ಕುಶಾಲನಗರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ರಾಷ್ಟಿçÃಯ ಹೆದ್ದಾರಿ 275ರಲ್ಲಿ ನಿರ್ಮಿಸಿರುವ ಸೇತುವೆಗೆ ಕಬ್ಬಿಣದ ಜಾಲರಿ ಅಳವಡಿಸಿರುವುದು 26ಎಂಡಿಕೆ05: ಕುಶಾಲನಗರದಲ್ಲಿ ಇರುವ ಕಾವೇರಿ ನದಿಯ ಹಳೆಯ ಸೇತುವೆಗೂ ಕಬ್ಬಿಣದ ಜಾಲರಿ ಅಳವಡಿಸುವಂತೆ ಬೇಡಿಕೆ ಕೇಳಿಬಂದಿದೆ. 
ಕೊಡಗು

ಕಾವೇರಿ ಕಲುಷಿತ ತಡೆಯಲು ಕಬ್ಬಿಣದ ಬೇಲಿ

ಮಡಿಕೇರಿ:
ನದಿಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣ ಪ್ರಜ್ಞಾವಂತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಸಂಬAಧಿಸಿದAತೆ ತೆಗೆದುಕೊಳ್ಳುವ ಚಿಕ್ಕ ಚಿಕ್ಕ ಮುನ್ನೆಚ್ಚರಿಕೆ ಕ್ರಮಗಳು ಕೂಡ ದೊಡ್ಡ ಮಟ್ಟದಲ್ಲಿ ಪರಿಣಾಮಗಳನ್ನು ಬೀರುತ್ತವೆ. ಇದೀಗ ಕೊಡಗಿನಲ್ಲಿ ಕುಶಾಲನಗರದ ಕಾವೇರಿ ನದಿ ಸೇತುವೆಯ ಎರಡೂ ಬದಿಗಳಿಗೆ ಕಬ್ಬಿಣದ ಜಾಲರಿ ಅಳವಡಿಕೆ ಮಾಡಲಾಗುತ್ತಿದ್ದು, ಸೇತುವೆ ಮೇಲಿನಿಂದ ನದಿಗೆ ತ್ಯಾಜ್ಯ ಸುರಿಯುವ ಚಾಳಿಗೆ ಕಡಿವಾಣ ಹಾಕುವಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಮುಂಜಾನೆ ಅಥವಾ ಮುಸ್ಸಂಜೆಯ ನಸುಗತ್ತಲೆಯ ಸಮಯ. ವಾಹನಗಳು ಹೆಡ್‌ಲೈಟ್ ಹಾಕಿಕೊಂಡೇ ಓಡಾಡುತ್ತಿರುತ್ತವೆ. ಅದೆಲ್ಲಿಂದೋ ಬರುವ ಕಾರು, ಆಟೋ, ಬೈಕ್‌ನಲ್ಲಿ ಬರುವವರು ಸೇತುವೆ ಮೇಲೆ ನಿಂತು, ಚೀಲದಲ್ಲಿ ತಂದಿರುವ ತ್ಯಾಜ್ಯವನ್ನೆಲ್ಲಾ ನದಿಗೆ ಸುರಿದು ಹಾಗೆಯೇ ಕತ್ತಲಿನಲ್ಲಿ ಮರೆಯಾಗಿಬಿಡುತ್ತಾರೆ. ಇದು ನದಿ ದಂಡೆಯಲ್ಲಿರುವ ಬಹುತೇಕ ಎಲ್ಲಾ ನಗರಗಳಲ್ಲೂ ಕಂಡು ಬರುವ ಸಾಮಾನ್ಯ ದೃಶ್ಯ. ಸ್ಥಳೀಯ ಆಡಳಿತದಿಂದ ಮನೆ ಮನೆ ಬಾಗಿಲಿಗೂ ಬಂದು ಕಸ ಸಂಗ್ರಹಿಸುವ ವ್ಯವಸ್ಥೆ ಈಗ ಮಾಡಿಕೊಟ್ಟಿದ್ದರೂ ನದಿಗೆ ಕಸ ಎಸೆಯುವ ಚಾಳಿ ಮಾತ್ರ ಕಡಿಮೆ ಆಗಿಲ್ಲ. ಜಿಲ್ಲೆಯ ನಗರಗಳೂ ಇದರಿಂದ ಹೊರತಾಗಿಲ್ಲ.
ಕೊಡಗಿನಲ್ಲಿ ಉಗಮವಾಗಿ ದಕ್ಷಿಣಭಾರತವನ್ನು ಸಂಪದ್ಭರಿತವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿರುವುದಲ್ಲದೇ ಜೀವನದಿಯೂ ಆಗಿಯೂ ಕಾವೇರಿ ತ್ಯಾಜ್ಯ ಕಂಟಕದಿAದ ತವರಿನಲ್ಲೇ ಮಲೀನವಾಗಿ ಮುಂದಕ್ಕೆ ಹರಿಯುತ್ತದೆ. ಕಾವೇರಿ ಜನ್ಮತಾಳುವ ತಲಕಾವೇರಿಯಿಂದ ಕೊಡಗಿನ ಗಡಿಭಾಗ ಶಿರಂಗಾಲದ ತನಕ ಒಟ್ಟು 23 ಗ್ರಾಮ ಪಂಚಾಯಿತಿಗಳು ಮತ್ತು ಒಂದು ಪುರಸಭೆ ಕಾವೇರಿ ನದಿ ದಂಡೆಯಲ್ಲಿದೆ. ನಾಪೋಕ್ಲು, ಸಿದ್ದಾಪುರ, ಕುಶಾಲನಗರ, ಕೂಡಿಗೆ ಸೇರಿದಂತೆ ದೊಡ್ಡ ದೊಡ್ಡ ಊರುಗಳು ಕಾವೇರಿ ಮತ್ತು ಅದರ ಉಪನದಿಗಳ ದಡದಲ್ಲಿದ್ದು, ನದಿ ಮಾಲೀನ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ.
ನದಿಗಡ್ಡಲಾಗಿ ನಿರ್ಮಿಸಿರುವ ಸೇತುವೆಗಳಿಗೆ ಜಾಲರಿ ನಿರ್ಮಿಸುವ ಮೂಲಕ ಸೇತುವೆಯಿಂದ ನದಿಗೆ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಬಹುದು ಎನ್ನುವುದು ನದಿ ಸ್ವಚ್ಛತಾ ಹೋರಾಟಗಾರರ ಸಲಹೆ. ಈ ಸಂಬAಧ ಸಂಬAಧಿಸಿದ ಸ್ಥಳೀಯಾಡಳಿತಗಳಿಗೆ ದಶಕದಷ್ಟು ಹಿಂದಿನಿAದಲೂ ಮನವಿ ಸಲ್ಲಿಸುತ್ತಾ ಬರಲಾಗುತ್ತಿದೆ. ಆದರೆ ಜಾಲರಿ ನಿರ್ಮಾಣ ಕಾರ್ಯ ಒಂದಿಲ್ಲೊAದು ಕಾರಣದಿಂದ ನೆನೆಗುದಿಗೆ ಬೀಳುತ್ತಲೇ ಇದೆ. ಇದಕ್ಕೆ ಹಣಕಾಸಿನ ಅಭಾವ ಪ್ರಮುಖ ನೆಪವಾದರೆ ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೂ ಮತ್ತೊಂದು ಕಾರಣವಾಗಿದೆ.
