ಕೊಡಗು ಹೆಗ್ಗಡೆ ಸಮಾಜದ ಆಡಳಿತ ಮಂಡಳಿ ವತಿಯಿಂದ ಆಯೋಜಿಸಿದ್ದ ಕಕ್ಕಡ ತೀನಿ ನಮ್ಮೆ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಸಾಂಪ್ರದಾಯಿಕ ಖಾದ್ಯಗಳನ್ನು ಗಣ್ಯರು ವೀಕ್ಷಿಸಿದರು. ಕೊರಕುಟ್ಟೀರ ಸರ ಚಂಗಪ್ಪ, ಪಡಿಞರಂಡ ಪ್ರಭು ಕುಮಾರ್, ಚರ್ಮಂಡ ಅಪ್ಪುಣು ಪೂವಯ್ಯ, ಮೂರೀರ ಶಾಂತಿ, ಪೊಟ್ಟಂಡ ವಸಂತಿ ಮತ್ತಿತರರು ಇದ್ದರು. 
ಕೊಡಗು

ಕೊಡಗು ಹೆಗ್ಗಡೆ ಸಮಾಜದಿಂದ ಕಕ್ಕಡ ತೀನಿ ನಮ್ಮೆ

ವಿರಾಜಪೇಟೆ:
ಕೊಡಗು ಹೆಗ್ಗಡೆ ಸಮಾಜದ ಆಡಳಿತ ಮಂಡಳಿಯ ವತಿಯಿಂದ ಕಕ್ಕಡ ತೀನಿ ನಮ್ಮೆ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ, ಮೈಕೊರೆಯುವ ಚಳಿ, ಗಾಳಿ ಮತ್ತು ಮಳೆಯ ನಡುವೆ ಕೃಷಿ ಚಟುವಟಿಕೆಯಲ್ಲಿ ನಿರತರಾಗುತ್ತಿದ್ದ ನಮ್ಮ ಹಿರಿಯರು ತಮ್ಮ ಅನುಭವದ ಆಹಾರ ಪದ್ಧತಿಯ ಮೂಲಕ ವೈಜ್ಞಾನಿಕ ಜ್ಞಾನವನ್ನು ಮೈಗೂಡಿಸಿಕೊಂಡಿದ್ದರು. ಕಕ್ಕಡ ತಿಂಗಳಲ್ಲಿ ಮದ್ದ್ ಪುಟ್ಟ್ ಹಾಗೂ ಮದ್ದು ಸೊಪ್ಪಿನ ವಿವಿಧ ಖಾದ್ಯಗಳನ್ನು ಸೇವಿಸಿ ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳುತ್ತಿದ್ದರು.
ನಮ್ಮ ಪೂರ್ವಜರು ಕಕ್ಕಡ ತಿಂಗಳಲ್ಲಿ ಮದುವೆ ಮುಂತಾದ ಶುಭ ಸಮಾರಂಭಗಳನ್ನು ಬದಿಗಿಟ್ಟು, ಭತ್ತದ ಗದ್ದೆಗಳಲ್ಲಿ ಭೂತಾಯಿಯ ಸೇವೆಗೆ ಸಂಪೂರ್ಣವಾಗಿ ಮೀಸಲಾಗುತ್ತಿದ್ದರು. ಪ್ರಕೃತಿಗೆ ಗೌರವ ನೀಡುವ ಈ ಸಂಪ್ರದಾಯದಿAದಾಗಿ ನಮ್ಮ ಆಚಾರ-ವಿಚಾರಗಳು ಗಟ್ಟಿಯಾಗಿ ಉಳಿದಿವೆ. ಇಂದಿನ ಯುವಜನತೆ ನಮ್ಮ ಹಿರಿಯರ ಭತ್ತದ ಕಣಜವಾಗಿದ್ದ ಗದ್ದೆಗಳನ್ನು ಪಾಳುಬಿಡದೆ, ಪರಂಪರೆಯನ್ನು ಮುಂದುವರಿಸಿಕೊAಡು ಹೋಗಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ನಾಡ್ ಕೋಳಿ ಕರಿ, ಮದ್ದ್ ಪಾಯಸ, ಮದ್ದ್ ಪುಟ್ಟ್, ಚಕ್ಕೆಕುರುರ ಕಾರ ಪಜ್ಜಿ, ನಂಡ್ ಕರಿ, ತಾಳ್ ಕೇಂಬು ಕರಿ ಹಾಗೂ ಚುಟ್ಟ ಕೈಪುಳಿ ಪಜ್ಜಿ ಸೇರಿದಂತೆ ಕೊಡಗಿನ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಿ ಪ್ರದರ್ಶನಕ್ಕಿಡಲಾಗಿತ್ತು.
ಸಮಾಜದ ಕಾರ್ಯದರ್ಶಿ ಪಡಿಞರಂಡ ಪ್ರಭು ಕುಮಾರ್, ಉಪಾಧ್ಯಕ್ಷ ಚರ್ಮಂಡ ಅಪ್ಪುಣು ಪೂವಯ್ಯ, ಮಾಜಿ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ, ಕೋಶಾಧ್ಯಕ್ಷ ಕೊರಂಡ ಪ್ರಕಾಶ್ ನಾಣಯ್ಯ, ನಿರ್ದೇಶಕರುಗಳಾದ ಮೂರೀರ ಕುಶಾಲಪ್ಪ, ಕೊಂಗೆಪ್ಪAಡ ರವಿ, ತಂಬAಡ ಮಂಜುನಾಥ್, ತೊರೇರ ರಾಜ ಪೂವಯ್ಯ, ಮಲ್ಲಡ ಸುತಾ, ಮೂರೀರ ಶಾಂತಿ, ಪೊಟ್ಟಂಡ ವಸಂತಿ, ಕ್ರೀಡಾ ಸಮಿತಿ ಸಂಚಾಲಕ ಪಂದಿಕAಡ ಈಶ್ವರ ನಾಗೇಶ್, ಸದಸ್ಯರುಗಳಾದ ಕಾಕೇರ ರವಿ, ಪಡಿಞರಂಡ ಗಿರೀಶ್, ಬೈರಿಕುಂದಿರ ಮನು, ಕೊರಕುಟ್ಟೀರ ಮೀನಾ, ಕವಿತಾ ಮತ್ತಿತರರು ಇದ್ದರು.