ಕುಶಾಲನಗರಲ್ಲಿ ರಕ್ತದಾನ ಶಿಬಿರವನ್ನು ತಹಸೀಲ್ದಾರ್ ಕಿರಣ್ ಜಿ.ಗೌರಯ್ಯ ಉದ್ಘಾಟಿಸಿದರು. ಜಿಲ್ಲಾಸ್ಪತ್ರೆಯ ರಕ್ತ ನಿಧಿ ಘಟಕದ ಮುಖ್ಯಸ್ಥ ಡಾ.ಕರುಂಬಯ್ಯ, ರೆಡ್‌ಕ್ರಾಸ್ ಕುಶಾಲನಗರದ ಸಭಾಪತಿ ಎಸ್.ಕೆ. ಸತೀಶ್, ಕಾರ್ಯದರ್ಶಿ ಕೆ.ಪಿ.ಚಂದ್ರಶೇಖರ್, ಸದಸ್ಯರಾದ ಮುನಿಸ್ವಾಮಿ, ಓಬಲ್ ರೆಡ್ಡಿ, ಜನಾರ್ದನ್, ಚಂದ್ರು ಇದ್ದರು.
ಕುಶಾಲನಗರ: ಪಟ್ಟಣದ ವಾಸವಿ ಸಭಾಂಗಣದಲ್ಲಿ ಕುಶಾಲನಗರ ತಾಲೂಕು ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಗುರುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ತಹಸೀಲ್ದಾರ್ ಕಿರಣ್ ಜಿ.ಗೌರಯ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾದ ಪಾತ್ರ ನಿರ್ವಹಿಸುತ್ತಿದೆ. ಜಲಪ್ರವಾಹದಂತಹ ತುರ್ತು ಸಂದರ್ಭಗಳಲ್ಲಿ ರೆಡ್‌ಕ್ರಾಸ್ ಸ್ವಯಂ ಸೇವಕರ ನಿಸ್ವಾರ್ಥ ಸೇವೆ ಅನನ್ಯವಾದುದು ಎಂದರಲ್ಲದೆ, ರಕ್ತದಾನ ಮಾಡಿದಷ್ಟೂ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು.
ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕದ ಮುಖ್ಯಸ್ಥ ಡಾ.ಕರುಂಬಯ್ಯ, ರೆಡ್‌ಕ್ರಾಸ್ ಕುಶಾಲನಗರದ ಸಭಾಪತಿ ಎಸ್.ಕೆ.ಸತೀಶ್ ಮಾತನಾಡಿದರು. ಕಾರ್ಯದರ್ಶಿ ಕೆ.ಪಿ.ಚಂದ್ರಶೇಖರ್, ಸದಸ್ಯರಾದ ಮುನಿಸ್ವಾಮಿ, ಓಬಲ್ ರೆಡ್ಡಿ, ಜನಾರ್ದನ್, ಚಂದ್ರು, ರಕ್ತ ನಿಧಿ ಘಟಕದ ಡಾ.ಅನನ್ಯಾ, ಡಾ.ಅನಿಲ್, ಶುಶ್ರೂಷಕ ಅಧಿಕಾರಿ ಸೌಮ್ಯಾ, ಕಾರ್ತಿಕ್, ಪೂರ್ಣಿಮ, ಪಂಚಲಿಂಗೇಶ್ವರಿ ಇದ್ದರು.