ಕೊಡಗು ವಿಶ್ವವಿದ್ಯಾಲಯದ 2025-26ನೇ ಸಾಲಿನ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಬಿ.ಎಡ್ ಪದವಿ ಪರೀಕ್ಷಾ ಫಲಿತಾಂಶವನ್ನು ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಪ್ರಕಟಿಸಿದರು. ಡಾ. ಸುರೇಶ್ ಎಂ., ವಿಶೇಷಾಧಿಕಾರಿ (ಪರೀಕ್ಷಾಂಗ) ಪ್ರೊ. ರವಿಶಂಕರ್ ಎಂ.ಎನ್. ಮತ್ತು ಯುಯುಸಿಎಂಎಸ್ ಸಿಬ್ಬಂದಿ ಇದ್ದರು. 
ಕೊಡಗು

ಕೊಡಗು ವಿವಿ ಬಿಎಡ್ ಫಲಿತಾಂಶ ಪ್ರಕಟ

ಸುನಿಲ್ ಪೊನ್ನೇಟಿ
ಮಡಿಕೇರಿ:
ಕೊಡಗು ವಿಶ್ವವಿದ್ಯಾಲಯದ 2025-26ನೇ ಸಾಲಿನ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಬಿ.ಎಡ್ ಪದವಿ ಪರೀಕ್ಷಾ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದೆ. ಪರೀಕ್ಷೆಯ ಮೌಲ್ಯಮಾಪನ ಪೂರ್ಣವಾಗಿ ಎರಡು ದಿನದಲ್ಲಿ ಅತೀ ಶೀಘ್ರವಾಗಿ ವಿಶ್ವವಿದ್ಯಾಲಯ ಫಲಿತಾಂಶ ಪ್ರಕಟಿಸಿದೆ. ಜುಲೈ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ವಿರಾಜಪೇಟೆಯ ಸರ್ವೋದಯ ಬಿ.ಎಡ್ ಕಾಲೇಜು ಮತ್ತು ಪೊನ್ನಂಪೇಟೆಯ ಸಾಯಿ ಶಂಕರ್ ಕಾಲೇಜುಗಳ ಒಟ್ಟು 200 ವಿದ್ಯಾರ್ಥಿಗಳು ಹಾಜರಾಗಿದ್ದರು.
ಮೌಲ್ಯಮಾಪನ ಪ್ರಕ್ರಿಯೆಯನ್ನು ಘಟಕ ಮಹಾವಿದ್ಯಾಲಯ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆಸಲಾಯಿತು. ಜಿಲ್ಲೆಯ ಮೌಲ್ಯಮಾಪಕರು ಸಕ್ರಿಯವಾಗಿ ಭಾಗವಹಿಸಿ ಮೌಲ್ಯಮಾಪನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಸೆಮಿಸ್ಟರ್ ಪರೀಕ್ಷೆಗಳಿಗೆ ಸಂಬAಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕ ಯಶಸ್ವಿಯಾಗಿ ನಡೆಸಲಾಗಿದ್ದು, ಬಿ.ಎಡ್ ಪದವಿ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶವನ್ನು ಯುಯುಸಿಎಂಎಸ್ ಅಥವಾ ಕೊಡಗು ವಿಶ್ವವಿದ್ಯಾಲಯದ ವೆಬ್‌ಸೈಟ್ ಮುಖಾಂತರ ಪಡೆಯಲು ಲಭ್ಯವಿದೆ.
ಪರೀಕ್ಷಾ ಫಲಿತಾಂಶವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಪ್ರಕಟಿಸಿದರು. ಕೊಡಗು ವಿವಿ ಕುಲಸಚಿವರು (ಮೌಲ್ಯಮಾಪನ) ಡಾ. ಸುರೇಶ್ ಎಂ., ವಿಶೇಷಾಧಿಕಾರಿ (ಪರೀಕ್ಷಾಂಗ) ಪ್ರೊ. ರವಿಶಂಕರ್ ಎಂ.ಎನ್. ಮತ್ತು ಯುಯುಸಿಎಂಎಸ್ ಸಿಬ್ಬಂದಿ ಉಪಸ್ಥಿತರಿದ್ದರು.