ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಬಿ. ಸಿಎಸ್‌ಸಿ ಸೇವಾ ಕೇಂದ್ರದಲ್ಲಿ ಡಿಜಿ ಪೇ ಯೋಜನೆಗೆ ಹಾನಗಲ್ಲು ಗ್ರಾಪಂ ಮಾಜಿ ಅಧ್ಯಕ್ಷ ದರ್ಶನ್ ಚಾಲನೆ ನೀಡಿದರು. ಹನುಮಂತ, ಸುಶೀಲಮ್ಮ ಇತರರು ಇದ್ದರು.
ಸೋಮವಾರಪೇಟೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗ್ರಾಮೀಣ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಡಿಜಿ ಪೇ ಸೌಲಭ್ಯವನ್ನು ಮಾಡಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಶಾಂತಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ದರ್ಶನ್ ತಿಳಿಸಿದರು.
ಶಾಂತಳ್ಳಿ ವಲಯದ, ಹಾನಗಲ್ಲು ಬಿ.ಯ ಸಿಎಸ್‌ಸಿ ಸೇವಾ ಕೇಂದ್ರದಲ್ಲಿ ಸೋಮವಾರ ಡಿಜಿ ಪೇ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಮಾತನಾಡಿ, ಡಿಜಿ ಪೇ ಯಿಂದ ಲಾನುಭವಿಗಳಿಗೆ ಅನುಕೂಲವಾಗಲಿದೆ. ಗ್ರಾಮೀಣ ಭಾಗದ ಜನತೆಗೆ ಸಣ್ಣ ಮೊತ್ತದ ನಗದು ಪೂರೈಸಲು ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಮಾಜಿ ಸದಸ್ಯೆ ಸುಶೀಲಮ್ಮ, ಹಣಕಾಸು ಪ್ರಬಂಧಕರಾದ ಗೀತಾ ಇತರರು ಇದ್ದರು.