19 ವರ್ಷದೊಳಗಿನ ಬಾಲಕರ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಆಯ್ಕೆಯಾದ ಪೊನ್ನಂಪೇಟೆಯ ಲಿಖಿತ್ ಬೋಪಣ್ಣ  
ಕೊಡಗು

ಪೊನ್ನಂಪೇಟೆಯ ಲಿಖಿತ್ ಬೋಪಣ್ಣ ಆಯ್ಕೆ

ಪೊನ್ನಂಪೇಟೆ: ಚೆನ್ನೈನಲ್ಲಿ ಆಯೋಜಿಸಿರುವ 19 ವರ್ಷದೊಳಗಿನ 75ನೇ ಸೀನಿಯರ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಪಂದ್ಯಾವಳಿಗೆ ಪೊನ್ನಂಪೇಟೆಯ ಲಿಖಿತ್ ಬೋಪಣ್ಣ ಆಯ್ಕೆಯಾಗಿದ್ದಾರೆ.
ಜನವರಿ 4ರಿಂದ 11ರವರೆಗೆ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಲಿಖಿತ್ ಬೋಪಣ್ಣ ಪ್ರತಿನಿಧಿಸುತ್ತಿದ್ದಾರೆ. ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದ ಗಾಂಡಂಗಡ ಉಮೇಶ್ ಮತ್ತು ರೀನಾ ದಂಪತಿ ಪುತ್ರನಾಗಿರುವ ಇವರು ಪ್ರಸ್ತುತ ಡಿವೈಇಎಸ್ ಬೆಂಗಳೂರಿಗೆ ಆಡುತ್ತಿದ್ದು, ಬೆಂಗಳೂರಿನ ಸುರಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.