ಕೂಡಿಗೆ ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಜಯಶ್ರೀ, ಟಿ.ಪಿ. ಹಮೀದ್, ಮೋಹಿನಿ, ಅನಂತ, ವಾಣಿ, ಮಂಗಳಾ, ಡಾ. ಕೆ. ನಾಗರಾಜ್, ಮಂಜುಳಾ, ಪುನೀತ್ ಮತ್ತಿತರರು ಇದ್ದರು. 
ಕೊಡಗು

ಕೂಡಿಗೆ ಗ್ರಾ.ಪಂ. ವಿಶೇಷ ಗ್ರಾಮ ಸಭೆ

ಕುಶಾಲನಗರ:
ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ 2025-26ನೇ ಸಾಲಿನ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ಸಭೆಯಲ್ಲಿ ಮೊದಲಿಗೆ ಕೂಡಿಗೆ ಗ್ರಾಮ ವ್ಯಾಪ್ತಿಯಲ್ಲಿ ಹಿಂದು ರುದ್ರಭೂಮಿ, ಮತ್ತು ಕಾವೇರಿ ನದಿಗೆ ತೆರಳುವ ದಾರಿ ಹಾಗೂ ಈಗಾಗಲೇ ನಿರ್ಮಾಣಗೊಳಿಸಲಾಗಿರುವ ಸೊಪಾನಕಟ್ಟೆಯನ್ನು ದುರಸ್ತಿಪಡಿಸಿ ಸಾರ್ವಜನಿಕರು ಕಾವೇರಿ ನದಿಗೆ ತೆರಳಲು ಉದ್ಯೋಗ ಖಾತರಿ ಯೋಜನೆಯ ಮುಖೇನ ಕಾಮಗಾರಿಯಲ್ಲಿ ಅನುವು ಮಾಡಬೇಕೆಂದು ಗ್ರಾಮಸ್ಥರರಾದ ಕೆ.ಪಿ. ಸೋಮಣ್ಣ, ಕೆ. ಎಂ. ನಾಗರಾಜ್ ಸೇರಿದಂತೆ ಹಲವು ಮಂದಿ ಒತ್ತಾಯ ಮಾಡಿದರು.
ಗ್ರಾಮ ಪಂಚಾಯತಿ ಸಮೀಪದಲ್ಲಿರುವ ಕೂಡಿಗೆ ಸರ್ಕಲ್‌ನಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸುವಂತೆ ಸ್ಥಳೀಯ ಗ್ರಾಮಸ್ಥರಾದ ಕೆ.ಇ. ರಾಜಣ್ಣ, ಗಣೇಶ್ ಸೇರಿದಂತೆ ಅನೇಕರು ಸಭೆಯ ಗಮನಕ್ಕೆ ತಂದರು
ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಕೆ.ಟಿ. ಗಿರೀಶ್ ಮಾತನಾಡಿ ಕೂಡಿಗೆ ಸರ್ಕಲ್‌ನಲ್ಲಿ ಪ್ರಮುಖವಾಗಿ ಹೈಟೆಕ್ ಮಾದರಿಯ ಶೌಚಗೃಹ ನಿರ್ಮಾಣ ಮಾಡುವ ಎಲ್ಲಾ ಕ್ರಿಯಾ ಯೋಜನೆ, ಮತ್ತು ಅದಕ್ಕೆ ಸಂಬAಧಿಸಿದ ಪತ್ರ ವ್ಯವಹಾರವನ್ನು ಇಲಾಖೆಯ ನಿಯಮಾನುಸಾರ ತಾಲೂಕು ಮತ್ತು ಜಿಲ್ಲಾ ಪಂಚಾಯತಿಗೆ ಕಳುಹಿಸಲಾಗಿದೆ. ಶೌಚಗೃಹ ನಿರ್ಮಾಣಕ್ಕೆ ಸಂಬAಧಿಸಿದAತೆ ಜಾಗದ ಸಮಸ್ಯೆಯಿಂದಾಗಿ ನಿಧಾನಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆಯ ಸಹಕಾರದೊಂದಿಗೆ ಜಾಗ ಗುರುತಿಸಿ ಶೌಚಗೃಹ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಟಿ.ಪಿ. ಹಮೀದ್, ಮೋಹಿನಿ, ಅನಂತ, ವಾಣಿ, ಮಂಗಳಾ, ನೋಡಲ್ ಅಧಿಕಾರಿ ಕೂಡಿಗೆ ಕೋಳಿ ಸಾಕಾಣಿಕೆ ಕೇಂದ್ರದ ಹಿರಿಯ ಪಶುವೈದ್ಯಾಧಿಕಾರಿ ಡಾ. ಕೆ. ನಾಗರಾಜ್, ಪಿಡಿಒ ಮಂಜುಳಾ, ಕಾರ್ಯದರ್ಶಿ ಪುನೀತ್, ಗ್ರಾಮಸ್ಥರು ಇದ್ದರು.