ದೇಶದಲ್ಲಿ ಸ್ವಚ್ಛ ಗಾಳಿ ಹೊಂದಿರುವ ಪ್ರದೇಶಗಳ ಪಟ್ಟಿಯಲ್ಲಿ ಮಡಿಕೇರಿ ಈ ಬಾರಿ 3ನೇ ಸ್ಥಾನ ಪಡೆದುಕೊಂಡಿದೆ
- ಕಳೆದ ನವೆಂಬರ್‌ನಲ್ಲಿ ಮೊದಲನೇ ಸ್ಥಾನ
- ಈ ನವೆಂಬರ್‌ನಲ್ಲಿ 3ನೇ ಸ್ಥಾನಕ್ಕೆ ಇಳಿಕೆ
- ಗಾಳಿ ಗುಣಮಟ್ಟದ ಬಗ್ಗೆ ಸ್ಥಳೀಯರ ಆತಂ
ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಹೊಂದಿರುವ ಸ್ಥಳಗಳ ಪಟ್ಟಿಯಲ್ಲಿ ಮಡಿಕೇರಿ ಈ ವರ್ಷ ಸ್ವಲ್ಪ ಕೆಳಕ್ಕೆ ಇಳಿದಿದೆ. ಈ ವಿಷಯದಲ್ಲಿ 2024ರಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದ್ದ ಮಂಜಿನ ನಗರಿ ಈ ಬಾರಿ 3 ಸ್ಥಾನಕ್ಕೆ ಜಾರಿದೆ. ಮತ್ತೊಂದು ಕಡೆ ಪ್ರವಾಸೋದ್ಯಮಿಗಳು ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿದ್ದು, ಸ್ವಚ್ಛ ಪರಿಸರದಲ್ಲಿ ಶುದ್ಧ ಗಾಳಿಯ ಅನುಭವ ಪಡೆಯಲು ಕೊಡಗಿನ ಕಡೆಗೆ ಬನ್ನಿ ಎಂದು ಪ್ರಚಾರ ಶುರು ಮಾಡಿದ್ದಾರೆ.
ವಾಯು ಗುಣಮಟ್ಟ (ಎಕ್ಯೂಐ) ಸೂಚ್ಯಂಕ ಪ್ರಮಾಣ ಆಧಾರದಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸ್ವಚ್ಛ ಗಾಳಿ ಹೊಂದಿರುವ ಸ್ಥಳಗಳನ್ನು ಗುರುತಿಸುತ್ತದೆ. ಸ್ಥಳೀಯ ಹವಾಮಾನ, ಜನರ ಓಡಾಟ, ವಾಹನಗಳ ದಟ್ಟಣೆ, ಪಟಾಕಿ ಸೇರಿದಂತೆ ಸ್ಫೋಟಕಗಳ ಬಳಕೆ ಮತ್ತಿತರ ಕಾರಣಗಳಿಂದ ವಾಯು ಗುಣಮಟ್ಟ (ಎಕ್ಯೂಐ) ಸೂಚ್ಯಂಕ ಪ್ರಮಾಣ ಆಗಾಗ್ಗೆ ಬದಲಾಗುತ್ತಲೇ ಇರುತ್ತದೆ.
ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯುಮಾಲಿನ್ಯ ಮಾಪನಾ ಕೇಂದ್ರ ಇದ್ದು ಗಾಳಿಯಲ್ಲಿನ ಪ್ರತಿP್ಷÀಣದ ಬದಲಾವಣೆಗಳು ಇಲ್ಲಿ ದಾಖಲಾಗುತ್ತದೆ. ಇಲ್ಲಿಯ ವಿವರಗಳು ಮಂಡಳಿಯ ವೆಬ್‌ಸೈಟ್‌ನಲ್ಲಿ P್ಷÀಣ P್ಷÀಣಕ್ಕೂ ಸಿಗುತ್ತದೆ. ಜತೆಗೆ ದೈನಂದಿನ ವಿವರಗಳೂ ದೊರೆಯುತ್ತದೆ. ವಾಯುವಿನ ಗುಣಮಟ್ಟ, ಸೇರಿಕೊಂಡಿರುವ ರಾಸಾಯನಿಕ ಅಂಶಗಳು ಮತ್ತಿತರ ಮಾಹಿತಿಗಳೂ ಈ ವೆಬ್‌ಸೈಟ್‌ನಲ್ಲಿ ಲಭ್ಯ. ಇದರ ಆಧಾರದಲ್ಲಿ ಸ್ವಚ್ಛ ಗಾಳಿ ಹೊಂದಿರುವ ನಗರಗಳನ್ನು ಗುರುತಿಸಲಾಗುತ್ತದೆ. ಕಳೆದ ವರ್ಷ ನವೆಂಬರ್‌ನಲ್ಲಿ ಈ ವಿಷಯದಲ್ಲಿ ನಂಬರ್ 1ರ ಸ್ಥಾನದಲ್ಲಿ ಇದ್ದ ಮಡಿಕೇರಿ ಈ ವರ್ಷ 3ನೇ ಸ್ಥಾನಕ್ಕೆ ಇಳಿದಿದೆ.
ವಾಯು ಗುಣಮಟ್ಟ (ಎಕ್ಯೂಐ) ಸೂಚ್ಯಂಕ 12ರಷ್ಟಿರುವ ಮೇಘಾಲಯದ ಶಿಲ್ಲಾಂಗ್ ಈ ವರ್ಷ ಮೊದಲ ಸ್ಥಾನ ಪಡೆದುಕೊಂಡಿದೆ. ಮಿಜೋರಾಂನ ಐಜ್ವಾಲ್‌ನಲ್ಲಿ ಎಕ್ಯೂಐ 13ರಷ್ಟಿದ್ದು 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನ ಪಡೆದುಕೊಂಡಿರುವ ಮಡಿಕೇರಿಯಲ್ಲಿ ಎಕ್ಯೂಐ 12-20ರಷ್ಟಿದೆ. 4ನೇ ಸ್ಥಾನವನ್ನು ಕರ್ನಾಟಕದ ಗೋಕರ್ಣ ಪಡೆದುಕೊಂಡಿದ್ದು ಇಲ್ಲಿಯ ಎಕ್ಯೂಐ 33ರಷ್ಟು ದಾಖಲಾಗಿದೆ. 5ನೇ ಸ್ಥಾನದಲ್ಲಿ ತಮಿಳುನಾಡುವಿನ ತಿರುನಲ್ವೇಲಿ ಇದೆ. ಇಲ್ಲಿಯ ಎಕ್ಯೂಐ 33ರಷ್ಟು ಕಂಡು ಬಂದಿದೆ. 2023ರಲ್ಲಿ ಮಡಿಕೇರಿ 5ನೇ ಸ್ಥಾನದಲ್ಲಿತ್ತು.
ರಾಷ್ಟç ರಾಜಧಾನಿ ನವದೆಹಲಿ ವಾಯುಮಾಲಿನ್ಯದಿಂದ ನಲುಗುತ್ತಿದೆ. ಇಲ್ಲಿನ ನಿವಾಸಿಗಳು ಉಸಿರಾಡಲು ಕೂಡ ಕಷ್ಟಪಡುವ ಸ್ಥಿತಿ ಇದೆ. ಪರಿಸ್ಥಿತಿ ಎದುರಿಸುವ ಸಲುವಾಗಿ ಶಾಲೆಗಳಿಗೆ ರಜೆ ಘೋಷಣೆ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನವದೆಹಲಿಯಲ್ಲಿ ಈ ವರ್ಷದ ನ.13ರ ಬೆಳಗ್ಗೆ 7 ಗಂಟೆಗೆ ವಾಯು ಗುಣಮಟ್ಟ (ಎಕ್ಯೂಐ) ಸೂಚ್ಯಂಕ 562ರಷ್ಟು ದಾಖಲಾಗಿತ್ತು. ಶನಿವಾರ ಈ ಪ್ರಮಾಣ 325-489ರ ನಡುವಿನಲ್ಲಿತ್ತು. ಶುದ್ಧ ಗಾಳಿಯ ಮಡಿಕೇರಿಯಲ್ಲಿ ಎಕ್ಯೂಐ ಶನಿವಾರ 44-66ರ ಮಧ್ಯೆ ಕಂಡು ಬಂದಿತ್ತು. ಇದರಿಂದ ದೆಹಲಿಯ ಮಾಲಿನ್ಯದ ಪ್ರಮಾಣವನ್ನು ಊಹಿಸಬಹುದಾಗಿದೆ.