ಜಿಲ್ಲೆಯ ಹೆಬ್ಬಾಗಿಲು ಖ್ಯಾತಿಯ ಕುಶಾಲನಗರದಲ್ಲಿ ಕಾವೇರಿ ನದಿ ವಿಸ್ತಾರವಾಗಿ ಹರಿಯುತ್ತದೆ. ಮೈಸೂರು-ಮಂಗಳೂರು ಸಂಪರ್ಕಿಸುವ ರಾಷ್ಟಿçÃಯ ಹೆದ್ದಾರಿ 275 ಇಲ್ಲಿ ಇದೇ ನದಿ ಮೇಲೆ ಹಾದು ಹೋಗಿದೆ. ಈ ಸ್ಥಳದಲ್ಲಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ತ್ಯಾಜ್ಯ ಎಸೆಯುವವರಿಗೆ ಅಚ್ಚುಮೆಚ್ಚಿನ ಸ್ಥಳ. ಆಗಾಗ್ಗೆ ಈ ಸೇತುವೆ ಕೆಳಭಾಗದಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಸಂದರ್ಭ ಸಂಗ್ರಹವಾಗುವ ಲೋಡ್‌ಗಟ್ಟಲೆ ಕಸವೇ ಇದಕ್ಕೆ ಸಾಕ್ಷಿ. ಹಾಗಾಗಿ ಇಲ್ಲಿ ಸೇತುವೆಯ ಎರಡೂ ಬದಿಗೆ ಜಾಲರಿ ನಿರ್ಮಿಸಬೇಕು ಎನ್ನುವ ಬೇಡಿಕೆಯನ್ನು ಸ್ಥಳೀಯ ಪ್ರಜ್ಞಾವಂತರು ಇಡುತ್ತಲೇ ಬಂದಿದ್ದರು.
ನಾಲ್ಕು ವರ್ಷಗಳ ಹಿಂದೆ ಯೋಜನೆ ಸಿದ್ಧವಾಗಿತ್ತಾದರೂ ರಾಷ್ಟಿçÃಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದೇ ಇದ್ದ ಕಾರಣ ಯೋಜನೆ ನೆನೆಗುದಿಗೆ ಬಿದ್ದಿತ್ತು. ಆದರೆ ಇದೀಗ ಕಾಲ ಕೂಡಿ ಬಂದಿದ್ದು ಜಾಲರಿ ಅಳವಡಿಕೆ ಕಾರ್ಯ ನಡೆದಿದೆ. ಯೂನಿಯನ್ ಬ್ಯಾಂಕ್‌ನ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿಕೊಂಡು 8.75 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ಜಾರಿಗೆ ತರಲಾಗಿದೆ. ರಾಷ್ಟಿçÃಯ ಹೆದ್ದಾರಿಯ ಮಾನದಂಡಗಳ ಅಡಿಯಲ್ಲೇ ನಿಗದಿಪಡಿಸಿರುವ ಅಳತೆಗಳಿಗೆ ಅನುಗುಣವಾಗಿ ಜಾಲರಿ ಅಳವಡಿಸಲಾಗಿದೆ ಎಂದು ಕುಶಾಲನಗರ ಪುರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗ ಇಲ್ಲಿ ಜಾಲರಿ ಅಳವಡಿಕೆ ಆಗಿರುವುದರಿಂದ ಸೇತುವೆ ಮೇಲೆ ನಿಂತು ಕಸ ಎಸೆಯುವುದು ನಿಯಂತ್ರಣಕ್ಕೆ ಬರಲಿದೆ. ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಪ್ರಕರಣಗಳಿಗೂ ಪೂರ್ಣ ವಿರಾಮ ಬೀಳಲಿದೆ. ಜಾಲರಿಯ ಎತ್ತರವನ್ನು ಇನ್ನೂ ಸ್ವಲ್ಪ ಹೆಚ್ಚಿಸಬೇಕಿತ್ತು ಎನ್ನುವ ಅಭಿಪ್ರಾಯಗಳು ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಪ್ರಸ್ತುತ ಕಾಮಗಾರಿಯ ಪರಿಣಾಮ ಗಮನಿಸಿ ಅಗತ್ಯಬಿದ್ದರೆ ಈಗ ಅಳವಡಿಕೆ ಮಾಡಿರುವ ಜಾಲರಿ ಮೇಲೆ ಮುಳ್ಳು ತಂತಿ ಅಳವಡಿಕೆಯ ಚಿಂತನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಕ್ಕದಲ್ಲಿ ಇರುವ ಹಳೆಯ ಸೇತುವೆಯ ಎರಡೂ ಬದಿಗಳಿಗೆ ಇಂಥದ್ದೇ ವ್ಯವಸ್ಥೆ ಮಾಡಬೇಕು ಎನ್ನುವ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿರುವ ಅಧಿಕಾರಿಗಳು ಇಲ್ಲಿಯೂ ಎರಡು ಕಡೆಗಳಲ್ಲಿ ಜಾಲರಿ ಅಳವಡಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಪ್ರಸ್ತಾವನೆಯನ್ನು ಸಂಬAಧಿಸಿದವರಿಗೆ ಕಳಿಸಲಾಗಿದೆ. ಇಲ್ಲಿಯೂ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿಕೊಂಡು ಜಾಲರಿ ನಿರ್ಮಿಸುವ ಚಿಂತನೆ ಇದೆ.
ಕುಶಾಲನಗರ ಕಾವೇರಿ ನದಿಗೆ ಸೇತುವೆ ಜಾಲರಿ ನಿರ್ಮಿಸಿದ ಮಾದರಿಯಲ್ಲಿ ಜಿಲ್ಲೆಯ ಇತರೆಡೆಗಳಲ್ಲೂ ಸೇತುವೆಯ ಎರಡೂ ಬದಿಗಳಿಗೆ ಜಾಲರಿ ಅಳವಡಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಈ ರೀತಿ ಮಾಡುವುದರಿಂದ ನದಿಗಳ ಮಾಲಿನ್ಯ ತಡೆಯುವಲ್ಲಿ ದೊಡ್ಡ ಮಟ್ಟಿಗಿನ ಯಶಸ್ಸು ಸಾಧಿಸಬಹುದು ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
"

