ಗೋಣಿಕೊಪ್ಪನಲ್ಲಿರುವ ಕೂರ್ಗ್ ಪಬ್ಲಿಕ್ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು. ಕೀಕಿರ ಧನ್ಯ ಸುಬ್ಬಯ್ಯ, ಶಾಲ ಶಿಕ್ಷಕ ವೃಂದ, ಪಾಲಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. 
ಕೊಡಗು

ಕೊಡಗು ಜಿಲ್ಲೆ ಸಂಸ್ಕೃತಿ, ಶಿಸ್ತು, ಸೇವೆಗೆ ಹೆಸರುವಾಸಿ

ಪ್ರಮುಖ ಮುಖ್ಯಾಂಶಗಳು

  • ಕೊಡಗು ವಿವಿ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರು ಅಭಿಮತ
  • ಪದವಿ ಪ್ರದಾನ ಕಾರ್ಯಕ್ರಮ
ಪೊನ್ನಂಪೇಟೆ: ಪದವಿ ಪ್ರದಾನ ಕಾರ್ಯಕ್ರಮ ಕೇವಲ ಶೈಕ್ಷಣಿಕ ಮೈಲಿಗಲ್ಲಷ್ಟೇ ಅಲ್ಲ, ಯುವ ಮನಸುಗಳ ಜೀವನ ಯಾತ್ರೆಯ ಮಹತ್ವದ ತಿರುವು ಕೂಡ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರು ಹೇಳಿದರು.
ಗೋಣಿಕೊಪ್ಪನಲ್ಲಿರುವ ಕೂರ್ಗ್ ಪಬ್ಲಿಕ್ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕೊಡಗು ಜಿಲ್ಲೆ ದೇಶದಲ್ಲಿ ವಿಶೇಷ ಸಂಸ್ಕೃತಿ, ಶಿಸ್ತು, ಸೇವೆಗೆ ಹೆಸರುವಾಸಿಯಾಗಿದೆ. ಕೊಡಗಿನವರ ಸಾಧನೆ, ಪರಿಶ್ರಮ, ಸಹನಶೀಲತೆ ಪರಾಕಾಷ್ಠೆಯ ಪ್ರತೀಕವಾಗಿದೆ. ಪದವಿ ಪಡೆಯುವುದು ಪರೀಕ್ಷೆ, ಯಶಸ್ಸಿಗಿಂತಲೂ ಆವಿಷ್ಕಾರಗಳ ಸಂಕೇತವಾಗಬೇಕು ಎಂದು ಹೇಳಿದರು.
ಪ್ರಾಂಶುಪಾಲ ಡಾ.ಎಂ. ರಾಮಚಂದ್ರನ್, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಶುಭ ಕೋರಿದರು. ನಂತರ ವಿದ್ಯಾರ್ಥಿಗಳಿಂದ ಗೀತ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕೀಕಿರ ಧನ್ಯ ಸುಬ್ಬಯ್ಯ, ಶಾಲ ಶಿಕ್ಷಕ ವೃಂದ, ಪಾಲಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.