ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿ ನಾಲ್ಕನೇ ವಾರ್ಡ್ ವತಿಯಿಂದ ಆಯೋಜಿಸಿರುವ ಲಕ್ಕಿ ಇಲವನ್ ಪ್ರೀಮಿಯರ್ ಲೀಗ್-2 ಕ್ರೀಡಾಕೂಟದಲ್ಲಿ ಗಣ್ಯರು ಟ್ರೋಫಿ ಅನಾವರಣ ಮಾಡಿದರು. ವಿ.ಕೆ.ಲೋಕೇಶ್, ಲಕ್ಕಿ ಇಲವನ್ ಅಧ್ಯಕ್ಷ ಸತ್ಯ, ಪಿ.ಆರ್.ಭರತ್, ಧನಲಕ್ಷ್ಮೀ, ಮಾಜಿ ಅಧ್ಯಕ್ಷ ಹಕ್ಕಿಂ, ಮಾಜಿ ಸದಸ್ಯ ಸಪೀಯಾ ಇತರರು ಇದ್ದರು. 
ಕೊಡಗು

ಲಕ್ಕಿ ಇಲೆವನ್ ಲೀಗ್-2 ಕ್ರೀಡಾ ಹಬ್ಬಕ್ಕೆ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಿಗಾಗಿ ವಿಶೇಷ ಮನರಂಜನಾ ಸ್ಪರ್ಧೆಗಳು
ಸಿದ್ದಾಪುರ : ನೆಲ್ಯಹುದಿಕೇರಿ ನಾಲ್ಕನೇ ವಾರ್ಡ್ ವತಿಯಿಂದ ಆಯೋಜಿಸಲಾದ ಲಕ್ಕಿ ಇಲೆವನ್ ಪ್ರೀಮಿಯರ್ ಲೀಗ್-2 ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ದೊರೆಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ನಾಲ್ಕನೇ ವಾರ್ಡಿನ ಜನರನ್ನು ಒಂದಾಗಿ ಸೇರಿಸಿ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿದೆ. ಇದು ಕೇವಲ ಪಂದ್ಯಾವಳಿಯಲ್ಲ, ವಾರ್ಡಿನ ಸಮಗ್ರ ಕ್ರೀಡಾ ಹಬ್ಬವಾಗಿದೆ ಎಂದರು.
ಲಕ್ಕಿ ಇಲೆವನ್ ಅಧ್ಯಕ್ಷ ಸತ್ಯ ಮಾತನಾಡಿ, ಇಂದಿನ ತುರ್ತು ಜೀವನದಲ್ಲಿ ಸಾಮಾಜಿಕ ಹಾಗೂ ಕೌಟುಂಬಿಕ ಒತ್ತಡಗಳ ನಡುವೆ ಜನರು ಒಂದಾಗಿ ಸಂತೋಷ ಹಂಚಿಕೊಳ್ಳುವ ವೇದಿಕೆಯಾಗಿ ಈ ಕ್ರೀಡಾಕೂಟ ಕಾರ್ಯನಿರ್ವಹಿಸುತ್ತದೆ. ಏ.26ವರೆಗೆ ನಡೆಯುವ ಈ ಹಬ್ಬದಲ್ಲಿ ಮೊದಲ ಮೂರು ದಿನಗಳು ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿದ್ದು, ನಾಲ್ಕನೇ ದಿನ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಮನರಂಜನಾ ಸ್ಪರ್ಧೆಗಳು ಆಯೋಜಿಸಲಾಗಿದೆ ಎಂದರು.
ಹಗ್ಗಜಗ್ಗಾಟ, ಸಂಗೀತ ಕುರ್ಚಿ (ಮ್ಯೂಸಿಕಲ್ ಚೇರ್), ಗುಂಡು ಎಸೆತ ಹಾಗೂ ವಿವಿಧ ಮನರಂಜನಾ ಕ್ರೀಡೆಗಳು ನಡೆಯಲಿವೆ ಎಂದರು.
ಕಾರ್ಯಕ್ರಮದಲ್ಲಿ ಸಿಪಿಐಎಂ ಶಾಖಾ ಕಾರ್ಯದರ್ಶಿ ಪಿ.ಆರ್.ಭರತ್, ನೆಲ್ಯಹುದಿಕೇರಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮೀ, ಮಾಜಿ ಅಧ್ಯಕ್ಷ ಹಕ್ಕಿಂ, ಮಾಜಿ ಸದಸ್ಯ ಸಪೀಯಾ, ಸುವೈದ ಅಶ್ರಫ್, ದೇವಸಿ ಟಿ.ಪಿ., ಲಿಂಬ್ರ ಫಾಸಿಲ್,ಕೆ.ಎಂ.ಬಶೀರ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮುಸ್ತಫ ಪಿ.ಕೆ.,ಡೊಮಿನೋಸ್ ಸಂಘದ ಶೌಕತ್ ಸೇರಿದಂತೆ ಲಕ್ಕಿ ಇಲವನ್ ಸದಸ್ಯರಾದ ನಿಖಿಲ್, ಮುಸ್ತಫ, ರಫೀಕ್, ಅಪ್ಸಲ್, ಉದಯ ಮತ್ತಿತರರು ಹಾಜರಿದ್ದರು.
ಕ್ರೀಡಾಭಿಮಾನಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.