ಸಂಸದ ಯದುವೀರ್ ಅವರನ್ನು ಕಿರಿಕೊಡ್ಲಿ ಮಠದ ಶ್ರೀಸದಾಶಿವಸ್ವಾಮೀಜಿ, ಮನೇಹಳ್ಳಿ ಮಠದ ಶ್ರೀಮಹಾಂತ ಶಿವಲಿಂಗ ಸ್ವಾಮೀಜಿ ಸನ್ಮಾನಿಸಿದರು. ಮಾಜಿ ಸಚಿವ ಅಪ್ಪಚ್ಚು ರಂಜನ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ, ಸೋಮವಾರಪೇಟೆಯ ವೀರಶೈವ ಸಮಾಜದ ಪ್ರಮುಖರಾದ ಎಸ್.ಮಹೇಶ್ ಇತರರಿದ್ದರು.
ಕುಶಾಲನಗರ: ಕುಶಾಲನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಆಗಮಿಸಿದ್ದ ಮೈಸೂರು-ಕೊಡಗು ಸಂಸದ ಯದುವೀರ್ ಅವರನ್ನು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀಸದಾಶಿವಸ್ವಾಮೀಜಿ, ಶನಿವಾರಸಂತೆ ಮನೇಹಳ್ಳಿ ಮಠದ ಶ್ರೀಮಹಾಂತ ಶಿವಲಿಂಗ ಸ್ವಾಮೀಜಿ ಅವರು ಸನ್ಮಾನಿಸಿ ಏಪ್ರಿಲ್‌ನಲ್ಲಿ ಮನೇಹಳ್ಳಿ ಮಠದ ಆವರಣದಲ್ಲಿ ಜರುಗುವ ಅಜ್ಜಯ್ಯನ ರಥೋತ್ಸವದಲ್ಲಿ ಭಾಗಿಯಾಗಲು ಆಹ್ವಾನಿಸಿದರು.
ಮಾಜಿ ಸಚಿವ ಅಪ್ಪಚ್ಚು ರಂಜನ್, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ, ಸೋಮವಾರಪೇಟೆ ವೀರಶೈವ ಸಮಾಜದ ಪ್ರಮುಖರಾದ ಎಸ್.ಮಹೇಶ್ ಇದ್ದರು.