ಐಗೂರಿನಲ್ಲಿ ನಡೆದ ಸೋಮವಾರಪೇಟೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಸೇರಿದ್ದರು.
ಕೊಡಗಿನ ಗೌರಮ್ಮ ವೇದಿಕೆ, ಐಗೂರು (ಸೋಮವಾರಪೇಟೆ):
\ಸಾಹಿತಿ ಮೈಸೂರಿನ ಡಾ. ಜಯಪ್ಪ ಹೊನ್ನಾಳಿ ಸಮ್ಮೇಳನದ ಮುಖ್ಯ ಭಾಷಣ ಮಾಡಿದರು. ಕನ್ನಡ ನಾಡಿನಲ್ಲಿ ಇದ್ದುಕೊಂಡು ಕನ್ನಡ ಉಳಿಸಿ, ಬೆಳೆಸಿ ದುರ್ದೈವದ ವಿಷಯ. ಕನ್ನಡ ಸಾಹಿತ್ಯಕ್ಕೆ ಶ್ರೀಮಂತ ಇತಿಹಾಸವಿದೆ. ಕನ್ನಡದ ಸೌಂದರ್ಯ ಮನಗಂಡ ಕಿಟೆಲ್ ಕನ್ನಡ ಕಲಿತು ಶಬ್ದಕೋಶ ರಚಿಸಿದರು. 12 ರಾಜ್ಯಗಳಲ್ಲಿ ಇರುವ ಹಿಂದಿಗೆ 11 ಜ್ಞಾನಪೀಠ ಬಂದಿದ್ದರೆ ಕನ್ನಡಕ್ಕೆ 9 ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕನ್ನಡವಾಗಿ ಇರುವ ಭಾಷೆ. ವಚನಕಾರರು ಕನ್ನಡವನ್ನು ದೇವರ ಭಾಷೆಗೆ ಏರಿಸಿದರು. ಕನ್ನಡವನ್ನು ಕಾಯಬೇಕಾದ ಕನ್ನಡಿಗರೇ ಕನ್ನಡವನ್ನು ಕೊಲ್ಲುತ್ತಿದ್ದಾರೆ. ನಾವು ನವೆಂಬರ್ ಕನ್ನಡಿಗರು ಆಗಿದ್ದೇವೆ ಆದರೆ ನಾವೆಲ್ಲರೂ ನಾವೆಲ್ಲರೂ ಕನ್ನಡಿಗರು ಆಗಬೇಕಾಗಿದೆ. ಕನ್ನಡ ಒಂದು ಅಸ್ಮಿತೆ. ಭಾಷೆ ಸತ್ತರೆ ಜನಾಂಗ ಸತ್ತಂತೆ. ಔದಾರ್ಯವೇ ನಮಗೆ ಉರುಳಾಗಿದೆ. ಕನ್ನಡ ಬರೀ ಅಕ್ಷರವಲ್ಲ, ಅದೊಂದು ಸಂಸ್ಕಾರ. ಕನ್ನಡ ಒಂದು ಭಾಷೆ ಆಗದೇ ಮಾಧ್ಯಮ ಆಗಬೇಕು. ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕು. ಸರ್ಕಾರಿ ಮತ್ತು ಖಾಸಗಿ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ.80 ಮೀಸಲಾತಿ ತರಬೇಕು. ಕನ್ನಡ ನಾಮಫಲ ಕಡ್ಡಾಯ ಮಾಡಬೇಕು. ಸರ್ಕಾರ ಪುಸ್ತಕ ಖರೀದಿ ಆಯಾ ವರ್ಷವೇ ಮಾಡಬೇಕು. ಆಡಳಿತದಲ್ಲಿ ಕನ್ನಡ ಕಡ್ಡಾಯ ಜಾರಿ ಆಗಬೇಕು. ಕನ್ನಡ ಕೃತಿಗಳು ಬೇರೆ ಭಾಷೆಗೆ ತುರ್ಜುಮೆ ಆಗಬೇಕು ಎಂದರು.
ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದ ಸಂದರ್ಭ 6 ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷೆ ಜಲಜಾ ಶೇಖರ್ ಅವರ ನಿರುತ್ತರ, ಡಾ. ಬೆಸೂರು ಮೋಹನ ಪಾಳೇಗಾರ್ ಅವರ 401ನೇ ಕೃತಿ ಕಾಂಪೋಆಡ್‌ಗೆ ಬಣ್ಣ, ಮನೆಗೆ ಸುಣ್ಣವಿಲ್ಲ, ಜಲಾ ಕಾಳಪ್ಪ ಅವರ ನೆಮ್ಮದಿ, ಶರ್ಮಿಳಾ ರಮೇಶ್ ಅವರ ಭವ ಭಾವದೆಡೆಗೆ ವಿಕಾಸ ದರ್ಶನ, ಲಾವಣ್ಯ ಮೋಹನ್ ಅವರ ಪುಷ್ಕರಣಿ ಹಾಗೂ
ಯಶಸ್ವಿ ಗಣೇಶ್ ಅವರ ಸಪ್ತಸ್ವರ ತಾಣ ಕೃತಿಗಳು ಬೆಳಕು ಕಂಡವು. ಆರಂಭದಲ್ಲಿ ಐಗೂರು ಮತ್ತು ಕಾಜೂರು ಶಾಲಾ ಶಿಕ್ಷಕರ ನಾಡಗೀತೆ ಮತ್ತು ಗಂಧರ್ವ ಕಲಾತಂಡ ಪ್ರಸ್ತುತಪಡಿಸಿದ ರೈತ ಗೀತೆ ಗಮನ ಸೆಳೆಯಿತು.