ಭಾಗಮಂಡಲದಲ್ಲಿ ಮಂಗಳವಾರ ಮೋಡ ಕವಿದ ವಾತಾವರಣ ಕಂಡುಬ0ತು
ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ ಸಾಧಾರಣದಿಂದ ಹಗುರ ಪ್ರಮಾಣದಲ್ಲಿ ಮುಂದುವರಿದಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಂಗಳವಾರ ಮೋಡ ಕವಿದ ತಂಪಾದ ವಾತಾವರಣವಿತ್ತು. ಮಡಿಕೇರಿಯಲ್ಲಿ ಮಂಜು ಮುಸುಕಿದ ವಾತಾವರಣದೊಂದಿಗೆ ಹಗುರದಿಂದ ಸಾಧಾರಣ ಮಳೆ ಆಯಿತು. ಕಾವೇರಿ ಜಲಾನಯನ ಪ್ರದೇಶವಾದ ಭಾಗಮಂಡಲದಲ್ಲಿ ತಂಪಾದ ಗಾಳಿ ಹಾಗೂ ಸಾಧಾರಣ ಮಳೆ ಇತ್ತು. ನಾಪೋಕ್ಲು, ವಿರಾಜಪೇಟೆ ಬಾಗದಲ್ಲಿ ಸಂಪೂರ್ಣ ಮೋಡ ಕವಿದ ವಾತಾವರಣ ನಡುವೆ ಸಣ್ಣ ಪ್ರಮಾಣದ ಹನಿಮಳೆ ಹಾಗೂ ಸಾಧಾರಣ ತುಂತುರು ಮಳೆಯಾಯಿತು. ಗೋಣಿಕೊಪ್ಪಲು, ಸೋಮವಾರಪೇಟೆ ಮತ್ತು ಕುಶಾಲನಗರ ವ್ಯಾಪ್ತಿಯಲ್ಲಿ ಮೋಡ ಕವಿದಿದ್ದು ಹಗುರ ಮಳೆ, ಬಿಸಿಲಿನ ವಾತಾವರಣ ಕಂಡುಬAತು.
ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 11.60 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 22.67 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ಮಳೆ 69.59 ಮಿ.ಮೀ. ಮಳೆಯಾಗಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 1828.76 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 16.20 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 10.40 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 5.73 ಮಿ.ಮೀ.,
ಸೋಮವಾರಪೇಟೆ ತಾಲೂಕಿನಲ್ಲಿ 23.55 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 2.10 ಮಿ.ಮೀ. ಸರಾಸರಿ ಮಳೆಯಾಗಿದೆ.
ಮಡಿಕೇರಿ 13.50, ನಾಪೋಕ್ಲು 10.80, ಸಂಪಾಜೆ 21.50, ಭಾಗಮಂಡಲ 19, ವಿರಾಜಪೇಟೆ 11.80, ಅಮ್ಮತ್ತಿ 9, ಹುದಿಕೇರಿ 11.90, ಶ್ರೀಮಂಗಲ 4, ಪೊನ್ನಂಪೇಟೆ 4, ಬಾಳೆಲೆ 3.01, ಸೋಮವಾರಪೇಟೆ 21, ಶನಿವಾರಸಂತೆ 10, ಶಾಂತಳ್ಳಿ 48, ಕೊಡ್ಲಿಪೇಟೆ 15.20, ಕುಶಾಲನಗರ 3.20 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ ಸರಾಸರಿ 1 ಮಿ.ಮೀ. ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿ. ಮಂಗಳವಾರದ ನೀರಿನ ಮಟ್ಟ 2,853.06 ಅಡಿಗಳು. ಕಳೆದ ವರ್ಷ ಇದೇ ದಿನ 2,857.24 ಅಡಿ ನೀರಿತ್ತು. ಒಳಹರಿವು 3,846 ಕ್ಯೂಸೆಕ್. ಕಳೆದ ವರ್ಷ ಇದೇ ದಿನ 4,907 ಕ್ಯೂಸೆಕ್ ಒಳಹರಿವು ಇತ್ತು. ನದಿಗೆ 180 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ನದಿಗೆ 4,500 ಕ್ಯೂಸೆಕ್, ನಾಲೆಗೆ 500 ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು.