ಸೋಮವಾರಪೇಟೆ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಶ್ರೀಗೌರಿ ಗಣೇಶ ಸಮಿತಿ ಸಭೆಯಲ್ಲಿ ಸಮಿತಿ ಅಧ್ಯಕ್ಷ ಕೆ.ಎಸ್. ಪ್ರಕಾಶ್ ಮಾತನಾಡಿದರು. ದರ್ಶನ್, ರಾಜೀವ್ ಇದ್ದರು. 
ಕೊಡಗು

ಕೆ.ಎಸ್.ಪ್ರಕಾಶ್ ಮರು ಆಯ್ಕೆ

ಕಿರಣ್ ಗೌಡ.ಜಿ

ಸೋಮವಾರಪೇಟೆ:

ಇಲ್ಲಿನ ಪತ್ರಿಕಾಭವನದಲ್ಲಿ ಸಾರ್ವಜನಿಕರ ಶ್ರೀಗೌರಿ ಗಣೇಶ ಸಮಿತಿ ಸಭೆ ಭಾನುವಾರ ಆಯೋಜಿಸಲಾಗಿತ್ತು.

ಸಭೆಯಲ್ಲಿ ನೂತನ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಕೆ.ಎಸ್.ಪ್ರಕಾಶ್ ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ರಾಜೀವ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕೆ.ಮೋಹನ್ ಕುಮಾರ್, ಖಜಾಂಚಿಯಾಗಿ ಕೆ.ಎ.ಸಾಗರ್, ಸಹಕಾರ್ಯದರ್ಶಿಯಾಗಿ ಕಿರಣ್ ಹಾಗೂ ಗೌರವಾಧ್ಯಕ್ಷರಾಗಿ ದರ್ಶನ್ ಜೋಯಪ್ಪ ಆಯ್ಕೆಯಾದರು. ಸಭೆಯಲ್ಲಿ ಸಮಿತಿಯ ಮುಂದಿನ ಕಾರ್ಯ ಚಟುವಟಿಕೆ ಕುರಿತು ಚರ್ಚಿಸಲಾಯಿತು.