ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿದರು. 
ಕೊಡಗು

ಮಾ.೨೯ರಿಂದ ಅಂತರ ಗ್ರಾಮ ಹಾಕಿ ಪಂದ್ಯಾವಳಿ

ಪ್ರಮುಖ ಮುಖ್ಯಾಂಶಗಳು

  • ಮಾ.೨೯ರಿಂದ ಅಂತರ ಗ್ರಾಮ ಹಾಕಿ ಪಂದ್ಯಾವಳಿ
ಮಡಿಕೇರಿ: ನಾಲ್ನಾಡ್ ವ್ಯಾಪ್ತಿಯ ಬಲ್ಲಮಾವಟಿ, ನಾಪೋಕ್ಲು, ಕಕ್ಕಬೆ-ಕುಂಜಿಲ, ಎಮ್ಮೆಮಾಡು ಗ್ರಾ.ಪಂಚಾಯಿತಿಯ ಗ್ರಾಮಗಳಿಗೆ ಅಂತರ ಗ್ರಾಮ ಹಾಕಿ ಪಂದ್ಯಾವಳಿ ಮತ್ತು ಹಗ್ಗಜಗ್ಗಾಟ ಸ್ಪರ್ಧೆ ಮಾ.೨೯ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾಕೂಟ ಸಂಚಾಲಕ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ತಿಳಿಸಿದ್ದಾರೆ.
ಬಲ್ಲಮಾವಟಿಯ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ೧೩ನೇ ವರ್ಷದ ಪಂದ್ಯಾಟ ಇದಾಗಿದ್ದು, ೫ ದಿನಗಳ ಕಾಲ ನಡೆಯಲಿದೆ. ಅಂದು ಮಹಿಳೆಯರಿಗೆ ಅಂತರ್ ಗ್ರಾಮ ಮಟ್ಟದ ಹಗ್ಗಜಗ್ಗಾಟ ಪಂದ್ಯಾಟ ನಡೆಯಲಿದೆ. ಜತೆಗೆ ನಾಲ್ನಾಡು ವ್ಯಾಪ್ತಿಯ ಪ್ರೌಢಶಾಲಾ ಮಕ್ಕಳಿಗೆ ಅಂತರ್ ಶಾಲಾ ಮಟ್ಟದ ಹಾಕಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕ್ರೀಡಾಕೂಟದ ಅಂಗವಾಗಿ ನಾಲ್ನಾಡ್ ವ್ಯಾಪ್ತಿಗೆ ಒಳಪಡುವ ಪ್ರೌಢಶಾಲಾ ಮಕ್ಕಳಿಗೆ ಅಂತರ್ ಶಾಲಾ ಮಟ್ಟದ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ. ನುರಿತ ತರಬೇತುದಾರರಿಂದ ೨೦ ದಿನಗಳ ಕಾಲ ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಲ್ಲಮಾವಟಿಯ ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕೆ.ಟಿ.ಸುರೇಶ್, ಕಾರ್ಯದರ್ಶಿ ಎಂ.ಯದುಕುಮಾರ್, ನಿದೇರ್ಶಕರಾದ ಕೋಟೇರ ಬೋಪಣ್ಣ, ಪಾಲೆಯಡ ಸಂತೋಷ್, ಅಪ್ಪಚೆಟ್ಟೋಳಂಡ ಹರ್ಷಿತ್ ಅಯ್ಯಪ್ಪ ಉಪಸ್ಥಿತರಿದ್ದರು.