ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಕೃತಿ ಮಾತನಾಡಿದರು. 
ಕೊಡಗು

ಕೆವೈಸಿ, ಸಿಕೆವೈಸಿಯಿಂದ ವಂಚನೆ ತಡೆ ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ಅವಾರ್ಡ್ ಸಂಸ್ಥೆಯ ಕುಶಾಲನಗರ ತಾಲೂಕಿನ ಕೌನ್ಸಿಲರ್ ಹರೀಶ್
  • ಆರ್ಥಿಕ ಸಾಕ್ಷರತಾ ಸಪ್ತಾಹ
ಸುಂಟಿಕೊಪ್ಪ: ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು ಕೆವೈಸಿ, ಸಿಕೆವೈಸಿ, ಅಕೌಂಟ್ ಹೈಜೀನ್ ಮಾಡಿಸಿಕೊಳ್ಳುವುದರಿಂದ ಖಾತೆ ದುರುಪಯೋಗ ಮತ್ತು ವಂಚನೆ ತಡೆಯಲು ಸಾಧ್ಯ ಎಂದು ಅವಾರ್ಡ್ ಸಂಸ್ಥೆಯ ಕುಶಾಲನಗರ ತಾಲೂಕಿನ ಕೌನ್ಸಿಲರ್ ಹರೀಶ್ ಹೇಳಿದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಡೆಸುತ್ತಿರುವ ಆರ್ಥಿಕ ಸಾಕ್ಷರತಾ ಸಪ್ತಾಹ ಅಂಗವಾಗಿ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಂಬಿಬಾಣೆ ಮತ್ತು ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆಗೆ ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಸೈಬರ್ ವಂಚಕರು ಗ್ರಾಹಕರಿಗೆ ಸುಲಭವಾಗಿ ವಂಚಿಸುತ್ತಿದ್ದು, ಅಂತಹ ವಂಚಕರಿಂದ ಗ್ರಾಹಕರನ್ನು ರಕ್ಷಿಸಲು ಕೆವೈಸಿ, ಸಿಕೆವೈಸಿ ಸುಲಭ ಮಾರ್ಗ. ಇದು ಗುರುತು, ವಿಳಾಸ ಮತ್ತು ಆರ್ಥಿಕ ಸ್ಥಾನಮಾನ ಪರಿಶೀಲಿಸಲು ನೆರವಾಗುವುದರೊಂದಿಗೆ ಸುಲಭದಲ್ಲಿ ಬ್ಯಾಂಕ್ ವ್ಯವಹಾರ ಮಾಡಲು ಸಹಾಯ ಮಾಡುತ್ತದೆ ಎಂದರು.
ವಿರಾಜಪೇಟೆ ತಾಲೂಕು ಕೌನ್ಸಿಲರ್ ಕೃತಿ ಮಾತನಾಡಿ, ಸಿಕೆವೈಸಿ ಮಾಡಿಸಿದ 14 ಅಂಕಿಗಳ ಕೋಡ್ ಆರ್ಥಿಕ ವ್ಯವಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ವೇದಿಕೆಯಲ್ಲಿ ಪೊನ್ನಂಪೇಟೆ ತಾಲೂಕಿನ ಕೌನ್ಸಿಲರ್ ಅನಿಲ್, ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕಿ ಸುಪರ್ಣಾ ಇತರರಿದ್ದರು.