ಕೊಡಗು ಗೌಡ ಯುವ ವೇದಿಕೆ ಆಡಳಿತ ಮಂಡಳಿ ನೂತನ ಸದಸ್ಯರು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬಾಲಾಡಿ ಮನೋಜ್, ಪರಿಚನ ಸತೀಶ್, ಪುದಿಯನೆರವನ ರಿಷಿತ್ ಮಾದಯ್ಯ, ಕೆದಂಬಾಡಿ ಕಾಂಚನ, ನವೀನ್ ದೇರಳ, ಸೋನಿ, ಕವನ್ ಕೊತ್ತೋಳಿ, ಕುಟ್ಟನ ಪ್ರಶಾಂತ್, ಪಟ್ಟಡ ದೀಪಕ್ ಮತ್ತಿತರರು ಇದ್ದರು.
ಕೊಡಗು ಗೌಡ ಯುವ ವೇದಿಕೆ ಆಡಳಿತ ಮಂಡಳಿ ನೂತನ ಸದಸ್ಯರು ಅಧ್ಯಕ್ಷ ಬಾಲಾಡಿ ಮನೋಜ್ ನೇತೃತ್ವದಲ್ಲಿ ಮಂಗಳವಾರ ಕುಶಾಲನಗರದಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರನ್ನು ಭೇಟಿ ಆಗಿದ್ದರು. ಏಪ್ರಿಲ್ ತಿಂಗಳಲ್ಲಿ ನಡೆಯುವ ಕ್ರೀಡೆಯ ಕುರಿತು ಈ ಸಂದರ್ಭ ಚರ್ಚೆ ನಡೆಸಲಾಯಿತು.
ಗೌಡ ಯುವ ವೇದಿಕೆ ವತಿಯಿಂದ ನಡೆಯುವ ಒಲಿಂಪಿಕ್ ಮಾದರಿಯ ಕ್ರೀಡಾ ಕೂಟದ ಬಗ್ಗೆ ಮಾಹಿತಿ ನೀಡಿದ ಸಮಿತಿ ಸದಸ್ಯರು ಈ ಬಾರಿ ಕೊಡಗು ಗೌಡ ಯುವ ವೇದಿಕೆಯ ನೇತೃತ್ವದಲ್ಲಿ ಏ.27 ರಿಂದ ಮೇ 17ರ ವರೆಗೆ ಗೌಡ ಸಮುದಾಯಗಳ ನಡುವೆ ಕುಟುಂಬವಾರು ಟೆನಿಸ್ ಬಾಲ್ ಕ್ರಿಕೆಟ್ ಮತ್ತು ಮೊದಲ ವರ್ಷದ ರಿಂಕ್ ಹಾಕಿ, ಶೂಟಿಂಗ್, ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯತೆಯ ಪೈಪೋಟಿ, ಮಿಸ್ಟರ್ ಗೌಡ, ಮಿಸ್ ಗೌಡತಿ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಗಳಿಗೆ ಶಾಸಕರ ಸಹಕಾರದ ಕುರಿತು ಮನವಿ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಮಂತರ್ ಗೌಡ ಕ್ರೀಡೆಯ ಜತೆಗೆ ಶಿಕ್ಷಣ ಕ್ಷೇತ್ರಕ್ಕೂ ಸಹಕಾರ ನೀಡುವಂತೆ ತಿಳಿಸಿದ್ದು ವೇದಿಕೆಯ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಭರವಸೆ ನೀಡಿದರು.
ಉಪಾಧ್ಯಕ್ಷ ಪರಿಚನ ಸತೀಶ್, ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ಹಾಗೂ ಕೆದಂಬಾಡಿ ಕಾಂಚನ, ಖಜಾಂಜಿ ನವೀನ್ ದೇರಳ, ಸಹ ಕಾರ್ಯದರ್ಶಿ ಸೋನಿ ಹಾಗೂ ಕವನ್ ಕೊತ್ತೋಳಿ, ಕ್ರೀಡಾಧ್ಯಕ್ಷ ಕುಟ್ಟನ ಪ್ರಶಾಂತ್, ಶಿಸ್ತು ಸಮಿತಿ ಅಧ್ಯಕ್ಷ ಪಟ್ಟಡ ದೀಪಕ್ ಹಾಗೂ ನಿರ್ದೇಶಕರುಗಳಾದ ಅನುದೀಪ್ ಕಲ್ಲುಮುಟ್ಲು, ಜೈನಿರಾ ಲೋಹಿತ್, ಮುದಿಯಾರ್ ಗಣೇಶ್, ಪ್ರಚಾರ ಸಮಿತಿಯ ಮಾಗುಲು ಲೋಹಿತ್ ಹಾಗೂ ವಿನೋದ್ ಮೂಡಗದ್ದೆ ಇದ್ದರು.