ವಿಶ್ವಕರ್ಮ ಜಯಂತಿ ಅಂಗವಾಗಿ ಕೊಡ್ಲಿಪೇಟೆಯಲ್ಲಿ ವಿಶ್ವಕರ್ಮ ಸಮಾಜ ಸ್ಥಳೀಯ ಚೌಡೇಶ್ವರಿ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಮಂತರ್ ಗೌಡ ಮಾತನಾಡಿದರು. ಕೆ.ಆರ್.ಚಂದ್ರಶೇಖರ್, ಕೆ.ಎ.ನಾಗೇಶ್, ಸುಬ್ರಹ್ಮಣ್ಯಾಚಾರ್, ಜನಾರ್ದನ್ ಇತರರಿದ್ದರು. 
ಕೊಡಗು

ಮುಂದಿನ ಪೀಳಿಗೆಗೆ ವೃತ್ತಿ ಕೌಶಲ ಪರಿಚಯಿಸಿರಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ. ಮಂತರ್ ಗೌಡ ಸಲಹೆ
ಶನಿವಾರಸಂತೆ: ವಿಶ್ವಕರ್ಮ ಸಮುದಾಯವು ತನ್ನ ಕಲೆ, ಕೌಶಲ ಹಾಗೂ ಶ್ರಮದ ಮೂಲಕ ಸಮಾಜದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಸ್ಮರಿಸಬೇಕು ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.
ವಿಶ್ವಕರ್ಮ ಜಯಂತಿ ಅಂಗವಾಗಿ ಕೊಡ್ಲಿಪೇಟೆಯಲ್ಲಿ ವಿಶ್ವಕರ್ಮ ಸಮಾಜ ಸ್ಥಳೀಯ ಚೌಡೇಶ್ವರಿ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾರಂಪರಿಕ ಕಲೆ ಮತ್ತು ವೃತ್ತಿ ಕೌಶಲಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಹಾಗೂ ಸಮುದಾಯದ ಅಭಿವೃದ್ಧಿಗೆ ಅಗತ್ಯವಾದ ಸಹಕಾರ ನೀಡುವುದಾಗಿ ತಿಳಿಸಿದರು,
ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಮಾಜಿ ಅದ್ಯಕ್ಷ ಕೆ.ಆರ್.ಚಂದ್ರಶೇಖರ್ ಮತ್ತು ಔರಂಗಜೇಬ್ ಕಾರ್ಯಕ್ರಮಕ್ಕೆ ಶುಭ ಕೋರಿ ಮಾತನಾಡಿದರು,
ಹೋಬಳಿ ವಿಶ್ವಕರ್ಮ ಸಮಿತಿಯ ಅದ್ಯಕ್ಷ ಕೆ.ಎ.ನಾಗೇಶ್, ಗೌರವ ಅದ್ಯಕ್ಷ ಸುಬ್ರಹ್ಮಣ್ಯಚಾರ್, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಜನಾರ್ದನ್, ತಾಲೂಕು ಕೆ.ಡಿ.ಪಿ.ಸದಸ್ಯ ವೇದಕುಮಾರ್, ಚೌಡೇಶ್ವರಿ ದೇವಸ್ಥಾನ ಸಮಿತಿ ಅದ್ಯಕ್ಷ ಹರೀಶ್, ಹಿರಿಯರಾದ ಜಯರಾಂ ಆಚಾರ್,ವಿಶ್ವಕರ್ಮ ಸಮಿತಿಯ ಕಾರ್ಯದರ್ಶಿಗಳಾದ ಶಿವಕುಮಾರ್ , ಡಿ.ಜಿ.ಕೇಶವ, ವಿಶ್ವಕರ್ಮ ಜಯಂತಿ ಆಚರಣಾ ಸಮಿತಿಯ ಪದಾಧಿಕಾರಿಗಳಾದ ರಮೇಶ್ ,ಸಂತೋಷ್ ,ನವೀನ, ರವಿಕುಮಾರ್, ಹರೀಶ ಇತರರಿದ್ದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ಸಮುದಾಯದ ಭವನ ಕೋರಿ ಶಾಸಕರಿಗೆ ಮನವಿ ಸಲ್ಲಿಸಿದರು. ಬೇಡಿಕೆಯಂತೆ ಸ್ಥಳ ಗುರಿತಿಸಿದರೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಶಾಸಕರು ಘೋಷಿಸಿದರು.