ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾದ ಕೂಡಿಗೆ ಕ್ರೀಡಾಶಾಲೆಯ ವಿದ್ಯಾರ್ಥಿಗಳು. ತರಬೇತಿದಾರ ಬಿ.ಎಸ್. ವೆಂಕಟೇಶ್ ಮತ್ತಿತರರು ಇದ್ದರು.
ಹಾಸನದಲ್ಲಿ ಈಚೆಗೆ ನಡೆದ ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕೂಡಿಗೆ ಕ್ರೀಡಾ ಶಾಲೆಯ ವಿದ್ಯಾರ್ಥಿಗಳು ಮೈಸೂರು ವಿಭಾಗ ತಂಡವನ್ನು ಸೋಲಿಸಿ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾಟಕ್ಕೆ ಆಯ್ಕೆ ಆಗಿದೆ. ಹಾಸನದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪೈನಲ್ ಪಂದ್ಯದಲ್ಲಿ ಮೈಸೂರು ವಿಭಾಗ ತಂಡವನ್ನು 1-0 ಗೋಲುಗಳಿಂದ ಕೂಡಿಗೆ ತಂಡ ಸೋಲಿಸಿರು. ತಂಡದ ಪರ ಪ್ರತೀಕ್ ಯರಕಲ್ ಏಕೈಕ ಗೋಲು ದಾಖಲಿಸಿದರು.
ಕೂಡಿಗೆ ತಂಡದ ಆಟಗಾರ ಸಾರ್ಥಕ್ ಬಿಜವಾಡ ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಗಳಿಸಿದರು. ವಿಜೇತ ತಂಡದಲ್ಲಿ ಪ್ರಬಲ್ ಸೋಮಯ್ಯ, ಪೂಜಿತ್, ಕೌಶಿಕ್, ವಿನಯ್, ಚಿರಾಗ್, ಸಾರ್ಥಕ್ ಬಿಜವಾಡ, ಕೃತನ್, ದೇವ್ ಮಲ್ಯಮೇಟಿ, ಶ್ರೇಯಸ್, ನಕುಲ್ ಇದ್ದರು. ಈ ತಂಡಕ್ಕೆ ಕ್ರೀಡಾ ಶಾಲೆಯ ಪ್ರಮುಖ ಹಾಕಿ ತರಬೇತಿದಾರÀ ಬಿ.ಎಸ್. ವೆಂಕಟೇಶ್ ತರಬೇತಿ ನೀಡಿದ್ದರು. ರಾಷ್ಟ್ರ ಮಟ್ಟದ ಹಾಕಿ ಪಂದ್ಯಾಟ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಮುಂದಿನ ತಿಂಗಳು ನಡೆಯಲಿದೆ.