ಇಲ್ಲಿನ ಡೆಕ್ಕನ್ ಯೂತ್ ಕ್ಲಬ್‌ನಿಂದ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯದಲ್ಲಿ ಟೌನ್ ಟೈಗರ್ ತಂಡ ಪ್ರಶಸ್ತಿಯನ್ನು ಮಡಿಗೇರಿಸಿಕೊಂಡಿತು.
ನಾಪೋಕ್ಲು: ಇಲ್ಲಿನ ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯದಲ್ಲಿ ಟೌನ್ ಟೈಗರ್ ತಂಡ ಪ್ರಶಸ್ತಿಯನ್ನು ಮಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಗೇಮ್ 07 ತಂಡ ಪಡೆದುಕೊಂಡಿತು.
ವಿಜೇತ ಇಲ್ಲಿಯ ಟೌನ್ ಟೈಗರ್ ತಂಡಕ್ಕೆ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು , ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಗೇಮ್ 07 ತಂಡಗಳಿಗೆ ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು. ಕ್ರೀಡಾಕೂಟದ ವೀಕ್ಷಕ ವಿವರಣೆಯನ್ನು ಸರ್ಫೂದ್ದೀನ್ ಹಾಗೂ ತೀರ್ಪುಗಾರರಾಗಿ ಮಹಮ್ಮದ್ ಅಲಿ ಚಿಕ್ಕಮಂಗಳೂರು ಕಾರ್ಯ ನಿರ್ವಹಿಸಿದರು.
ಡೆಕ್ಕನ್ ಯೂತ್ ಕ್ಲಬ್ ಅಧ್ಯಕ್ಷ ಜೈನುಲ್ ಆಬಿದ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿಯ ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಕಾರ್ಯಕ್ರಮದಲ್ಲಿ ಗಣ್ಯರು ನಗದು ಹಾಗೂ ಟ್ರೋಫಿಯನ್ನು ವಿತರಿಸಿ ಶುಭ ಹಾರೈಸಿದರು. ಇದಕ್ಕೂ ಮೊದಲು ಗಣ್ಯರು ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಬಳಿಕ ಚೆಂಡನ್ನು ಸರ್ವಿಸ್ ಮಾಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು
ಈ ಸಂದರ್ಭ ಹೊದ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಹಂಸ ಕೊಟ್ಟ ಮುಡಿ, ವಿಎಸ್‌ಎಸ್‌ಎನ್ ನಿರ್ದೇಶಕ ಅರೆಯಡ ರತ್ನ ಪೆಮ್ಮಯ್ಯ, ನಾಪೋಕ್ಲು ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಎ.ಇಸ್ಮಾಯಿಲ್, ಪಿ.ಎಂ.ಯುನೆಸ್, ಪಿ.ಎಂ.ರಶೀದ್, ಅರಫತ್, ಸಿರಾಜುದ್ದೀನ್ ಚೆರಿಯಪರಂಬು, ಆದಿಲ್, ಸಿ.ಎಚ್.ಅಹ್ಮದ್, ಹಾರೀಸ್, ಆಸ್ಕರ್, ಆಸಿಫ್, ಮಹಮ್ಮದ್ ಅಲಿ, ಸಿ.ಎಚ್.ಅಹಮ್ಮದ್, ಉಪಾಧ್ಯಕ್ಷ ಸಂಶು ಕಾರೆಕ್ಕಾಡ್, ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು, ಕ್ರೀಡಾ ಪ್ರೇಮಿಗಳು ಇದ್ದರು.