ಕೂಡ್ಲೂರು ಉದ್ಯಮಿ ಕೆ.ಎನ್. ಪವನ್ ಕುಮಾರ್ ಕಾರ್ಯಕ್ರಮ ಚಾಲನೆ ನೀಡಿದರು. ಮರುಡೇಶ್ವರದ ಜಿತೇಂದ್ರ , ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಇನ್ನಿತರ ಗಣ್ಯರಿದ್ದರು.  
ಕೊಡಗು

ವಿಶ್ವಕ್ಕೆ ಜ್ಞಾನದ ಬೆಳಕು ನೀಡಿದ ದೇಶ ಭಾರತ

ಪ್ರಮುಖ ಮುಖ್ಯಾಂಶಗಳು

  • ಮರುಡೇಶ್ವರದ ಜಿತೇಂದ್ರ ಅಭಿಪ್ರಾಯ
ಕುಶಾಲನಗರ : ಸಾವಿರಾರು ವರ್ಷಗಳ ಇತಿಹಾಸವಿರುವ ತಾಯಿ ಭಾರತಾಂಬೆಯ ನೆಲದಲ್ಲಿ ಕುಟುಂಬ ಪದ್ಧತಿ ಗಟ್ಟಿಯಾಗಿದ್ದು, ಇಲ್ಲಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಾಗದ ಕಾರಣ, ಭಾರತವಾಗಿಯೇ ಈ ದೇಶ ಉಳಿದಿದ್ದು, ವಿಶ್ವಕ್ಕೆ ಜ್ಞಾನದ ಬೆಳಕು ನೀಡಿದ ದೇಶ ಭಾರತ ಎಂದು ಮರುಡೇಶ್ವರದ ಜಿತೇಂದ್ರ ಹೇಳಿದರು.
ಕೂಡುಮಂಗಳೂರು ಗ್ರಾ.ಪಂ. ವತಿಯಿಂದ ಗ್ರಾಮದ ದೊಡ್ಡಮ್ಮ ತಾಯಿ ದೇವಾಲಯದ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಜಗತ್ತಿಗೆ ಅಮೃತತ್ವದ ಹಾಲು ಕುಡಿಸಿ ತೊಟ್ಟಿಲಲ್ಲಿ ಇಟ್ಟು ಸಲುಹಿದ ದೇಶ ನಮ್ಮದು ಎಂದರು.
ಬಸವಾಪಟ್ಟಣದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.ಸಚಿವ ಅಪ್ಪಚ್ಚು ರಂಜನ್
ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್, ಮಂಡಲ ಸಂಯೋಜಕರಾದ ಸಿ.ಸಿ. ಸ್ವಾಮಿ, ಸಹ ಸಂಯೋಜಕರಾದ ವಿಮಲ್ ನಾಯರ್, ಕೂಡಿಗೆಯ ಶ್ರೀ ಸುಬ್ರಮಣ್ಯ ಸ್ವಾಮೀಜಿ ಇದ್ದರು.