ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಐತಿಚಂಡ ರಮೇಶ್ ಉತ್ತಪ್ಪ ಅವರನ್ನು ಗುರುವಾರ ಮೈಸೂರಿನ ಅವರ ನಿವಾಸದಲ್ಲಿ ಫಲತಾಂಬೂಲ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು. ಎಂ.ಪಿ.ಕೇಶವ ಕಾಮತ್, ಕಡ್ಲೇರ ತುಳಸಿ ಮೋಹನ್ ಇತರರು ಇದ್ದರು.  
ಕೊಡಗು

ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಆಹ್ವಾನ

ನಾಪೋಕ್ಲು: ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರನ್ನು ಗುರುವಾರ ಆಹ್ವಾನಿಸಲಾಯಿತು.
ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಪೋಕ್ಲು ಹೋಬಳಿಯ ಕಡಂಗ ಅರಪಟ್ಟು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 20ರಂದು ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರನ್ನು ಗುರುವಾರ ಮೈಸೂರಿನ ಅವರ ನಿವಾಸದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಹಾಗೂ ಸಮ್ಮೇಳನದ ಉಪ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭೇಟಿಯಾಗಿ, ಫಲ ತಾಂಬೂಲ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಿದರು.
ಗೌರವ ಸ್ವೀಕರಿಸಿದ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, ಇದು ನನ್ನ ಸಾಹಿತ್ಯ ಸೇವೆಗೆ ನನ್ನ ಹುಟ್ಟೂರಿನಲ್ಲಿ ಸಿಗುತ್ತಿರುವ ಮಹೋನ್ನತ ಗೌರವ. ಈ ಗೌರವ ನೀಡುತ್ತಿರುವುದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದ ಎಂದರು.
ಈ ಸಂದರ್ಭ ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷ, ಹಣಕಾಸು ಸಮಿತಿ ಅಧ್ಯಕ್ಷರೂ ಆದ ಕೋಡಿರ ವಿನೋದ್ ನಾಣಯ್ಯ, ಸಂಚಾಲಕ ಕಣಿಯರ ಜಯಪ್ರಕಾಶ್, ಆಹಾರ ಸಮಿತಿ ಅಧ್ಯಕ್ಷ ಐತಿಚಂಡ ಪ್ರಕಾಶ್ ಕಾರ್ಯಪ್ಪ, ವೇದಿಕೆ ನಿರ್ವಹಣಾ ಸಮಿತಿ ಅಚ್ಛಾಂಡಿರ ತಾರಾ ಉದಯ, ಸಮಿತಿಯ ಸದಸ್ಯರಾದ ಬೇಪಡಿಯಂಡ ಅರುಣ, ನೆರಪಂಡ ಸತೀಶ್, ಬಟ್ಟಿಯಂಡ ಅಂಬಿಕಾ ಅಶೋಕ್, ಬಾಕಿಲನ ಮಮತಾ ಸಚಿನ್, ಸಂಧ್ಯಾ ಕಾಮತ್, ಇತರರಿದ್ದರು.