ಕುಶಾಲನಗರದ ಬೈಚನಹಳ್ಳಿಯ ಶ್ರೀ ಮಾರಮ್ಮ ದೇವಾಲಯ ಬಳಿಯಿರುವ ಬಸ್ ತಂಗುದಾಣದ ಬೋರ್ಡ್ ಬದಲಾಯಿಸದಿರುವುದನ್ನು ವಿರೋಧಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯರ್ಕ್ತರು ಪ್ರತಿಭಟನೆ ನಡೆಸಿದರು. ದೀಪಕ್, ಸಿ.ಎಂ.ಆಸಿಫ್, ಡಿ.ಆರ್.ಯೋಗೇಶ್, ಸಂಧ್ಯಾ ಗಣೇಶ್ ಇತರರಿದ್ದರು. 
ಕೊಡಗು

ಕರವೇ ಕಾರ್ಯರ್ತರ ಪ್ರತಿಭಟನೆ

ಲಲಾಟಾಕ್ಷ ಎಸ್
ಕುಶಾಲನಗರ: ಕುಶಾಲನಗರದ ಬೈಚನಹಳ್ಳಿಯ ಶ್ರೀ ಮಾರಮ್ಮ ದೇವಾಲಯ ಬಳಿಯಿರುವ ಬಸ್ ತಂಗುದಾಣದ ಹಳೆಯ ಬೋರ್ಡ್ ಅನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
40 ವರ್ಷಗಳಿಂದ ಬೋರ್ಡ್ ಬದಲಾಯಿಸಿಲ್ಲ. ಬಸ್ ತಂಗುದಾಣ ಬೋರ್ಡ್‌ನಲ್ಲಿ ಇಂದಿಗೂ ಕುಶಾಲನಗರ ಮಂಡಲ ಪಂಚಾಯಿತಿ ಎಂಬುದೇ ಇದೆ. ಇದು ಅಧಿಕಾರಿಗಳ ನಿರ್ಲಕ್ಷ್ಯ ಎಂದು ಆರೋಪಿಸಿದರು. ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೇರಿದರೂ ಇಂದಿಗೂ ಬದಲಾಯಿಸಿಲ್ಲ. ಅಲ್ಲದೆ ತಂಗುದಾಣ ಶಿಥಿಲಗೊಂಡಿದೆ. 40 ವರ್ಷಗಳಿಂದ ಈ ಭಾಗದಲ್ಲಿ ಗೆದ್ದು ಬಂದ ಜನಪ್ರತಿನಿಧಿಗಳಿಗೆ ಈ ನಾಮಫಲಕ ಗೋಚರಿಸದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ಪುರಸಭೆ ಕಂದಾಯ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಸಿ.ಎಂ.ಆಸಿಫ್, ದೀಪಕ್, ಕರವೇ ನಗರಾಧ್ಯಕ್ಷ ಡಿ.ಆರ್.ಯೋಗೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಂಧ್ಯಾ ಗಣೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೃತಿ ಗಿರೀಶ್, ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಆನಂದ್ ಗೌಡ, ಕ್ಷೇತ್ರ ಉಪಾಧ್ಯಕ್ಷ ಜೈ ಸ್ವಾಮಿ, ತಾಲೂಕು ಉಪಾಧ್ಯಕ್ಷ ಪರಮೇಶ್, ತಾಲೂಕು ಕಾರ್ಯದರ್ಶಿ ಗಣೇಶ್, ತಾಲೂಕು ಯುವ ಘಟಕದ ಅಧ್ಯಕ್ಷ ಪುನೀತ್, ನಗರಾಧ್ಯಕ್ಷೆ ರೇಣುಕಾ, ನಗರ ಉಪಾಧ್ಯಕ್ಷ ಡಿ.ಎನ್.ರವಿ, ಭವ್ಯಾ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಪವನ್ ಪಾಂಡುರಂಗ, ಸದಸ್ಯರಾದ ಮಂಜುನಾಥ್ ರೈ, ಸಲೀಂ ಇದ್ದರು.