ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಅಯೋಜಿಸಲಾಗಿದ್ದ ರಂಜಾನ್, ರಾಮನವಮಿ, ಯುಗಾದಿ ಪ್ರಯುಕ್ತ ಅಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್‌ಕುಮಾರ್ ಮಾತನಾಡಿದರು. ಕೆ.ಇ.ಕರೀಂ, ಕೆ.ಎಚ್.ಶರೀಫ್, ಪಟ್ಟೆಮನೆ ಉದಯಕುಮಾರ್, ರಮೇಶ್ ಪಿಳ್ಳೆ, ವ್ನಿೇಶ್ ಇತರರಿದ್ದರು. 
ಕೊಡಗು

ಸೌಹಾರ್ದ ನೆಲೆಯೂರಲು ಧರ್ಮಿಕ ಮುಖಂಡರು ಮುಂದಾಳತ್ವ ಸಹಿಸಲಿ

ಸುಂಟಿಕೊಪ್ಪ: ಕೊಡಗು ಜಿಲ್ಲೆ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುವ ಜಿಲ್ಲೆಯಾಗಿದೆ ಇದೇ ಪಾರಂಪರ‌್ಯವನ್ನು ಮುಂದುವರಿಸಿಕೊಂಡು ಹೋಗುವ ಮಹತ್ತರ ಜವಬ್ದಾರಿಯನ್ನು ಸರ್ವಧರ್ಮಗಳ ಮುಖಂಡರು ನಿರ್ವಹಿಸಬೇಕೆಂದು ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್‌ಕುಮಾರ್ ಕರೆ ನೀಡಿದರು.
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಅಯೋಜಿಸಲಾಗಿದ್ದ ರಂಜಾನ್, ರಾಮನವಮಿ, ಯುಗಾದಿ ಪ್ರಯುಕ್ತ ಬುಧವಾರ ಆಯೋಜಿಸಲಾಗಿದ್ದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸುಂಟಿಕೊಪ್ಪ ಪಟ್ಟಣವು ಶಾಂತಿ ಸೌಹರ್ದತೆಯನ್ನು ಹಿಂದಿನಿಂದಲೂ ಕಾಯ್ದುಕೊಂಡು ಬಂದಿದ್ದು, ಈ ಸೌಹರ್ದತೆಯನ್ನು ಮುಂದೆಯೂ ಗಟ್ಟಿಯಾಗಿ ನೆಲೆಯೂರಬೇಕಾದರೆ ವಿವಿಧ ಧರ್ಮಗಳ ಮುಖಂಡರು ಮುಂದಾಳತ್ವ ತೆಗದುಕೊಳ್ಳುವ ಮೂಲಕ ಇಂದಿನ ಯುವ ಪೀಳಿಗೆಯು ಮಾರ್ಗದರ್ಶನ ನೀಡಬೇಕೆಂದು ಅವರು ಕಿವಿಮಾತು ಹೇಳಿದರು. ಹಬ್ಬಗಳನ್ನು ಆಚರಿಸುವ ಸಂದರ್ಭ ಇತರರಿಗೆ ಭಾವನೆಗಳನ್ನು ಗೌರವಿಸುವಂತಿರಬೇಕು. ಅವರ ಭಾವನೆಗಳಿಗೆ ಘಾಸಿ ಉಂಟಾಗದಂತೆ ಆಚರಿಸಬೇಕು ಆಗಿದ್ದಾಗ ಮಾತ್ರ ನಮ್ಮ ಹಬ್ಬ ಆಚರಣೆ ಸಂಸ್ಕೃತಿಗೆ ಮಹತ್ವತೆ ಕೂಡಿ ಬರಲಿದೆ. ಅನ್ಯನೋತೆಯು ಹೆಚ್ಚಾಗಲಿದೆ ಶಾಂತಿ ಸೌಹರ್ಧತೆಯು ಕಂಡುಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಸಭೆಯ ವೇದಕೆಯಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‌ರಾಜ್, ಅಪರಾಧ ವಿಭಾಗ ಠಾಣಾಧಿಕಾರಿ ಗೋಪಾಲ್ ಶಾಂತಿ ಸೌಹರ್ಧ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ವಿವಿಧ ಧಾರ್ಮಿಕ ಕೇಂದ್ರದ ಮುಖಂಡರಾದ ಕೆ.ಇ.ಕರೀಂ, ಕೆ.ಎಚ್.ಶರೀಫ್, ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಖಜಾಂಜಿ ರಮೇಶ್ ಪಿಳ್ಳೆ, ಗೌರಿ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷ ವಿಘ್ನೇಶ್, ಹರದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪದ್ಮನಾಭ, ರವಿ, ಅಬ್ದುಲ್ ಸಲಾಂ, ಸೂಫಿ, ಗದ್ದೆಹಳ್ಳ ಜಮಾಯಿತಿನ ಇಬ್ರಾಹಿಂ ಸೇರಿದಂತೆ ಕೊಡಗರಹಳ್ಳಿ, ಏಳನೇ ಹೊಸಕೋಟೆ, ಕಂಬಿಬಾಣೆ ಗ್ರಾಮದ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.