ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಾಮ ನಿರ್ದೇಶನರಾದ ಕೆ.ನಾರ್ಣಪ್ಪ ಜತ್ತನ ಅವರನ್ನು ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಸಹಕಾರ ಶಲ್ಯ ಹೊದಿಸಿ ಅಭಿನಂದಿಸಿದರು. ಪಿ. ಎಂ. ಅಶೋಕ, ಎನ್.ಬಿ. ಜಯರಾಮ, ಸೀತಾರಾಮ ಕದಿಕಡ್ಕ ಇತರರಿದ್ದರು. 
ಕೊಡಗು

ಕೆ. ನಾರ್ಣಪ್ಪ ಜತ್ತನ ನಿರ್ದೇಶಕ ಸ್ಥಾನಕ್ಕೆ ನಾಮ ನಿರ್ದೇಶನ

ಪ್ರಮುಖ ಮುಖ್ಯಾಂಶಗಳು

  • ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
ನಾಪೋಕ್ಲು: ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆರವುಗೊಂಡಿರುವ ನಿರ್ದೇಶಕ ಸ್ಥಾನಕ್ಕೆ ಭಾನುವಾರ ಸಾಮಾನ್ಯ ವರ್ಗ ಕೆ. ನಾರ್ಣಪ್ಪ ಜತ್ತನ ಅವರನ್ನು ಸಹಕಾರ ಸಂಘಗಳ ಕಾಯ್ದೆಗಳಿಗನುಗುಣವಾಗಿ ಸಂಘದ ಆಡಳಿತ ಮಂಡಳಿಯಲ್ಲಿ ನಿರ್ಣಯಿಸಿ ನಾಮ ನಿರ್ದೇಶನ ಮಾಡಿಕೊಳ್ಳಲಾಯಿತು.
ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರು ಕೆ. ನಾರ್ಣಪ್ಪ ಜತ್ತನ ಅವರನ್ನು ಅಭಿನಂದಿಸಿದರು. ಸಂಸ್ಥೆಯ ಉಪಾಧ್ಯಕ್ಷ ಪಿ. ಎಂ. ಅಶೋಕ, ನಿರ್ದೇಶಕರುಗಳಾದ ಎನ್.ಬಿ. ಜಯರಾಮ, ಸೀತಾರಾಮ ಕದಿಕಡ್ಕ, ಧನಂಜಯ ಕೋಡಿ, ಎನ್. ಪ್ರಮೀಳಾ ಬಂಗಾರಕೋಡಿ, ಕೆ. ಎಂ. ಪ್ರದೀಪ, ಧೀನರಾಜ್ ದೊಡ್ಡಡ್ಕ, ಶೇಷಪ್ಪ ನಾಯ್ಕ ನಿಡ್ಯಮಲೆ, ಕಿರಣ್ ಬಂಗಾರಕೋಡಿ, ಬಿ.ಸಿ. ವಿನಿತಾ, ಲೋಕೇಶ್ ಹೊದ್ದೆಟ್ಟಿ ಉಪಸ್ಥಿತರಿದ್ದರು.