ಸೋಮವಾರಪೇಟೆ ವಕೀಲರ ಸಂಘದಲ್ಲಿ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಎಚ್.ಎಸ್. ಪ್ರಕಾಶ್ ಮತ್ತು ಪಿ.ಕೆ. ಗಣಪತಿ ಅವರನ್ನು ಸನ್ಮಾನಿಸಲಾಯಿತು. ನ್ಯಾಯಾಧೀಶರಾದ ರೇಖಾ, ಶ್ರೀನಾಥ ಸಂಘದ ಅಧ್ಯಕ್ಷ ಅಭಿಮನ್ಯು ಕುಮಾರ್ ಇದ್ದರು.
ಸೋಮವಾರಪೇಟೆ : ನಿರಂತರವಾಗಿ ಕಾನೂನು ವಿಷಯ ಅಧ್ಯಯನದೊಂದಿಗೆ ಹಿರಿಯ ವಕೀಲರ ಮಾರ್ಗದರ್ಶನ ಪಡೆದರೆ ವೃತ್ತಿಯಲ್ಲಿ ಹಿಡಿತ ಸಾಧಿಸಬಹುದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀನಾಥ ಹೇಳಿದರು. ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ನ್ಯಾಯಾಂಗ ಸೇವೆಯಲ್ಲಿ ಕಾನೂನು ವೃತ್ತಿಪರರ ಪಾತ್ರ ಪ್ರಮುಖವಾಗಿದೆ. ನೀತಿ ಮತ್ತು ನಿಯಮವನ್ನು ಕಾಪಾಡುವುದು ಇಲ್ಲಿನ ಮುಖ್ಯ ಧ್ಯೇಯ. ವೃತ್ತಿಪರತೆ, ಕಾನೂನು , ನೀತಿಶಾಸ್ತ್ರ ಅಧ್ಯಯನ ಮತ್ತು ಬಾಧ್ಯತೆಗಳ ಮೌಲ್ಯವನ್ನು ಒತ್ತಿಹೇಳಲು ವಕೀಲರ ದಿನಾಚರಣೆ ಮಹತ್ವದ ದಿನವಾಗಿದೆ ಎಂದರು. ಕಾನೂನು ಜಾಗೃತಿಯನ್ನು ಮೂಡಿಸಲು ಮತ್ತು ಬದಲಾಗುತ್ತಿರುವ ಸಮಾಜದಲ್ಲಿ ವಕೀಲರ ಪಾತ್ರವನ್ನು ವಿವರಿಸಲು ಇದು ವಿಶೇಷ ಸಂದರ್ಭವಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ಸಮಾಜದಲ್ಲಿ ವಕೀಲರಿಗೆ ಮತ್ತು ಶಿಕ್ಷಕರಿಗೆ ವಿಶೇಷ ಗೌರವಿದೆ. ವಕೀಲರ ಮೇಲೆ ಸಮಾಜ ಇಟ್ಟಿರುವ ಗೌರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಘನತೆ ಕಾಪಾಡಿಕೊಳ್ಳಬೇಕು ಎಂದರು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ನ್ಯಾಯಾಂಗದ ಪಾತ್ರ ಪ್ರಮುಖವಾಗಿದೆ. ಭಾರತದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಸ್ಮರಣಾರ್ಥ ಪ್ರತಿ ವರ್ಷ ಡಿ. 3 ರಂದು ವಕೀಲರ ದಿನವನ್ನು ಆಚರಿಸಲಾಗುತ್ತದೆ. ಇವರು ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತವೂ ವಕೀಲರಾಗಿ ಸೇವೆ ಸಲ್ಲಿಸಿ ಪ್ರಖ್ಯಾತರಾಗಿದ್ದರು. ಸಂವಿಧಾನ ಕರಡು ಸಮಿತಿಯಲ್ಲೂ ಸೇವೆ ಸಲ್ಲಿಸಿ ರಾಷ್ಟ್ರಪತಿ
ಹಿರಿಯ ಸಿವಿಲ್ ನ್ಯಾಯಾಧೀಶೆ ರೇಖಾ, ಸಂಘದ ಉಪಾಧ್ಯಕ್ಷ ಬಿ.ಈ. ಜಯೇಂದ್ರ, ಕಾರ್ಯದರ್ಶಿ ಯತೀಶ್ ಇದ್ದರು. ಸಂಘದ ಹಿರಿಯ ಸದಸ್ಯರಾದ ಎಚ್.ಎಸ್. ಪ್ರಕಾಶ್ ಮತ್ತು ಪಿ.ಕೆ. ಗಣಪತಿ ಅವರನ್ನು ಸನ್ಮಾನಿಸಲಾಯಿತು. ಸದಸ್ಯರಿಗೆ ಆಯೋಜಿಸಿದ್ದ ವಿವಿಧ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.