ಸೋಮವಾರಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಸುಮತಿ ಶೆಟ್ಟಿ, ತಸ್ಮಿಯಾ ಬಾನು, ಸುನಂದಾ, ಶಿಕ್ಷಕಿ ಸಿ.ಇ. ಅನಸೂಯಾ, ಲೇಖಕಿ ಲಾವಣ್ಯ ಮೋಹನ್ ಅವರಿಗೆ ಜೇಸಿ ಪಂಚರತ್ನ ಪ್ರಶಸ್ತಿ ನೀಡಲಾಯಿತು. ರಮ್ಯಾ ಸಂತೋಷ್, ಜಲಜಾ ಇತರರು ಇದ್ದರು. 
ಕೊಡಗು

ಜೇಸಿಯಿಂದ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಕೆಲಸ

ಪ್ರಮುಖ ಮುಖ್ಯಾಂಶಗಳು

  • Jessie's
ಸೋಮವಾರಪೇಟೆ: ಜೇಸಿ ಸಂಸ್ಥೆ ಯುವ ಪ್ರತಿಭೆಗಳಿಗೆ ಹಲವು ಅವಕಾಶಗಳನ್ನು ನೀಡುತ್ತಾ, ಮಹಿಳಾ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ ಎಂದು ಜೇಸಿ ವಲಯ ನಿರ್ದೇಶಕಿ ರಮ್ಯಾ ಸಂತೋಷ್ ತಿಳಿಸಿದರು.
ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸಮಾಜದ ನಿರ್ದೇಶಕಿ ಜಲಜಾ ಶೇಖರ್ ಮಾತನಾಡಿ, ಬ್ರಿಟಿಷ್ ಅಧಿಕಾರಿಗಳು ಭಾರತದಲ್ಲಿ ಮಹಿಳಾ ಸ್ವಾತಂತ್ರ್ಯ ಮತ್ತು ಸಬಲೀಕರಣಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಮಹಿಳೆಯರು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಸುಮತಿ ಶೆಟ್ಟಿ, ಆರೋಗ್ಯ ಇಲಾಖೆಯ ತಸ್ಮಿಯ ಬಾನು ಮತ್ತು ಸುನಂದಾ, ಕಾಜೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಿ.ಇ. ಅನಸೂಯಾ, ಶನಿವಾರಸಂತೆಯ ಲೇಖಕಿ ಲಾವಣ್ಯ ಮೋಹನ್ ಅವರಿಗೆ ಜೇಸಿ ಪಂಚರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಜೇಸಿಐ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಜೇಸಿಐ ಘಟಕದ ಅಧ್ಯಕ್ಷೆ ಶ್ರೀಜಾ, ಸ್ತ್ರೀ ರೋಗ ತಜ್ಞರಾದ ಎಂ.ಕೆ. ಹಿಮಾನಿ ಇದ್ದರು.