ಕೊಡಗು-ಮೈಸೂರು ಗಡಿಭಾಗದ ಗೇಟ್ ಬಳಿ ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ರಾಷ್ಟಿçÃಯ ಹೆದ್ದಾರಿ 275ರಲ್ಲಿ ಇರುವ ಸೇತುವೆಯ ಎರಡೂ ಬದಿಗೆ ಕಬ್ಬಿಣದ ಜಾಲರಿ ಅಳವಡಿಸಲಾಗಿದೆ. ಯೂನಿಯನ್ ಬ್ಯಾಂಕ್ ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿ 8.75 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗಿದೆ. ರಾಷ್ಟಿçÃಯ ಹೆದ್ದಾರಿ ಇಲಾಖೆ ನಿಗದಿ ಮಾಡಿರುವ ಮಾನದಂಡದ ಅಡಿಯಲ್ಲಿ ನಿಗದಿತ ಪ್ರಮಾಣಕ್ಕೆ ಅನುಗುಣವಾಗಿ ಕಾಮಗಾರಿ ನಡೆಸಲಾಗಿದೆ. ಅಲ್ಲಿರುವ ಹಳೇ ಸೇತುವೆಗೂ ಇದೇ ರೀತಿಯಲ್ಲಿ ಜಾಲರಿ ಅಳವಡಿಸಲು ನಿರ್ಧರಿಸಲಾಗಿದ್ದು, ಸಂಬAಧಿಸಿದವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

