ಮಡಿಕೇರಿ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವಲಯ ಕಚೇರಿಯಿಂದ ಆಯೋಜಿಸಿದ್ದ ಕೆಜಿಬಿ ಪ್ಲೇ ಫೆಸ್ಟ್ ಕಾರ್ಯಕ್ರಮವನ್ನು ಮಡಿಕೇರಿ ನಬಾರ್ಡ್ ಎಜಿಎಂ ವಿ. ರಮೇಶ್ ಬಾಬು ಉದ್ಘಾಟಿಸಿದರು. ಉದಯ ಕುಮಾರ್, ಎಂ.ಎ. ರವಿಚಂದ್ರನ್, ವಿನಯ್ ಮತ್ತಿತರರು ಇದ್ದರು.
ಸದಾ ಕಾಲ ಒತ್ತಡದಿಂದ ಕೆಲಸ ನಿರ್ವಹಿಸುವ ಬ್ಯಾಂಕಿAಗ್ ಸಿಬ್ಬಂದಿಯನ್ನು ಒಂದು ಕಡೆ ಸೇರಿಸಿ ಆಟೋಟಗಳನ್ನು ಆಡಿಸುವ ಮೂಲಕ ಸಂಭ್ರಮಿಸುವುದರಿAದ ಒಳ್ಳೆಯ ವಿಶ್ರಾಂತಿ ನೀಡಿದಂತೆ ಆಗುತ್ತದೆ ಎಂದು ಮಡಿಕೇರಿ ನಬಾರ್ಡ್ ಎಜಿಎಂ ವಿ. ರಮೇಶ್ ಬಾಬು ಹೇಳಿದರು. ಇಲ್ಲಿನ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವಲಯ ಕಚೇರಿಯಿಂದ ಭಾನುವಾರ ಆಯೋಜಿಸಿದ್ದ ಕೆಜಿಬಿ ಪ್ಲೇ ಫೆಸ್ಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಒತ್ತಡ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ವಿಶ್ರಾಂತಿ ನಡುವೆ ಕೆಲಸ ಮಾಡಬೇಕು. ಹಾಗಾಗಿ ತಮ್ಮ ಬ್ಯಾಂಕಿನ ಮುಖಾಂತರ ಇಂಥ ಕಾರ್ಯಕ್ರಮವನ್ನು ಆಯೋಜಿಸುವುದು ವಿಶೇಷವಾಗಿದೆ. ಇಂಥ ಸನ್ನಿವೇಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಉದಯ ಕುಮಾರ್ ಮಾತನಾಡಿ, ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸದಾ ಜನರಿಗೆ ಸೇವೆ ನೀಡುವ ಮೂಲಕ ಕಾರ್ಯನಿರತರಾಗಿರುತ್ತಾರೆ. ಹಾಗಾಗಿ ವರ್ಷಕ್ಕೊಮ್ಮೆ ತಮ್ಮ ಕುಟುಂಬಸ್ಥರೊAದಿಗೆ ವಿವಿಧ ಸ್ಪರ್ಧೆ ಹಾಗೂ ಆಟೋಟಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ನಿತ್ಯ ಜೀವನದ ನಡುವೆ ನಮ್ಮ ಆರೋಗ್ಯದ ಮೇಲೆ ಹೆಚ್ಚು ಕಾಳಜಿವಹಿಸಬೇಕು. ವಿಶೇಷವಾಗಿ ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಲು ಇಂಥ ಕಾರ್ಯಕ್ರಮಗಳು ಸಾಕಷ್ಟು ಅನುಕೂಲಕರವಾಗಿವೆ ಎಂದರು.
ಕೆಜಿಬಿ ಪ್ಲೇ ಫೆಸ್ಟ್ನಲ್ಲಿ ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ ತಮ್ಮ ಕುಟುಂಬದೊAದಿಗೆ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ, ಸಂಭ್ರಮಿಸಿದರು. ವಿಜೇತ ಹಾಗೂ ಭಾಗವಹಿಸಿದ ಎಲ್ಲರಿಗೂ ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಾದೇಶಿಕ ವಲಯದ ಹಿರಿಯ ವ್ಯವಸ್ಥಾಪಕÀ ಎಂ.ಎ. ರವಿಚಂದ್ರನ್, ಕೆನರಾ ಬ್ಯಾಂಕ್ ಹೆಚ್.ಎಸ್.ಬಿ.ಸಿ. ವಿಮೆ ಮುಖ್ಯಸ್ಥ ವಿನಯ್ ಸೇರಿದಂತೆ ವಲಯದ ಎಲ್ಲಾ ಶಾಖೆಯ ಸಿಬ್ಬಂದಿ ಇದ್ದರು.