ನಿಡ್ತ ಸರ್ಕಾರಿ ಪ್ರೌಢಶಾಲೆಯ ನಿಸರ್ಗ ಇಕೋ ಕ್ಲಬ್ ವತಿಯಿಂದ ಪರಿಸರಕ್ಕಾಗಿ ಜೀವನ ಶೈಲಿ ಬದಲಾವಣೆ ಎಂಬ ವಿಷಯದ ಕುರಿತು ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಶಿಕ್ಷಕ ಜಗದೀಶ್ ಮಾತನಾಡಿದರು. ಎಂ.ಸಿ. ನಳಿನಿ , ಮಾರುತಿ ಅರೇರ್, ಎಂ.ವಿ.ರೂಪಾ, ಡಿ.ಎಂ.ಮಹಾದೇವಿ ಇತರರಿದ್ದರು.
- ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕ ಜಗದೀಶ್ ಕಿವಿಮಾತು
ಶನಿವಾರಸಂತೆ: ಸಮೀಪದ ನಿಡ್ತ ಸರ್ಕಾರಿ ಪ್ರೌಢಶಾಲೆಯ ನಿಸರ್ಗ ಇಕೋ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಪರಿಸರಕ್ಕಾಗಿ ಜೀವನ ಶೈಲಿ ಬದಲಾವಣೆ ಎಂಬ ವಿಷಯದ ಕುರಿತು ಮಾಗದರ್ಶನ ಮತ್ತು ಮಾಹಿತಿ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಯಿತು.
ವಿದ್ಯಾರ್ಥಿಗಳಿಗೆ ಪರಿಸರಕ್ಕಾಗಿ ಜೀವನ ಶೈಲಿ ಬದಲಾವಣೆ ಕುರಿತು ಮಾಹಿತಿ ನೀಡಿದ ಶಾಲಾ ಶಿಕ್ಷಕ ಜಗದೀಶ್, ನಾವು ಪರಿಸರ ಸಮೃದ್ಧಿ ಬಗ್ಗೆ ಮಾತ್ರ ಜಾಗೃತಿ ಹೊಂದಿದರೆ ಸಾಕಾಗುವುದಿಲ್ಲ. ಪರಿಸರಕ್ಕಾಗಿ ತಮ್ಮ ಜೀವನ ಶೈಲಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ನಾವೆಲ್ಲಾರೂ, ಪರಿಸರ ನಮಗೆ ನೀಡಿರುವ ಸೌಕರ್ಯಗಳನ್ನು ಯಾವ ರೀತಿ ಬಳಕೆ ಮಾಡವುದು ಹಾಗೂ ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಅರಿವು ನಮಗೆ ಇರಬೇಕು ಎಂದರು.
ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಪರಿಸರ ಹಾನಿಯಾಗುತ್ತಿದ್ದು ಈ ಬಗ್ಗೆ ವಿದ್ಯಾರ್ಥಿಗಳು ಜನರಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡದಂತೆ ಜಾಗೃತಿ ಮೂಡಿಸಬೇಕು. ನೀರು ನಮ್ಮಲ್ಲಾರಿಗೂ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಜನರು ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡುವುದರ ಮೂಲಕ ನೀರು ಪೋಲಾಗದಂತೆ ಜಾಗೃತಿವಹಿಸಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕಿ ಎಂ.ಸಿ. ನಳಿನಿ ಸಹ ಶಿಕ್ಷಕರಾದ ಮಾರುತಿ ಅರೇರ್, ಎಂ.ವಿ.ರೂಪಾ, ಡಿ.ಎಂ.ಮಹಾದೇವಿ, ಗೀತಾ ಇಕ್ಕೋ ಕ್ಲಬ್ ನೋಡಲ್ ಶಿಕ್ಷಕ ಡಿ.ಎಸ್.ಮಧುಕುಮಾರ್ ಮುಂತಾದವರು ಹಾಜರಿದ್ದರು.