ಮಡಿಕೇರಿ ಕೊಡಗು ವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತರಶಾಲಾ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ 2025-26ಕ್ಕೆ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ಮಲ್ಲೆಂಗಡ ರಚನ್ ಪೊನ್ನಪ್ಪ ಚಾಲನೆ ನೀಡಿದರು. ಸಿ.ಎಸ್. ಗುರುದತ್, ಹರಿಶಂಕರ್, ಕೆ.ಎಸ್. ಸುಮಿತ್ರಾ, ಪಿ. ರವಿ ಮತ್ತಿತರರು ಇದ್ದರು.
ಇಲ್ಲಿನ ಕೊಡಗು ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಅಂತರಶಾಲಾ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ 2025-26 ಸೋಮವಾರ ನಡೆಯಿತು. 80 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಿದರು. ಎರಡು ವರ್ಷಗಳಿಂದ ಕೊಡಗು ವಿದ್ಯಾಲಯ ಈ ಪಂದ್ಯಾವಳಿಗೆ ಆತಿಥ್ಯ ವಹಿಸುತ್ತಾ ಬಂದಿದೆ.
ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ಮಲ್ಲೆಂಗಡ ರಚನ್ ಪೊನ್ನಪ್ಪ ದೀಪ ಬೆಳಗಿಸಿ ಪಂದ್ಯಾವಳಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಟೇಬಲ್ ಟೆನಿಸ್ ಶಿಸ್ತು, ಏಕಾಗ್ರತೆ ಮತ್ತು ಕ್ರೀಡಾತ್ಮಕತೆಯನ್ನು ಬೆಳೆಸುವ ಕ್ರೀಡೆಯಾಗಿದೆ ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದ ಶಾಲಾ ಆಡಳಿತ ಮಂಡಳಿ ನಿರ್ದೇಶಕ ಸಿ.ಎಸ್. ಗುರುದತ್ ಮಾತನಾಡಿ ಟೇಬಲ್ ಟೆನಿಸ್ ಮನಸ್ಸಿನ ಏಕಾಗ್ರತೆ ಮತ್ತು ಗಮನವನ್ನು ವೃದ್ಧಿಸುವ ಕ್ರೀಡೆ ಎಂದರು.
ಟೇಬಲ್ ಟೆನ್ನಿಸ್ ಟ್ರೈನಿಂಗ್ ಅಕಾಡೆಮಿಯ ಸಂಚಾಲಕ ಹರಿಶಂಕರ್, ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ,
ಆಡಳಿತಾಧಿಕಾರಿ ಪಿ. ರವಿ, ಶಾಲಾ ನಿರ್ವಹಣಾ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇದ್ದರು.
ಫಲಿತಾಂಶ:
14 ವರ್ಷದೊಳಗಿನ ವಿದ್ಯಾರ್ಥಿನಿಯರ ಸಿಂಗಲ್ಸ್ ವಿಭಾಗದಲ್ಲಿ ಕೊಡಗು ವಿದ್ಯಾಲಯದ ಅಮೃತಾ ನೀಲಮ್ಮ ಪ್ರಥಮ, ಇದೇ ಶಾಲೆಯ ಸಾಧನಾ ಕಾವೇರಮ್ಮ ದ್ವಿತೀಯ ಬಹುಮಾನ ಪಡೆದುಕೊಂಡರು. 14 ವರ್ಷದೊಳಗಿನ ವಿದ್ಯಾರ್ಥಿಗಳ ಸಿಂಗಲ್ಸ್ ವಿಭಾಗದಲ್ಲಿ ಮೂರ್ನಾಡುವಿನ ಮೂರ್ನಾಡು ಎಜ್ಯುಕೇಶನಲ್ ಸೊಸೈಟಿಯ ಎಂ. ವೈ. ದೇವಾರ್ಯ ಪ್ರಥಮ, ಕೂಡಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಎಚ್. ಎಸ್. ಗಗನ್ ದ್ವಿತೀಯ, 18 ವರ್ಷದೊಳಗಿನ ವಿದ್ಯಾರ್ಥಿನಿಯರ ಸಿಂಗಲ್ಸ್ ವಿಭಾಗದಲ್ಲಿ ಕೂಡಿಗೆ ಮುರಾರ್ಜಿ ದೆಸಾಯಿ ವಸತಿ ಶಾಲೆಯ ಎಂ. ಎ. ಶೀತಲ್ ಪ್ರಥಮ, ಕೊಡಗು ವಿದ್ಯಾಲಯದ ಆದ್ಯಾ ಗಂಗಮ್ಮ ದ್ವಿತೀಯ, 16 ವರ್ಷದೊಳಗಿನ ವಿದ್ಯಾರ್ಥಿಗಳ ಸಿಂಗಲ್ಸ್ ವಿಭಾಗದಲ್ಲಿ ಕೊಡಗು ವಿದ್ಯಾಲಯದ ಜಿ. ಹೆಚ್. ಅವನೀಶ್ ಕೃಷ್ಣ ಪ್ರಥಮ, ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನ ಜಿ.ಎಸ್. ಶಿಶಿರ ದ್ವಿತೀಯ ಸ್ಥಾನ ಪಡೆದುಕೊಂಡರು.
14 ವರ್ಷದೊಳಗಿನ ಡಬಲ್ಸ್ ವಿಭಾಗದಲಲ್ಲಿ ಕೂಡಿಗೆ ಮುರಾರ್ಜಿ ದೆಸಾಯಿ ವಸತಿ ಶಾಲೆಯ ಎಚ್. ಎಂ. ಶಶಾಂಕ್ ಮತ್ತು ಎಚ್. ಎಸ್. ಗಗನ್ ಒರಥಮ, ಕೊಡಗು ವಿದ್ಯಾಲಯದ ಎನ್. ನಿರಂಜನ್ ಮತ್ತು ಆರ್. ಫೆಲಿಕ್ಸ್ ರೋನಾಲ್ಡ್ ದ್ವಿತೀಯ, 18 ವರ್ಷದೊಳಗಿನ ವಿದ್ಯಾರ್ಥಿನಿಯರ ಡಬಲ್ಸ್ ವಿಭಾಗದಲ್ಲಿ ಕೂಡಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಎಂ. ಎ. ಶೀತಲ್ ಮತ್ತು ಎಸ್. ಪಿ. ಪ್ರಕೃತಿ ಪ್ರಥಮ, ಕೊಡಗು ವಿದ್ಯಾಲಯದ ಆದ್ಯಾ ಗಂಗಮ್ಮ ಮತ್ತು ಅಮೃತಾ ನೀಲಮ್ಮ ದ್ವಿತೀಯ, 16 ವರ್ಷದೊಳಗಿನ ಬಾಲಕರ ಡಬಲ್ಸ್ ವಿಭಾಗದಲ್ಲಿ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನ ಎಸ್. ಗಗನ್ ಮತ್ತು ಕೆ. ಕೌಶಿಕ್ ಪ್ರಥಮ, ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನ ಜಿ. ಎಸ್. ಶಿಶಿರ ಮತ್ತು ಎಂ. ವೈ. ಆರೋನ್ ದ್ವಿತೀಯ ಬಹುಮಾನಕ್ಕೆ ಪಾತ್ರರಾದರು.