ಸಿದ್ದಾಪುರ: ಸಿದ್ದಾಪುರ-ನೆಲ್ಯಹುದಿಕೇರಿ ಸಮೀಪದ ಕಾವೇರಿ ಸೇತುವೆ ಬಳಿ ಬೈಕ್‌ನಲ್ಲಿ ಬಂದ ವಲಸೆ ಕಾರ್ಮಿಕನೊಬ್ಬ ನದಿಗೆ ಕಸ ಎಸೆದ ಘಟನೆ ಸೋಮವಾರ ನಡೆದಿದೆ. ಕಸ ಎಸೆಯುವುದನ್ನು ಗಮನಿಸಿದ ಸ್ಥಳೀಯರು ಆತನನ್ನು ತಡೆದು ನದಿಗೆ ಇಳಿಸಿ ಆತನೇ ಎಸೆದಿದ್ದ ಕಸವನ್ನು ವಾಪಸ್ ತೆಗೆಯುವಂತೆ ಮಾಡಿದ್ದಾರೆ. ಕಾವೇರಿ ನದಿ ಪರಿಸರವನ್ನು ಸ್ವಚ್ಛವಾಗಿಡುವ ಜವಾಬ್ದಾರಿ ಎಲ್ಲರದ್ದಾಗಿದೆ. ನದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.