ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷೆ ಗೌಡ ಜನಾಂಗ ಬಾಂಧವರಿಗಾಗಿ ಏರ್ಪಡಿಸಿರುವ ಗೌಡ ಕ್ರೀಡಾ ಹಬ್ಬಕ್ಕೆ ಕೊಡಗು ಗೌಡ ಸಮಾಜದ ಅಧ್ಯಕ್ಷ ದಂಬೆಕೋಡಿ ಆನಂದ ಚಾಲನೆ ನೀಡಿದರು. ಆನಂದ್ ಕರಂದ್ಲಾಜೆ, ಬೆಪ್ಪುರನ ಅಣ್ಣಪ್ಪಕುಮಾರ್, ಪದ್ಮಪ್ರಿಯ ಸಿಂಗೂರು, ಪಾಣತ್ತಲೆ ಜಗದೀಶ್ ಮಂದಪ್ಪ, ಪೇರಿಯನ ಉದಯ ಮತ್ತಿತರರು ಇದ್ದರು.
ಕೊಡಗು ಗೌಡ ಸಮಾಜಕ್ಕೆ ಸರ್ಕಾರ ಮಂಜೂರು ಮಾಡಿರುವ ಜಾಗದಲ್ಲಿ ಅಂತಾರಾಷ್ಟಿçÃಯ ಗುಣಮಟ್ಟದ ಟರ್ಫ್ ಮೈದಾನ ನಿರ್ಮಿಸಿ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಕೊಡಗು ಗೌಡ ಸಮಾಜದ ಅಧ್ಯಕ್ಷ ದಂಬೆಕೋಡಿ ಆನಂದ ಹೇಳಿದರು. ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷೆ ಗೌಡ ಜನಾಂಗ ಬಾಂಧವರಿಗಾಗಿ ನಗರದ ಗಾಂಧಿ ಮೈದಾನದಲ್ಲಿ 2 ದಿನಗಳ ಕಾಲ ಏರ್ಪಡಿಸಲಾಗಿರುವ ಗೌಡ ಕ್ರೀಡಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರಿಕೆಟ್, ಹಾಕಿಯಂತೆ ಫುಟ್ಬಾಲ್ ಕೂಡ ಉತ್ತಮ ಕ್ರೀಡೆಯಾಗಿದೆ. ಈ ಕ್ರೀಡೆಯಲ್ಲಿ ಯುವ ಪೀಳಿಗೆ ತೊಡಗಿಸಿಕೊಂಡು ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿಪ್ರಯತ್ನ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಮಾತನಾಡಿ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಕಳೆದ ವರ್ಷ ಕೂಡ ಉತ್ತಮ ರೀತಿಯಲ್ಲಿ ಕ್ರೀಡಾಕೂಟ ಏರ್ಪಡಿಸಲಾಗಿದ್ದು. ಅದನ್ನು ಮುಂದುವರಿಸಿಕೊAಡು ಬರುತ್ತಿರುವದು ಉತ್ತಮ ಕಾರ್ಯ. ಕ್ರೀಡಾಕೂಟ ಆಯೊಜನೆ ಮಾಡುವದು ಕಷ್ಟದ ಕೆಲಸ. ಜನಾಂಗ ಬಾಂಧವರು ಸಮಯ ಮೀಸಲಿರಿಸಿಕೊಂಡು ಆಯೋಜಕರಿಗೆ ಶಕ್ತಿ ನೀಡುವ ಕೆಲಸ ಮಾಡಬೇಕು.
ಸಾಮಾನ್ಯವಾಗಿ ಮಾರ್ಚ್ನಿಂದ ಮೇ ತಿಂಗಳವರೆಗೆ ಕ್ರೀಡಾಕೂಟಗಳು ನಡೆಯುತ್ತವೆ. ಸರ್ಕಾರದ ಅನುದಾನವಿಲ್ಲದಿದ್ದರೂ ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತದೆ. ಎಲ್ಲರೂ ಸಂಘಟಿತರಾಗಿ ದೊಡ್ಡಮಟ್ಟದಲ್ಲಿ ಪೂರ್ವ ತಯಾರಿಯೊಂದಿಗೆ ಆಯೋಜನೆ ಮಾಡಬೇಕಿದೆ. ಕ್ರೀಡಾಕೂಟಗಳಿಂದ ಪ್ರತಿಭೆಗಳನ್ನು ಗುರುತಿಸಿ ಕ್ರೀಡಾಶಾಲೆಗಳಿಗೆ ಕಳುಹಿಸುವ ಕಾರ್ಯ ಆಗಬೇಕು. ಇದಕ್ಕೆ ಒಕ್ಕೂಟದ ವತಿಯಿಂದ ಧನ ಸಹಾಯ ಮಾಡುವದಾಗಿ ಹೇಳಿದರು.
ಅಂತಾರಾಷ್ಟಿçÃಯ ಫುಟ್ಬಾಲ್ ಆಟಗಾರರಾದ ಬೆಪ್ಪುರನ ಅಣ್ಣಪ್ಪಕುಮಾರ್, ಪದ್ಮಪ್ರಿಯ ಸಿಂಗೂರು, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ, ರಾಷ್ಟಿçÃಯ ಫುಟ್ಬಾಲ್ ಆಟಗಾರ್ತಿ ಕೋಡಿ ವಿದಿತ, ಕೊಡಗು ಗೌಡ ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಕುಟ್ಟನ ಪ್ರಶಾಂತ್, ಗೌಡ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಮಂಞAಡ್ರ ವಿನೋದ್, ಅಕಾಡೆಮಿ ಪದಾಧಿಕಾರಿ ಕಲ್ಲುಮುಟ್ಲು ಜಶ್ಮಿ, ಕುಡೆಕಲ್ ಸಂತೋಷ್, ಪೊನ್ನಚನ ಶ್ರೀನಿವಾಸ್ ಇದ್ದರು.
ಸಭಾ ಕಾರ್ಯಕ್ರಮದ ನಂತರ ಬಾಲಕರ, ಬಾಲಕಿಯರ, ಹಿರಿಯರ ಫುಟ್ಬಾಲ್ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾವಳಿಗಳು ನಡೆದವು. ಭಾನುವಾರ (ಏ.19) ಅಂತಿಮ ಪಂದ್ಯಾಟಗಳು ನಡೆಯಲಿದ್ದು, ಹಳೆಯ ಹಾಗೂ ಸೂಪರ್ ಬೈಕ್‌ಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.