ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆ. ಜೆರ್ಮಿ ಡಿಸೋಜ, ಪಿ.ಪಿ.ಉದಯಕುಮಾರ್, ಎನ್.ಸಿ.ಪೊನ್ನಪ್ಪ ಇತರರಿದ್ದರು. 
ಕೊಡಗು

ಬಡ್ಡಿ ರಿಯಾಯಿತಿ ಯೋಜನೆ ಜಾರಿ

ಸುಂಟಿಕೊಪ್ಪ: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26 ನೇ ಸಾಲಿನಲ್ಲಿ 59,53,671 ಲಕ್ಷ ರೂ. ನಿವ್ವಳ ಲಾಭವನ್ನು ಗಳಿಸಿದೆ.
ಶನಿವಾರ ಇಲ್ಲಿನ ಗುಂಡುಗುಟ್ಟಿ ಮಂಜನಾಥಯ್ಯ ಸಹಕಾರ ಭವನದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಜೆರ್ಮಿ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜೆರ್ಮಿಡಿಸೋಜ ಅವರು ಸಂಘದ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಸಂಘದ ಸದಸ್ಯರಿಗೆ 2025-26 ನೇ ಸಂಘದಲ್ಲಿ 1999 ಮಂದಿ ಸದಸ್ಯರಿದ್ದು, ಇದರಲ್ಲಿ ಎ ಸದಸ್ಯರ ಪಾಲು ಹಣ 86,272,280 ರೂ., ಸರ್ಕಾರದ ಪಾಲು 78,000 ರೂ. ಆಗಿರುತ್ತದೆ ಎಂದು ಮಾಹಿತಿ ನೀಡಿದರು.
ಸಂಘದ ಸಾಲ ಮರುಪಾವತಿ ಪ್ರಮಾಣವು ಶೇ.98.50 ಇದ್ದು, ಸರ್ಕಾರದ ಬಡ್ಡಿ ರಿಯಾಯಿತಿ ಯೋಜನೆಯು ಜಾರಿಯಲ್ಲಿರುತ್ತದೆ ಎಂದು ಮಾಹಿತಿ ನೀಡಿದರು.
ಸಂಘದ ಸದಸ್ಯ ಚಂದ್ರಶೇಖರ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಹೆಚ್ಚು ಅಂಕಗಳಿಸುವ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಬೇಕೆಂದು ಆಗ್ರಹಿಸಿದರು. ಅವರ ಮಾತಿಗೆ ಸದಸ್ಯರಾದ ಬಿ.ಜಿ.ಜವಹರ್, ಕರುಣ ಮತ್ತಿತರ ಸದಸ್ಯರು ಧ್ವನಿಗೂಡಿಸಿದರು.
ಸಂಘದ ಬೆಳವಣಿಗೆ ಮತ್ತು ಲಾಭದ ದೃಷ್ಟಿಯ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸದಸ್ಯನು ಸಂಘದ ವಿವಿಧ ಶಾಖೆಗಳಲ್ಲಿ ಕನಿಷ್ಟ 5,000 ರೂ. ವ್ಯವಹಾರ ನಡೆಸಲು ಜೆರ್ಮಿಡಿಸೋಜ ಮನವಿ ಮಾಡಿದರು.
ಸಂಘದ ಹಿರಿಯ ಸದಸ್ಯ ಕೆ.ಡಿ.ರಾಮಯ್ಯ ಮಾತನಾಡಿ, ಸಂಘದ 59 ಲಕ್ಷ ರೂ. ಲಾಭದಲ್ಲಿ 28 ಲಕ್ಷ ರೂ., ಬಾಡಿಗೆ ರೂಪದಲ್ಲಿ ಬಂದಿದೆ. ಉಳಿದ ಲಾಭಾಂಶ ಸಾಲದು ಎಂದು ಹೇಳಿದರಲ್ಲದೆ ಸಂಘದ ಆರ್ಥಿಕ ವ್ಯವಹಾರವನ್ನು ಹೆಚ್ಚು ಮಾಡಲು ಸಲಹೆ ನೀಡಿದರು.
ಈ ಸಂದರ್ಭ ವಿವರಣೆ ನೀಡಿದ ಜೆರ್ಮಿಡಿಸೋಜ ಅವರು 19 ಲಕ್ಷ ರೂ., ಮಾತ್ರ ಬಾಡಿಗೆ ಬರುತ್ತಿದ್ದು 46 ಲಕ್ಷ ರೂ., ಆಡಳಿತ್ಮಾಕ ವೆಚ್ಚ ಬರುತ್ತಿದೆ. ಈಗಾಗಲೇ ಕಾನ್‌ಬೈಲ್‌ನಲ್ಲಿ25 ಲಕ್ಷ ರೂ., ವ್ಯಯಿಸಿ ಗೋದಾಮು ನಿರ್ಮಿಸಲಾಗಿದೆ ಸಂಘದ 6 ಗ್ರಾಹಕರ ಶಾಖೆಗಳ ಮುಖಾಂತರ ವಾರ್ಷಿಕ 15 ಲಕ್ಷ ರೂ. ಲಾಭ ಗಳಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಸಂಘದ ಕಲ್ಲೂರು ಶಾಖೆಯನ್ನು ನವೀಕರಣಗೊಳಿಸಿ ಗೋದಾಮು ಮತ್ತು ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾನ್‌ಬೈಲ್ ಶಾಖೆಯನ್ನು ಕೂಡ ನವೀಕರಣಗೊಳಿಸಿ ಗೋದಾಮು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಆರಂಭಿಸಲಾಗುವುದು ಎಂದರು.
ವಾರ್ಷಿಕ ಮಹಾಸಭೆಯಲ್ಲಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಪ್ರೋತ್ಸಾಹ ಧನ ನೀಡಿದರು.
ವಿಶೇಷವಾಗಿ ಸಹಕಾರ ರತ್ನ ಎಂ.ಎನ್.ಕೊಮರಪ್ಪ ಅವರ 4 ದಶಕಗಳ ಸಹಕಾರಿ ಸೇವೆಯನ್ನು ಸಂಘದ ಮಾಜಿ ಅಧ್ಯಕ್ಷ ಎನ್.ಸಿ.ಕ್ಲೈವ್ ಪೊನ್ನಪ್ಪ ಮಾತನಾಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಪಿ.ಪಿ.ಉದಯಕುಮಾರ್, ನಿರ್ದೇಶಕರುಗಳಾದ ಎನ್.ಸಿ.ಪೊನ್ನಪ್ಪ, ಡಿ.ಬಿ.ರಮೇಶ್‌ಚಂಗಪ್ಪ, ಕೆ.ಎಸ್.ಮಂಜುನಾಥ್, ಡಿ.ಕೆ.ಗಂಗಾಧರ, ಡಾ.ಶಶಿಕಾಂತರೈ, ಕೆ.ಪಿ.ಜಗನ್ನಾಥ್, ಕೆ.ಆರ್.ಮಂಜುನಾಥ, ಡಿ.ಎಚ್.ಚಂದ್ರಶೇಖರ್, ಬಿ.ಕೆ.ದಯಾನಂದ, ಪಿ.ಪಿ.ಲೀಲಾವತಿ, ಕೆ.ವಿ.ರಮ್ಯಾ, ಮತ್ತು ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮಿತ್ರಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.