"

ಕುಶಾಲನಗರ ಸೇತುವೆಗೆ ಕಬ್ಬಿಣದ ಜಾಲರಿ ಅಳವಡಿಸಿರುವುದು ಉತ್ತಮ ಕಾರ್ಯ. ಸೇತುವೆ ಅಪಾಯಕಾರಿಯಾಗಿ ಇತ್ತು. ಈ ರೀತಿ ಮಾಡಿರುವುದರಿಂದ ಈಗ ಸೇತುವೆ ಮೇಲಿನಿಂದ ಕಸ ಎಸೆಯುವುದು ತಪ್ಪಲಿದೆ. ಈ ಮೂಲಕ ನದಿ ಸ್ವಚ್ಛತೆಗೆ ಪೂರಕ ಕೆಲಸ ಮಾಡಲಾಗಿದೆ. ಅಲ್ಲಿಯ ಹಳೆಯ ಸೇತುವೆಗೂ ಇಂಥದ್ದೇ ಕೆಲಸ ಆಗಬೇಕಿದೆ. ಇದರಿಂದ ನದಿಗೆ ತ್ಯಾಜ್ಯ ಎಸೆಯುವುದು ತಪ್ಪುತ್ತದೆ. ಜತೆಗೆ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳಿಗೂ ಕಡಿವಾಣ ಬೀಳುತ್ತದೆ.

"

ಕೆಲವರು ಸೇತುವೆ ಮೇಲಿನಿಂದ ಕಸ ಎಸೆಯುವ ಮೂಲಕ ಕಾವೇರಿ ನದಿ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದರು. ಇದನ್ನು ತಡೆಗಟ್ಟಲು ಸೇತುವೆಯ ಎರಡೂ ಬದಿಗೂ ಜಾಲರಿ ಅಳವಡಿಸುವಂತೆ ಕುಶಾಲನಗರ ಪುರಸಭೆಗೆ ಮನವಿ ಮಾಡಿಕೊಳ್ಳಲಾಗಿತ್ತು. ಈ ಯೋಜನೆ ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಈಗ ಜಾರಿಗೆ ತರುವ ಮೂಲಕ ಪುರಸಭೆಯಿಂದ ಉತ್ತಮ ಕೆಲಸ ಆಗಿದೆ. ನದಿಗಳ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಸೇತುವೆಗಳಲ್ಲೂ ಇಂಥ ಕೆಲಸ ಆಗಬೇಕಿದೆ.