ಮಡಿಕೇರಿಯಲ್ಲಿ ಗಾಳಿಯಲ್ಲಿರುವ ಮಾಲಿನ್ಯ ಪ್ರಮಾಣ 2021ರ ನವೆಂಬರ್‌ನಲ್ಲಿ 3-22ರಷ್ಟು ದಾಖಲಾಗಿತ್ತು. 2022ರ ನವೆÀಂಬರ್‌ನಲ್ಲಿ ಈ ಪ್ರಮಾಣ 12-28ರ ಮಧ್ಯೆ ಇತ್ತು. 2023ರ ನವೆಂಬರ್‌ನಲ್ಲಿ ಮಡಿಕೇರಿಯಲ್ಲಿ ವಾಯು ಗುಣಮಟ್ಟ (ಎಕ್ಯೂಐ) ಸೂಚ್ಯಂಕ 30-57ರ ಮಧ್ಯೆ ದಾಖಲಾಗಿತ್ತು. ಕಳೆದ ವರ್ಷ 2-12ರ ಮಧ್ಯೆ ಇತ್ತು. ಈ ವರ್ಷ ಎಕ್ಯೂಐ 12-20ರಷ್ಟಿದ್ದು ಬದಲಾವಣೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.
ವಾಯು ಗುಣಮಟ್ಟ ಅಳೆಯಲು ಎಕ್ಯೂಐ ಸೂಚಕ ಬಳಸಲಾಗುತ್ತದೆ. ಮನುಷ್ಯರ ಆರೋಗ್ಯ ಮತ್ತು ವಾತಾವರಣದ ಮೇಲೆ ಉಂಟಾಗುವ ವಾಯುಮಾಲಿನ್ಯದ ಪರಿಣಾಮಗಳ ಬಗ್ಗೆ ಈ ಸೂಚಕದಿಂದ ತಿಳಿಯಬಹುದು. ಗಾಳಿಯಲ್ಲಿರುವ ಓಝೋನ್, ಸಣ್ಣ ಕಣಗಳಿಂದಾದ ವಸ್ತುಗಳು, ಸಾರಜನಕ ಡೈ ಆಕ್ಸೆöÊಡ್ ಕಾರ್ಬನ್ ಮಾನಾಕ್ಸೆöÊಡ್ ಸಲರ್ ಡೈ ಆಕ್ಸೆöÊಡ್ ಹಾಗೂ ಸಲರ್ ಸಂಯುಕ್ತಗಳAತಹ ಮಾಲಿನ್ಯಗಳ ಬಗ್ಗೆ ಎಕ್ಯೂಐ ಸೂಚ್ಯಂಕದಿAದ ಮಾಹಿತಿ ಪಡೆಯಬಹದು. 0-50ರ ನಡುವಿನ ವಾಯು ಗುಣಮಟ್ಟ (ಎಕ್ಯೂಐ) ಸೂಚ್ಯಂಕವನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. 51-100ರ ಮಧ್ಯೆ ಎಕ್ಯೂಐ ಇದ್ದರೆ ಸಮಧಾನಕರ ಎಂದು ಪರಿಗಣಿಸಿದರೂ ಸೂಕ್ಷö್ಮ ಆರೋಗ್ಯ ಹೊಂದಿರುವವರಲ್ಲಿ ಸಹಜ ಉಸಿರಾಟಕ್ಕೆ ಸ್ವಲ್ಪ ಸಮಸ್ಯೆ ಆಗಬಹುದು. 101-200 ಎಕ್ಯೂಐ ಪ್ರಮಾಣವನ್ನು ಮಧ್ಯಮ ಗುಣಮಟ್ಟ ಎಂದು ಗುರುತಿಸಲಾಗಿದ್ದು ಶ್ವಾಸಕೋಶ, ಆಸ್ತಮಾ ಹಾಗೂ ಹೃದಯ ಸಂಬAಧಿ ಕಾಯಿಲೆ ಇರುವವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. 