ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ನೆಲಜಿ ಗ್ರಾಮಲ್ಲಿ ಮಳೆ ಪರಿಣಾಮ ಪಳಂಗಪ್ಪ ಅವರ ವಾಸದ ಮನೆ ತಡೆಗೋಡೆ ಕುಸಿದಿರುವುದು.  
ಕೊಡಗು

ಮನೆಯ ತಡೆಗೋಡೆ ಕುಸಿದು ನಷ್ಟ

ಎ. ಆರ್. ರಘುರಾಮ
ನಾಪೋಕ್ಲು: ಇಲ್ಲಿಗೆ ಸಮೀಪದ ನೆಲಜಿ ಗ್ರಾಮದಲ್ಲಿ ಮಳೆ ಪರಿಣಾಮ ಮನೆಯ ತಡೆಗೋಡೆ ಕುಸಿದು ನಷ್ಟ ಸಂಭವಿಸಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ನೆಲಜಿಯಲ್ಲಿ ಸುರಿಯುತ್ತಿರುವ ಮಳೆಗೆ ಮಂಗಳವಾರ ಬೆಳಗ್ಗೆ ಪಳಂಗಪ್ಪ ಅವರ ವಾಸದ ಮನೆಯ ತಡೆಗೋಡೆ ಕುಸಿಯಿತು. ಈ ಸಂದರ್ಭ ಯಾರಿಗೂ ಪ್ರಾಣಾಪಾಯವಾಗಿಲ್ಲ.
ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.