ಕೊಡಗು ಜಿಲ್ಲೆಯ ಜಾದಳ ದಳದ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾದ ಕಾರ್ಮಾಡು ಸುಬ್ಬಣ್ಣ ಅವರನ್ನು ಮುಖಂಡರು ಸನ್ಮಾನಿಸಿದರು. ಎ. ಎಸ್. ರಾಮಣ್ಣ, ಬೀಟಿಕಟ್ಟೆ ಎಚ್. ಡಿ. ಪ್ರವೀಣ, ಸೋಮವಾರಪೇಟೆ ನಾಗರಾಜು, ವಕೀಲರಾದ ಮನೋಜ್ ಬೋಪಯ್ಯ, ಕಾಟ್ನಮನೆ ವಿಠಲಗೌಡ ಇತರರು ಇದ್ದರು.
ಕುಶಾಲನಗರ : ಕೊಡಗು ಜಿಲ್ಲೆಯ ಜಾತ್ಯತೀತ ಜನತಾ ದಳದ ಹಂಗಾಮಿ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಅವಿರೋಧವಾಗಿ ಆಯ್ಕೆಗೊಂಡರು.
ಪಟ್ಟಣದ ಖಾಸಗಿ ಸಭಾಂಗಣದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿದ
ನಂತರ ಅವಿರೋಧವಾಗಿ ಆಯ್ಕೆ ಘೋಷಣೆ ಮಾಡಲಾಯಿತು. ಸಂಘಟನೆಯ ಕುಶಾಲನಗರ ತಾಲೂಕು ಅಧ್ಯಕ್ಷ ಎ. ಎಸ್. ರಾಮಣ್ಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯುವ ಪುರಸಭೆ, ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಪಕ್ಷದ ಸಂಘಟನೆ ಹಿತದೃಷ್ಟಿಯಿಂದ ಪೊನ್ನಂಪೇಟೆ ತಾಲೂಕು ಕಾರ್ಮಾಡು ಸುಬ್ಬಣ್ಣ ಅವರನ್ನು ನೇಮಕ ಮಾಡಲಾಗಿದೆ ಎಂದರು.
ಪಕ್ಷದ ಮುಖಂಡ ಕೋತೂರು ಸುರೇಶ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಇನ್ನೂ ಸುಭದ್ರವಾಗಿದೆ.
ಜಿಲ್ಲಾ ಮಟ್ಟದ ನಾಯಕರಿಲ್ಲದೇ ಪಕ್ಷದ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡಿದ್ದರು. ಈಗ ಸುಬ್ಬಣ್ಣ ಅವರ ಆಯ್ಕೆಯಿಂದಾಗಿ ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ ಎಂದರು.
ವಕೀಲ ಮನೋಜ್ ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಯನ್ನು ಮೂಲದಿಂದ ಬಲಪಡಿಸಲು ಸಂಕಲ್ಪ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಮಡಿಕೇರಿಯಲ್ಲಿ ಕಾಂಗ್ರೆಸ್ ಶಾಸಕರು ಅದೃಷ್ಟದಿಂದ ಆಯ್ಕೆಯಾಗಿದ್ದಾರೆ. ಸೋಮವಾರಪೇಟೆ ತಾಲೂಕಿನಲ್ಲಿ ಮತ್ತೆ ನಮ್ಮ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರಬೇಕಿದೆ ಎಂದರು. ಪಕ್ಷದ ಉಸ್ತುವಾರಿಯಾಗಿರುವ ಮಾಜಿ ಸಚಿವ ಸಾ.ರಾ. ಮಹೇಶ್ ಅವರನ್ನು ಭೇಟಿ ಮಾಡಿ, ಪಕ್ಷದ ಹೈಕಮಾಂಡ್ ನೀಡುವ ಸಲಹೆ, ನಿರ್ದೇಶನಗಳನ್ನು ಪಾಲಿಸುವಂತೆ ಸಭೆ ತೀರ್ಮಾನಿಸಿತು.ಪಕ್ಷದ ಪ್ರಮುಖರಾದ ಬೀಟಿಕಟ್ಟೆ ಎಚ್. ಡಿ. ಪ್ರವೀಣ, ಸೋಮವಾರಪೇಟೆ ನಾಗರಾಜು, ವಕೀಲರಾದ ಮನೋಜ್ ಬೋಪಯ್ಯ, ಕಾಟ್ನಮನೆ ವಿಠಲಗೌಡ, ಸುಂಟಿಕೊಪ್ಪದ ಎಂ.ಎಂ. ಷರೀಫ್, ಮುಖಂಡರಾದ ಎಚ್.ಟಿ. ವಸಂತ, ಡಿ.ಪಿ. ಗಿರೀಶ್, ಸಂತೋಷ್, ವೆಂಕಟೇಶ್, ಕೆ.ಸಿ. ರಘು,
ಕೂಡಿಗೆ ರಾಜು, ರಾಮಚಂದ್ರ ಮೊದಲಾದವರಿದ್ದರು.