ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಮೇರಿ ಮಚಾಡೋ , ಮೈಸೂರಿನ ಮನೋವಿಜ್ಞಾನಿ, ಪ್ರೊ.ಡಾ. ಪರಶಿವಮೂರ್ತಿ, ಮುಖ್ಯಶಿಕ್ಷಕಿ ಅನಿತಾ ಡಿ ಸೋಜಾ, ಪ್ರತಿನಿಧಿ ಹರೀಶ್ ಇದ್ದರು. 
ಕೊಡಗು

ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಿ

ಪ್ರಮುಖ ಮುಖ್ಯಾಂಶಗಳು

  • ಪಾಲಕರಿಗೆ ಮನೋವಿಜ್ಞಾನಿ ಪ್ರೊ.ಡಾ. ಪರಶಿವಮೂರ್ತಿ ಸಲಹೆ
ಕೂಡಿಗೆಯ ಅಂಜಲಾ ವಿದ್ಯಾನಿಕೇತನ ಶಾಲೆಯಲ್ಲಿ ಮಕ್ಕಳ ಪಾಲಕರ ಸಭೆಯು ಶಾಲಾ ಸಂಚಾಲಕರಾದ ಮೇರಿ ಮಚಾಡೋ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿತು.
ಮೈಸೂರಿನ ಮನೋವಿಜ್ಞಾನಿ ಪ್ರೊ.ಡಾ . ಪರಶಿವಮೂರ್ತಿ ಅವರು ’ಮಕ್ಕಳ ಶಿಕ್ಷಣದ ಬಗ್ಗೆ ಪಾಲಕರ ಪಾತ್ರ ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಪಾಲಕರು ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು, ಮಕ್ಕಳನ್ನು ಮೊಬೈಲ್ ನಿಂದ ದೂರ ಇಡುವ ಕಾರ್ಯದಲ್ಲಿ ತೊಡಗಬೇಕಾಗಿದೆ, ಮಕ್ಕಳ ಪ್ರತಿಭೆಗೆ ಸಹಕಾರ ಬಹು ಮುಖ್ಯ ಎಂದರು.
ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕರಾದ ಅನಿತಾ ಡಿ ಸೋಜಾ, ಪ್ರತಿನಿಧಿ ಹರೀಶ್ ಸೇರಿದಂತೆ ಪಾಲಕರು ಭಾಗವಹಿಸಿದ್ದರು.