ಪೊನ್ನಂಪೇಟೆ ಅಪ್ಪಚಕವಿ ವಿದ್ಯಾಲಯದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭವನ್ನು ಕೊಡವ ಸಮಾಜದ ಅಧ್ಯಕ್ಷ ಕಾಳೀಮಾಡ ಮೋಟಯ್ಯ ಉದ್ಘಾಟಿಸಿದರು. ಚೆಪ್ಪುಡೀರ ಪೂಣಚ್ಚ, ಪೊನ್ನಿಮಾಡ ಸುರೇಶ್, ಬಾಳೆಯಡ ಸುಬ್ರಮಣಿ, ಸಂಜು ಇತರರು ಇದ್ದರು.
ಪೊನ್ನಂಪೇಟೆ: ವಿಶಿಷ್ಟ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆಯನ್ನು ಹೊಂದಿರುವ ಪುಟ್ಟ ಜಿಲ್ಲೆ ಕೊಡಗು ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಿದೆ. ಯುವ ಜನಾಂಗ ಈ ನಿಟ್ಟಿನಲ್ಲಿ ಹೆಚ್ಚು ಗಮನಹರಿಸಬೇಕು ಎಂದು ಒಲಂಪಿಯನ್ ಚೆಪ್ಪುಡೀರ ಪೂಣಚ್ಚ ಕರೆ ನೀಡಿದರು.
ಪೊನ್ನಂಪೇಟೆ ಅಪ್ಪಚಕವಿ ವಿದ್ಯಾಲಯದಲ್ಲಿ ನಡೆದ ಗಣರಾಜ್ಯೋತ್ಸವ ಮತ್ತು ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದು ಕ್ರೀಡೆಯಲ್ಲಿ ಯುವಕರಿಗೆ ಹೆಚ್ಚು ಅವಕಾಶವಿದ್ದು, ಇದರೊಂದಿಗೆ ಕೊಡಗಿನ ಪರಿಸರವೂ ಪೂರಕವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಯಲ್ಲಿ ಹೆಚ್ಚು ಗಮನಹರಿಸಿ ತಮ್ಮ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಇದೇ ಸಂದರ್ಭ ಪೊನ್ನಂಪೇಟೆ ಕ್ರೀಡಾ ನಿಲಯದ ಮುಖ್ಯ ತರಬೇತುದರಾದ ಕುಪ್ಪಂಡ ಸುಬ್ಬಯ್ಯನವರನ್ನು ಸನ್ಮಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಒಲಂಪಿಯನ್ ಲೆಫ್ಟಿನೆಂಟ್ ಕರ್ನಲ್ ಬಾಳೆಹಡ ಸುಬ್ರಮಣಿ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಕಾಳಿಮಾಡ ಮೋಟಯ್ಯ ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಅಪ್ಪಚಕವಿ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಪೊನ್ನಿಮಾಡ ಸುರೇಶ್, ಉಪಾಧ್ಯಕ್ಷೆ ಮೂಕಳೆರ ಕಾವ್ಯ, ಕಾರ್ಯದರ್ಶಿ, ಕೊಣಿಯಂಡ ಸಂಜು ಸೋಮಯ್ಯ, ಆಲೇಮಾಡ ಸುಧೀರ್, ಕಳ್ಳಿಚಂಡ ಚಿಪ್ಪ ದೇವಯ್ಯ, ಚೆಪ್ಪುಡೀರ ಕಾರ್ಯಪ್ಪ, ಚೀರಂಡ ಧನ್ಯ ದೇಚಮ್ಮ, ಮುಖ್ಯ ಶಿಕ್ಷಕಿ ತನುಜಾ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.