ಕಣ್ಣಂಗಾಲ ಗ್ರಾಮದ ಶ್ರೀ ಮಹದೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ ಅಂಗವಾಗಿ ದೇವರ ನೃತ್ಯ ಬಲಿ ಜರುಗಿತು.
ನಾಪೋಕ್ಲು: ಕಣ್ಣಂಗಾಲ ಗ್ರಾಮದ ಶ್ರೀ ಮಹದೇಶ್ವರ ದೇವಾಲಯದಲ್ಲಿ ಭಾನುವಾರ ವಾರ್ಷಿಕ ಉತ್ಸವ ಹಾಗೂ ಶಿವರಾತ್ರಿಯ ವಿಶೇಷ ಪೂಜಾ ಕಾರ್ಯ ಶ್ರದ್ಧಾ ಭಕ್ತಿಯಿಂದ ಜರುಗಿತು.
ಉತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ರುದ್ರಾಭಿಷೇಕ ಸೇರಿದಂತೆ ಇನ್ನಿತರ, ಪೂಜಾ ಕೈಂಕರ್ಯ ಮಧ್ಯಾಹ್ನ ಮಹಾಪೂಜೆ ಬಳಿಕ ತೀರ್ಥ ಪ್ರಸಾದ ವಿತರಣೆ ಬಳಿಕಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಸಂಜೆ ಮಹದೇಶ್ವರ ದೇವರ ಉತ್ಸವ ಅಂಗವಾಗಿ ನೃತ್ಯ ಬಲಿ ಹಾಗೂ ವಸಂತ ಪೂಜೆ ಜರುಗಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರಿಗೆ ಹರಕೆ, ಕಾಣಿಕೆ ಸಮರ್ಪಿಸಿ ದೇವರ ನೃತ್ಯ ಬಲಿ ವೀಕ್ಷಿಸಿದರು.
ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ ನೇತೃತ್ವದಲ್ಲಿ ರುದ್ರಾಭಿಷೇಕ ವಿಶೇಷ ಪೂಜೆ ಸೇರಿದಂತೆ ಪೂಜಾ ವಿಧಿ-ವಿಧಾನ ಜರುಗಿದವು.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮಚ್ಚರಂಡ ರಾಬಿನ್ ಚಿನ್ನಪ್ಪ, ಕಾರ್ಯದರ್ಶಿ ಕ್ವಾರಂಡ ಬೆಳ್ಳಿಯಪ್ಪ, ಖಜಾಂಚಿ ವಿ.ಎಲ್.ಆನಂದ್ರು, ತಕ್ಕ ಮುಖ್ಯಸ್ಥರು, ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.