201-300 ಎಕ್ಯೂಐ ಇದ್ದರೆ ಗಾಳಿಯ ಗುಣಮಟ್ಟ ಕೆಟ್ಟಿರುವುದನ್ನು ಸೂಚಿಸುತ್ತದೆ. ಈ ವಾತಾವರಣದಲ್ಲಿ ದೀರ್ಘಕಾಲದವರೆಗೆ ಇದ್ದಾಗ ಬಹುತೇಕರಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ. 301-400 ಎಕ್ಯೂಐ ಇದ್ದರೆ ಗಾಳಿಯ ಗುಣಮಟ್ಟ ಸಂಪೂರ್ಣ ಕುಸಿದಿರುವುದಾಗಿ ಪರಿಗಣಿಸಲಾಗುತ್ತದೆ. ಇದರಿಂದಾಗಿ ಉಸಿರಾಟದ ಕಾಯಿಲೆಗಳು ಶುರುವಾಗುತ್ತದೆ. 401-500 ಎಕ್ಯೂಐ ಇದ್ದರೆ ಸಮಸ್ಯೆ ಗಂಭೀರವಾಗಿದೆ ಎಂದು ಅರ್ಥ. ಈ ವಾತಾವರಣ ಆರೋಗ್ಯವಂತ ಜನರ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ರೋಗಗಳಿರುವವರಲ್ಲಿ ಗಂಭೀರ ಸಮಸ್ಯೆಗಳು ಉಂಟಾಗುತ್ತದೆ.
ಕೊಡಗಿನ ಹಸಿರು ಪರಿಸರ, ಪರಿಶುದ್ಧ ಗಾಳಿ, ಝುಳು ಝುಳು ನೀರು ಪ್ರವಾಸಿಗರಿಗೆ ಅಚ್ಚುಮೆಚ್ಚು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಇಂತಹ ವಾತಾವರಣ ಕಂಡು ಬರುತ್ತದೆ. ಆದರೆ ನಗರ ಪ್ರದೇಶ, ಪ್ರವಾಸಿತಾಣಗಳಲ್ಲಿ ದಿನಕಳೆದಂತೆ ಪರಿಸ್ಥಿತಿ ಬದಲಾಗುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗಿನಲ್ಲಿ ಗಾಳಿಯ ಗುಣಮಟ್ಟ ವರ್ಷದ ಬಹುತೇಕ ದಿನಗಳಲ್ಲಿ ಉತ್ತಮ ಎಂದೇ ದಾಖಲಾಗುತ್ತಿದೆ. ಇದೀಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿ ಪ್ರಕಾರ ದೇಶದ 5 ಪರಿಶುದ್ಧ ಗಾಳಿ ಇರುವ ಪ್ರದೇಶದಲ್ಲಿ ಮಡಿಕೇರಿ 3 ಸ್ಥಾನ ಪಡೆದುಕೊಂಡಿದೆ. ದೆಹಲಿಯಂಥ ಮಹಾನಗರಗಳಿಗೆ ಹೋಲಿಸಿದರೆ ಸ್ಥಳೀಯರು ಉತ್ತಮ ಗುಣಮಟ್ಟದ ಗಾಳಿ ಉಸಿರಾಡುತ್ತಿದ್ದಾರೆ. ಪ್ರವಾಸಿ ಜಿಲ್ಲೆ ಕೊಡಗಿನಲ್ಲಿ ಈಗ ಈ ವಿಷಯವನ್ನೂ ಪ್ರವಾಸಿ ಆಕರ್ಷಣೆಯಾಗಿ ಬಳಸಿಕೊಳ್ಳಲಾಗುತ್ತಿದೆ. ಉತ್ತಮ ಗಾಳಿಯ ಉಸಿರಾಟದ ಅನುಭವ ಪಡೆಯಲು ನಮ್ಮಲ್ಲಿಗೆ ಬನ್ನಿ ಎನ್ನುವ ರೀತಿಯಲ್ಲಿ ಆಕರ್ಷಕ ಜಾಹೀರಾತುಗಳನ್ನು ಸೃಷ್ಟಿಸಿ ಸ್ಥಳೀಯ ರೆಸಾರ್ಟ್ ಸೇರಿದಂತೆ ಪ್ರವಾಸೋದ್ಯಮಿಗಳು ವಿವಿಧ ಮಾಧ್ಯಮಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಕೊಡಗಿನಂಥ ಹೆಚ್ಚು ಚಳಿ ಇರುವ ಪ್ರದೇಶದಲ್ಲಿ ಚಳಿಗಾಲದ ಸಂದರ್ಭ ವಾಯು ಗುಣಮಟ್ಟ (ಎಕ್ಯೂಐ) ಸೂಚ್ಯಂಕ ಕಡಿಮೆ ತೋರಿಸುವುದು ಸಹಜ.. ಬೇಸಿಗೆಯಲ್ಲಿ ವಾತಾವರಣದಲ್ಲಿ ಧೂಳಿನ ಕಣಗಳು ಹೆಚ್ಚು ಇರುವ ಸಂದರ್ಭ ಎಕ್ಯೂಐ ಹೆಚ್ಚಾಗುತ್ತದೆ. ವಿಲೋಮ ಪರಿಣಾಮದಿಂದ ಹೀಗಾಗುತ್ತದೆ. ಮಳೆ, ಮಂಜು ಕೂಡ ಎಕ್ಯೂಐ ಬದಲಾವಣೆ ಮೇಲೆ ಪರಿಣಾಮ ಬೀರುತ್ತದೆ. ಮಾಲಿನ್ಯ ಸೂಸುವ ದೊಡ್ಡ ಪ್ರಮಾಣದ ಕೈಗಾರಿಕೆಗಳು ಜಿಲ್ಲೆಯಲ್ಲಿ ಇಲ್ಲ. ಹಾಗಾಗಿ ಇಲ್ಲಿನ ಎಕ್ಯೂಐ ಮೇಲೆ ಮಾಲಿನ್ಯದ ಹೊಡೆತ ಆಗುವುದಿಲ್ಲ.
ಸುಂದರ ಪ್ರಕೃತಿ ಸಿರಿಯ ಮಡಿಕೇರಿಯ ಗಾಳಿ ಪರಿಶುದ್ಧವಾಗಿದೆ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಕಳೆದ ವರ್ಷ ನಂಬರ್ 1 ಸ್ಥಾನದಲ್ಲಿ ಇದ್ದ ಮಡಿಕೇರಿ ಈ ವರ್ಷ 3ನೇ ಸ್ಥಾನಕ್ಕೆ ಇಳಿದಿರುವುದು ಸ್ವಲ್ಪ ಬೇಸರದ ವಿಷಯ. ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಈ ಮೂಲಕ ಇಲ್ಲಿನ ಪ್ರಾಕೃತಿಕ ಸಂಪತ್ತನ್ನು ಕಾಪಾಡಿಕೊಂಡು ಬರೋಣ. ಅರಣ್ಯ ನಾಶ ಮಾಡದೇ ಉಳಿಸಿ ಬೆಳೆಸೋಣ. ಗಾಳಿಯೊಂದಿಗೆ ನೆಲ, ಜಲವನ್ನೂ ಕಾಪಾಡಿಕೊಳ್ಳುವ ಸಂಕಲ್ಪ ನಮ್ಮದಾಗಲಿ