ಸೋಮವಾರಪೇಟೆಯಲ್ಲಿ ನಡೆದ ಕಬಡ್ಡಿ ಪಂದ್ಯಾಟದ ಪ್ರಥಮ ಸ್ಥಾನ ಪಡೆದ ಸತ್ಯ ಸ್ಪೋರ್ಟ್ಸ್ ಕ್ಲಬ್ ತಂಡ 
ಕೊಡಗು

ಕಬಡ್ಡಿ ಪಂದ್ಯಾಟ ಸತ್ಯ ಸ್ಪೋರ್ಟ್ಸ್ ಕ್ಲಬ್‌ಗೆ ಪ್ರಥಮ ಸ್ಥಾನ

ಪ್ರಮುಖ ಮುಖ್ಯಾಂಶಗಳು

  • Kabaddi tournament
ಸೋಮವಾರಪೇಟೆ: ಇಂದಿರಾಗಾಂಧಿ ಅಭಿಮಾನಿಗಳ ಸಂಘದಿಂದ ಸಾಕಮ್ಮನ ಬಂಗಲೆ ಮುಂಭಾಗದ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾಟದಲ್ಲಿ ಸೋಮವಾರಪೇಟೆಯ ಸತ್ಯ ಸ್ಪೋರ್ಟ್ಸ್ ಕ್ಲಬ್ ಪ್ರಥಮ, ರಾಮಧೂತ ತಂಡ ದ್ವಿತೀಯ ಹಾಗೂ ಜೀವನ್ ಫ್ರೆಂಡ್ಸ್ ತಂಡ ತೃತೀಯ ಸ್ಥಾನ ಪಡೆಯಿತು.
ಪ್ರಥಮ ಸ್ಥಾನ ಪಡೆದ ತಂಡ 15 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡ 8 ಸಾವಿರ ರೂ. ನಗದು ಹಾಗೂ ಟ್ರೋಫಿಗೆ ಭಾಜನವಾಯಿತು. ತೃತೀಯ ಸ್ಥಾನವನ್ನು ಪಡೆದ ತಂಡ 5 ಸಾವಿರ ರೂ. ನಗದಿನೊಂದಿಗೆ ಟೋಫಿಯನ್ನು ಪಡೆಯಿತು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಡೆದ ಸ್ಥಳೀಯ ಆಟಗಾರರನ್ನು ಒಳಗೊಂಡ ಕಬಡ್ಡಿ ಪಂದ್ಯಾಟದಲ್ಲಿ ಸೋಮವಾರಪೇಟೆಯ ಜಿಎಂಪಿ ಶಾಲೆ ಬಿ. ತಂಡ ಪ್ರಥಮ, ಓಎಲ್‌ವಿ ಶಾಲೆ ದ್ವಿತೀಯ, ಜಿಎಂಪಿ ಶಾಲೆ ಎ. ತಂಡ ತೃತೀಯ ಸ್ಥಾನ ಪಡೆಯಿತು.
ಕಾಲೇಜು ವಿಭಾಗದ ಸ್ಪರ್ಧೆಯಲ್ಲಿ ಸತ್ಯ ಸ್ಪೋರ್ಟ್ಸ್ ಕ್ಲಬ್ ಪ್ರಥಮ, ಶನಿವಾರಸಂತೆಯ ವಾರಿಯರ್ಸ್‌ ದ್ವಿತೀಯ, ಸೋಮವಾರಪೇಟೆ ಸರ್ಕಾರಿ ಪಿಯು ಕಾಲೇಜು ತೃತೀಯ ಸ್ಥಾನ ಗಳಿಸಿತು. ತಡರಾತ್ರಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಪ್ರಮುಖರಾದ ಗೌಡಳ್ಳಿ ಪೃಥ್ವಿ, ಪ್ರವೀಣ್, ಸಂತೋಷ್ ಭಾಗವಹಿಸಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು, ಪದಾಧಿಕಾರಿಗಳಾದ ಜಗದೀಶ್, ರವೀಂದ್ರ, ಮಣಿಕಂಠ, ರಾಜಪ್ಪ, ಮಲ್ಲೇಶ್, ಎಸ್.ಆರ್.ರವಿ, ಎಂ. ನಾಗರಾಜು, ಅಜೇಯ ಸೇರಿದಂತೆ ಇತರರು ಇದ್ದರು.