ಕೊಡವ ಪೊಮ್ಮಕ್ಕಡ ಒಕ್ಕೂಟ ಕೊಡವ ಸಮಾಜ ವತಿಯಿಂದ ಕಕ್ಕಡ ನಮ್ಮೆ ಆಚರಿಸಲಾಯಿತು. ಅಮ್ಮಣಿಚಂಡ ರವಿ, ಕಾಣತಂಡ ಜಗದೀಶ್, ತಾತಂಡ ಜ್ಯೋತಿ ಪ್ರಕಾಶ್, ಮಂಡೇಪಂಡ ಶಾಂತಿ, ಪುಡಿಯಂಡ ಅಸ್ತು, ಕುಂದಿರ ಕನಿಕೆ, ಬೊಳ್ಳಾರ್ ಪಂಡ ಅನಿತಾ, ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ, ಕೀತಿಯಂಡ ಕಾವೇರಮ್ಮ ಇದ್ದರು. 
ಕೊಡಗು

ಮಹಿಳೆಯರು ಪ್ರತಿಭಾ ಪ್ರದರ್ಶನಕ್ಕೆ ಮುಂದಾಗಲಿ

ವಿರಾಜಪೇಟೆ:

ಕೊಡವ ಪೊಮ್ಮಕ್ಕಡ ಒಕ್ಕೂಟ, ಕೊಡವ ಸಮಾಜ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಕಕ್ಕಡ ನಮ್ಮೆಯನ್ನು ಕೊಡವ ಪೊಮ್ಮಕ್ಕಡ ಒಕ್ಕೂಟದ ಪೊನ್ನಕ್ಕ ತಂಡದವರಿಂದ ಹಮ್ಮಿಕೊಳ್ಳಲಾಗಿತ್ತು.

ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಕ್ಕಡ ನಮ್ಮೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ 18 ಬಗೆಯ ಔಷಧೀಯ ಗುಣಗಳನ್ನು ಹೊಂದಿರುವ ಮದ್ ಸೊಪ್ಪಿನಿಂದ ತಯಾರಿಸಿದ ಖಾದ್ಯವನ್ನು ಸೇವಿಸಿದರೆ ದೇಹದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು. ಮಹಿಳೆಯರು ಯಾವುದೇ ಕೆಲಸವನ್ನು ಮಾಡಲು ಹಿಂಜರಿಯದೆ ಮುಂದೆ ಬರಬೇಕು ಎಂದರು.
ಕೊಡವ ಸಮಾಜದ ಉಪಾಧ್ಯಕ್ಷ ಕಾಣತಂಡ ಜಗದೀಶ್ ಮಾತನಾಡಿ, ಮಹಿಳೆಯರು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಬೇಕು. ಉತ್ತಮ ಕೆಲಸವನ್ನು ಮಾಡುವುದರ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಕೊಡವ ಸಮಾಜದ ಕಾರ್ಯದರ್ಶಿ ಮಾಲೆಟಿರ ಶ್ರೀನಿವಾಸ್ ಕೊಡವ ಪೊಮ್ಮಕ್ಕಡ ಒಕ್ಕೂಟ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಮಾತನಾಡಿದರು. ಒಕ್ಕೂಟದ ಖಜಾಂಚಿ ತಾತಂಡ ಯಶು ಕಬೀರ್ 2025-26ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು.

ಮದ್ ಸೊಪ್ಪಿನಿಂದ ಪಾಯಸ ಹಾಗೂ ಪುಟ್ ತಯಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಮದ್ ಪಾಯಸ ತಯಾರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಮಾಲೆಟಿರ ವಿನಿಶಾ, ದ್ವಿತೀಯ ಮಂಡೇಪಂಡ ಶಾಂಶ, ತೃತೀಯ ಬಹುಮಾನ ಮಾಚೆಟ್ಟಿರ ರುಕ್ಮಿಣಿ ಪಡೆದುಕೊಂಡರು. ಪುಟ್ ತಯಾರಿಸುವ ಸ್ಪರ್ಧೆಯಲ್ಲಿ ಮಾಚೆಟ್ಟಿರ ರುಕ್ಮಿಣಿ ಪ್ರಥಮ, ಪುಗ್ಗೇರ ಭವಾನಿ ದ್ವಿತೀಯ ಬಹುಮಾನ ಪಡೆದರು. ಒಕ್ಕೂಟದ ಉಪಾಧ್ಯಕ್ಷೆ ಮುರುವಂಡ ಉಷಾ ಮೊನ್ನಪ್ಪ ಸ್ಪರ್ಧೆ ಆಯೋಜಿಸಿ ಬಹುಮಾನ ಮೊತ್ತ ನೀಡಿದರು. ಮೂಕೋಂಡ ಪ್ರೀತ್ ಈರಪ್ಪ ಕಕ್ಕಡ ನಮ್ಮೆಯ ಕುರಿತು ಭಾಷಣ ಸ್ಪರ್ಧೆ ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ ಕಾಣತಂಡ ಬೀನಾ ಜಗದೀಶ್ ಪ್ರಥಮ, ಬಡುವಮಂಡ ವೀಣಾ ದ್ವಿತೀಯ, ಅಮ್ಮಣಿಚಂಡ ಮಂಗಳ ಪ್ರವೀಣ್ ತೃತೀಯ ಬಹುಮಾನ ಪಡೆದರು.

ಕೊಡವ ಪೊಮ್ಮಕ್ಕಡ ಒಕ್ಕೂಟದ ಬೈಲಾವನ್ನು ಒಮ್ಮತದಿಂದ ಸ್ವೀಕರಿಸಿದರು. ಮಂಡೇಪಂಡ ಶಾಂತಿ, ಪುಡಿಯಂಡ ಅಸ್ತು, ಕುಂದಿರ ಕನಿಕೆ, ಬೊಳ್ಳಾರ್ ಪಂಡ ಅನಿತಾ, ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ, ಕೀತಿಯಂಡ ಕಾವೇರಮ್ಮ, ಕೊಡವ ಪೊಮ್ಮಕ್ಕಡ ಒಕ್ಕೂಟ ಸದಸ್ಯರು ಉಪಸ್ಥಿತರಿದ್ದರು.