ಕಲ್ಲುಮೊಟ್ಟೆ ಪ್ರೀಮಿಯರ್ ಲೀಗ್-2026 ವತಿಯಿಂದ ಆಯೋಜಿಸಿದ್ದ ಕೆಪಿಎಲ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಲಿವರ್ ಪೂಲ್ ಎಫ್‌ಸಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.  
ಕೊಡಗು

ಲಿವರ್ ಪೂಲ್ ಎಫ್‌ಸಿ ತಂಡ ಚಾಂಪಿಯನ್

ಪ್ರಮುಖ ಮುಖ್ಯಾಂಶಗಳು

  • ಈಗಲ್ಸ್ ಎಫ್‌ಸಿ ತಂಡ ರನ್ನರ್‌ಅಪ್
  • ಕೆಪಿಎಲ್ ಫುಟ್‌ಬಾಲ್ ಪಂದ್ಯಾವಳಿ
ನಾಪೋಕ್ಲು: ಇಲ್ಲಿಗೆ ಸಮೀಪದ ಕಲ್ಲುಮೊಟ್ಟೆಯಲ್ಲಿ ಕಲ್ಲುಮೊಟ್ಟೆ ಪ್ರೀಮಿಯರ್ ಲೀಗ್-2026 ವತಿಯಿಂದ ಆಯೋಜಿಸಿದ್ದ ಕೆಪಿಎಲ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಲಿವರ್‌ಪೂಲ್ ಎಫ್‌ಸಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ವಿಜೇತ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಲಾಯಿತು. ಅಂತಿಮ ಪಂದ್ಯದಲ್ಲಿ ಈಗಲ್ಸ್ ತಂಡವನ್ನು ಮಣಿಸಿ ಸಂಶೀರ್ ಒಡೆತನದ ಲಿವರ್‌ಪೂಲ್ ಎಫ್‌ಸಿ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆಬಿದ್ ಪುಲಿಯಂಡ ನೇತೃತ್ವದ ಈಗಲ್ಸ್ ಎಫ್‌ಸಿ ತಂಡ ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಸರಣಿ ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸಹದ್(ಲಿವರ್ ಪೂಲ್), ಅತ್ಯುತ್ತಮ ರಕ್ಷಕ ಪ್ರಶಸ್ತಿಯನ್ನು ಅಮಾನ್, ಸುವರ್ಣ ಕೈಗವಸು ಪ್ರಶಸ್ತಿಯನ್ನು ರಫೀಕ್, ಚಿನ್ನದ ಬೂಟು ಪ್ರಶಸ್ತಿಯನ್ನು ಮಿರ್ಷಾದ್, ಉದಯೋನ್ಮುಖ ತಾರೆ ಪ್ರಶಸ್ತಿಯನ್ನು ಯೂನಸ್ ಪಡೆದುಕೊಂಡರು. ವೇದಿಕೆಯಲ್ಲಿದ್ದ ಗಣ್ಯರು ವಿಜೇತರರಿಗೆ ಬಹುಮಾನವನ್ನು ವಿತರಿಸಿದರು.
ಕಲ್ಲುಮೊಟ್ಟೆ ಪ್ರೀಮಿಯರ್ ಲೀಗ್ ಅಧ್ಯಕ್ಷ ಎಂ.ಎಂ.ಹನೀಫ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಕೆ ಎ. ಇಸ್ಮಾಯಿಲ್, ದಿವ್ಯಾ ಬಾಳೆಯಡ, ಬಿ.ಎಂ.ಪ್ರತೀಪ, ಕೊಟ್ಟಮುಡಿ ಹಂಸ, ಪುಲಿಯಂಡ ಮೊಯಿದು, ಮಮ್ಮುಜಿ, ಸಿರಾಜು, ಸೀನ ಮಾಧವನ್, ಹನೀಫ್ ಇದ್ದರು.