ಹದಿನೆAಟನೇ ವರ್ಷದ ಇಶಾ ಗ್ರಾಮೋತ್ಸವ-26 ರೂರಲ್ ಪ್ರೀಮಿಯರ್ ಲೀಗ್ ಮೊದಲನೇ ಹಂತದ ಕ್ಲಸ್ಟರ್ ಪಂದ್ಯಗಳ ಉದ್ಘಾಟನೆ ಸಂದರ್ಭ ಗಣ್ಯರು ಪಾಲ್ಗೊಂಡಿದ್ದರು. ನಿವೃತ್ತ ಸುಬೇದಾರ್ ಎ.ಕೆ. ರಂಜಿತ್, ತೇಜಸ್ವಿನಿ ಶರ್ಮ, ಸಿಂಚನ ಪ್ರೀತಂ ಶೆಟ್ಟಿ, ರಾಹಿಲ್, ತರುಣ್ ಗೌಡ, ನಮೃತಾ, ಅರ್ಪಿತಾ ಮತ್ತಿತರರು ಇದ್ದರು. 
ಕೊಡಗು

ಕುಶಾಲನಗರದಲ್ಲಿ ಇಶಾ ಗ್ರಾಮೋತ್ಸವ-26

ಕುಶಾಲನಗರ:
ಹದಿನೆಂಟನೇ ವರ್ಷದ ಇಶಾ ಗ್ರಾಮೋತ್ಸವ-26 ರೂರಲ್ ಪ್ರೀಮಿಯರ್ ಲೀಗ್ ಮೊದಲನೇ ಹಂತದ ಕ್ಲಸ್ಟರ್ ಪಂದ್ಯಗಳಿಗೆ ಕುಶಾಲನಗರದಲ್ಲಿ ಈಚೆಗೆ ಚಾಲನೆ ನೀಡಲಾಯಿತು. ಕುಶಾಲನಗರ ಪಿಎಂಶ್ರೀ ಸರ್ಕಾರಿ ಶಾಲೆ ಮೈದಾನದಲ್ಲಿ ನಡೆದ ಪಂದ್ಯಾಟಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಮತ್ತು ಗಣ್ಯರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಕುಮಾರ್, ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲಿ ಅವಕಾಶ ಕಲ್ಪಿಸುತ್ತಿರುವುದು ಉತ್ತಮ ಕಾರ್ಯ ಎಂದು ಹೇಳಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ನಿವೃತ್ತ ಸುಬೇದಾರ್ ಎ.ಕೆ. ರಂಜಿತ್, ಚಲನಚಿತ್ರ ನಟಿಯರಾದ ತೇಜಸ್ವಿನಿ ಶರ್ಮ, ಸಿಂಚನ ಪ್ರೀತಂ ಶೆಟ್ಟಿ, ಸಾಮಾಜಿಕ ಜಾಲತಾಣದ ಪ್ರಮುಖರಾದ ರಾಹಿಲ್, ಅಂತರರಾಷ್ಟ್ರೀಯ ವಾಲಿಬಾಲ್ ಆಟಗಾರ ತರುಣ್ ಗೌಡ, ರಾಷ್ಟ್ರೀಯ ತ್ರೋಬಾಲ್ ಆಟಗಾರರಾದ ನಮೃತಾ, ಅರ್ಪಿತಾ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದನ್ ಪಾಲ್ಗೊಂಡು ಕ್ರೀಡಾಕೂಟಕ್ಕೆ ಶುಭ ಕೋರಿದರು.
ಗ್ರಾಮೀಣ ಕ್ರೀಡಾಕೂಟದ ಮಾಧ್ಯಮ ಸ್ವಯಂಸೇವಕ ರವಿತೇಜ ಮಾಹಿತಿ ನೀಡಿ ಇಶಾ ಗ್ರಾಮೋತ್ಸವ ಮೂಲಕ ಸಮುದಾಯಗಳನ್ನು ಒಗ್ಗೂಡಿಸುವ, ಬೇರು ಮಟ್ಟದ ಪ್ರತಿಭೆಗಳನ್ನು ಪೋಷಿಸುವ ಮತ್ತು ಸಾಮಾಜಿಕ ರೂಪಾಂತರಗಳನ್ನು ಪ್ರೋತ್ಸಾಹಿಸುವ ಕ್ರೀಡಾ ಉತ್ಸವವಾಗಿದೆ. ದೇಶದಾದ್ಯಂತ ಗ್ರಾಮೀಣ ಪ್ರದೇಶಗಳ ಸುಮಾರು 80 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಈ ವೇದಿಕೆ ಅವಕಾಶ ಕಲ್ಪಿಸುತ್ತಿದೆ. ದೇಶದ 10 ರಾಜ್ಯಗಳಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು ಸೆ.6 ರಂದು ಕೊಯಮತ್ತೂರು ಇಶಾ ಯೋಗ ಕೇಂದ್ರದಲ್ಲಿ ಫೈನಲ್ ಪಂದ್ಯಾಟ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕ್ರೀಡೋತ್ಸವದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ವಾಲಿಬಾಲ್ ಪಂದ್ಯಾಟಕ್ಕೆ 15 ಪುರುಷರ ತಂಡಗಳು ಮತ್ತು ಥ್ರೋ ಬಾಲ್
ಪಂದ್ಯಾಟಕ್ಕೆ 11 ಮಹಿಳಾ ತಂಡಗಳು ಪಾಲ್ಗೊಂಡಿದ್ದವು. ಇಶಾ ಗ್ರಾಮೋತ್ಸವ ಕುಶಾಲನಗರ ಕ್ರೀಡಾ ಸಂಯೋಜಕ ಅಖಿಲ್, ಸ್ವಯಂ ಸೇವಕರಾದ ಚಿತ್ತರಂಜನ್, ಅಕ್ಷಯ್, ನಿರಂಜನ್, ಶ್ರೀಧರ್, ಅಮಿತ್ ಅಗಸ್ತ್ಯ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಕ್ರೀಡಾಪಟುಗಳು ಇದ್ದರು.