಬದ ಸದಸ್ಯರು ಹಾಗೂ ಅತಿಥಿಗಳು ಭಾಗವಹಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.
2026–27ನೇ ಸಾಲಿನ ಗೌರವ ಕಾರ್ಯದರ್ಶಿಯಾಗಿ ಆದರ್ಶ್ ಸೋಮಣ್ಣ ಅಧಿಕಾರ ವಹಿಸಿಕೊಂಡರು. ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ರೋಟರಿಯ ಸೇವಾ ಆದರ್ಶಗಳನ್ನು ಮತ್ತಷ್ಟು ಬಲಪಡಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸುವ ಸಂಕಲ್ಪ ವ್ಯಕ್ತಪಡಿಸಿದರು.