ಸೋಮವಾರಪೇಟೆ ದಲಿತ ಪರ ಹೋರಾಟಗಾರ ಜಯಪ್ಪ ಹಾನಗಲ್ ಅವರು ಬುದ್ಧ ನಾಡ ಭೂಷಣ ಪ್ರಶಸ್ತಿ ಸ್ವೀಕರಿಸಿದರು. ಹರೀಶ್ ಗೌಡ,ಅಶೋಕ್, ಗೋಪಾಲ ಇದ್ದರು. 
ಕೊಡಗು

ಜಯಪ್ಪ ಹಾನಗಲ್‌ಗೆ ಬುದ್ಧ ನಾಡಭೂಷಣ ಪ್ರಶಸ್ತಿ ಪ್ರದಾನ

ಸೋಮವಾರಪೇಟೆ: ಮೈಸೂರಿನ ತನುಮನ ಸಂಸ್ಥೆಯ ಆಶ್ರಯದಲ್ಲಿ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಈಚೆಗೆ ನಡೆದ ಜಗ ನಡೆಯಲಿ ಬುದ್ಧನ ಕಡೆಗೆ ಕಾರ್ಯಕ್ರಮದಲ್ಲಿ ದಲಿತಪರ ಹೋರಾಟಗಾರ ಜಯಪ್ಪ ಹಾನಗಲ್ ಅವರಿಗೆ ಬುದ್ಧ ನಾಡ ಭೂಷಣ-2026 ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಧಮ್ಮಚಕ್ಕ ಪವತ್ತನ ದಿನದ ಅಂಗವಾಗಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಪೋಷಕ ಚಿಕ್ಕಜವರಪ್ಪ ವಹಿಸಿದ್ದರು. ಶಾಸಕ ಹರೀಶ್ ಗೌಡ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಎನ್.ಚಲವಾದಿ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚುತಾನಂದ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ದ್ಯಾವಪ್ಪ ಹಾಗೂ ಯುವ ಮುಖಂಡ ರಾಹುಲ್‌ರಾಮ್ ಸೇರಿದಂತೆ ಹಲವರು ಇದ್ದರು.