ವಿಶ್ವಸಂಸ್ಥೆಯ ಅಂತರರಾಷ್ಟಿçÃಯ ಮಾತೃಭಾಷಾ ದಿನಾಚರಣೆ ಹಿನ್ನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಬೇಡಿಕೆಗಳನ್ನು ಒಳಗೊಂಡ ಮನವಿಯಲ್ಲಿ ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್ ಅವರಿಗೆ ಸಲ್ಲಿಸಲಾಯಿತು. ಎನ್.ಯು. ನಾಚಪ್ಪ, ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಅಜ್ಜಿಕುಟ್ಟೀರ ಲೋಕೇಶ್ ಮತ್ತಿತರರು ಇದ್ದರು. 
ಕೊಡಗು

ಕೊಡವ ನ್ಯಾಷನಲ್ ಕೌನ್ಸಿಲ್ ಪ್ರತಿಭಟನೆ

ಸುನಿಲ್ ಪೊನ್ನೇಟಿ
ಮಡಿಕೇರಿ:
ವಿಶ್ವಸಂಸ್ಥೆಯ ಅಂತರರಾಷ್ಟಿçÃಯ ಮಾತೃಭಾಷಾ ದಿನಾಚರಣೆ ಹಿನ್ನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಯಿತು. ಭಾಷಾ ತಜ್ಞ ಪಂಡಿತ್ ಡಾ. ಸೀತಕಾಂತ್ ಮಹಾಪಾತ್ರ ಆಯೋಗದ ವರದಿಯ ಶಿಫಾರಸ್ಸಿನಂತೆ ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈ ಸಂದರ್ಭ ಮಂಡಿಸಲಾಯಿತು.
ಈಗಾಗಲೇ ಪರಿಗಣಿಸಲ್ಪಟ್ಟ ಕೊಂಕಣಿ ಮತ್ತು ಪರಿಗಣನೆಯ ಹಂತದಲ್ಲಿರುವ ತುಳು ಪ್ರಸ್ತಾವನೆಯಂತೆಯೇ, ಸಂವಿಧಾನದ 345 ನೇ ವಿಧಿಯಡಿ ಕೊಡವ ತಕ್ ಅನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಗುರುತಿಸಬೇಕು. ಕೊಡವರ ಕುರಿತಾದ ನೈಜ ಚರಿತ್ರೆ ತಿರುಚಿ ಸುಳ್ಳು ಚರಿತ್ರೆ ಸೃಷ್ಟಿಸಿದವರ ವಿರುದ್ಧ ಕ್ರಮ ಜರುಗಿಸಬೇಕು. ಕೊಡವ ಜನಾಂಗೀಯ ಗುರುತು, ಕೊಡವ ಜಾನಪದ ಹಿನ್ನೆಲೆ, ಭಾಷಾಲೋಕ ಹಾಗೂ ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿ ಆರಾಧಕ ಕೊಡವರ ಸ್ವಾಭಿಮಾನ ಮತ್ತು ಅಸ್ತಿತ್ವವು ಬರುವ 2027 ರ ರಾಷ್ಟ್ರೀಯ ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ಮತ್ತು ಕಲಂ ಮೂಲಕ ಸಾಂವಿಧಾನಿಕವಾಗಿ ದಾಖಲಾದಾಗ ಮಾತ್ರ ನಿರ್ಧರಿಸಲ್ಪಡುವುದರಿಂದ 2027ರ ರಾಷ್ಟಿçÃಯ ಜನಗಣತಿಯಲ್ಲಿ ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿಯ ಆರಾಧಕರಾದ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ನೀಡಬೇಕು ಎಂದು ಒತ್ತಾಯಿಸಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಿಎನ್‌ಸಿ ಮುಖಂಡ ಎನ್.ಯು. ನಾಚಪ್ಪ, ಕಳೆದ 36 ವರ್ಷಗಳಿಂದ ಸಿಎನ್‌ಸಿ ಸಂಘಟನೆ ಕೊಡವಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ. ಸ್ವರಾಜ್ಯ, ಸ್ವಯಂ ನಿರ್ಣಯದ ಹಕ್ಕುಗಳು, ಎಸ್‌ಟಿ ವರ್ಗೀಕರಣ ಮತ್ತು ಕೊಡವರಿಗೆ ವಿಶ್ವಸಂಸ್ಥೆಯ ಆದಿಮಸಂಜಾತ ಬುಡಕಟ್ಟು ಮಾನ್ಯತೆಗಾಗಿ ಸತತವಾಗಿ ಮತ್ತು ಶಾಂತಿಯುತವಾಗಿ ಹೋರಾಡಲಾಗುತ್ತಿದೆ. ಆರಂಭದಿAದಲೂ ಪ್ರತಿ ವರ್ಷ ಅಂತರರಾಷ್ಟಿçÃಯ ಮಾತೃಭಾಷಾ ದಿನದಂದು ತನ್ನ ಆಕಾಂಕ್ಷೆಗಳು ಮತ್ತು ಬೇಡಿಕೆಗಳನ್ನು ಪುನಶ್ಚೇತನಗೊಳಿಸಲು ಮತ್ತು ನೋಂದಾಯಿಸಲು ಕಾರ್ಯಕ್ರಮಗಳನ್ನು ನಡೆಸುತ್ತಿದೆ, ಅಲ್ಲದೆ ಪ್ರಮುಖ ನಿರ್ಣಯಗಳನ್ನು ಅಂಗೀಕರಿಸುತ್ತಿದೆ ಎಂದರು.
ಈ ಸಂದರ್ಭ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.