ಮಾಲಂಬಿ ಗ್ರಾಮದಲ್ಲಿ ಕಾಣಿಸಿಕೊಂಡ ಕಾಡಾನೆ. 
ಕೊಡಗು

ಮಾಲಂಬಿಯಲ್ಲಿ ಹೆಚ್ಚಿದ ಕಾಡಾನೆ, ಚಿರತೆ ಹಾವಳಿ

ಪ್ರಮುಖ ಮುಖ್ಯಾಂಶಗಳು

  • ಭಯಭೀತರಾಗಿರುವ ಗ್ರಾಮಸ್ಥರು
ಶನಿವಾರಸಂತೆ: ಹೋಬಳಿ ವ್ಯಾಪ್ತಿಯ ಮಾಲಂಬಿ ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೆ ಕಾಡಾನೆ ಸಂಚರಿಸುತ್ತಿವೆ. ಇದರ ನಡುವೆ, ಚಿರತೆ ಹಾವಳಿಯೂ ಹೆಚ್ಚಾಗಿದ್ದು, ಗ್ರಾಮಸ್ಥರಲ್ಲಿ ಭೀತಿ ತರಿಸಿದೆ.
ಮಾಲಂಬಿ ಗ್ರಾಮದ ದೊಡ್ಡೆರೆ ಮೀಸಲು ಅರಣ್ಯದಿಂದ ಬರುವ ಕಾಡಾನೆಗಳು ಸಂಜೆಯಾಗುತ್ತಿದಂತೆ ಮುಖ್ಯರಸ್ತೆ ದಾಟಿ ಊರೊಳಗೆ ನುಸುಳುತ್ತಿವೆ. ಇತ್ತೀಚೆಗೆ ದೊಡ್ಡರೆ ಮೀಸಲು ಅರಣ್ಯದಿಂದ ಬಂದ ಒಂಟಿ ಸಲಗ ಗ್ರಾಮದ ಗಿರಿಜನ ಹಾಡಿ ಮೂಲಕ ಮುಖ್ಯ ರಸ್ತೆಯನ್ನು ದಾಟಿ ಪಕ್ಕದ ತೋಟದೊಳಗೆ ಹೋಗಿದೆ. ಕೆಲವು ದಿನಗಳಿಂದ ಮಾಲಂಬಿ ದೊಡ್ಡೆರೆ ಅರಣ್ಯದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಸಂಜೆ ವೇಳೆ ರಸ್ತೆ ದಾಟುತ್ತಿರುವುದನ್ನು ನೋಡಿ ಗ್ರಾಮಸ್ಥರು ಭಯಗೊಂಡಿದ್ದಾರೆ.
ಇನ್ನು ಮಾಲಂಬಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಮನೆಯಲ್ಲಿನ ಸಾಕು ನಾಯಿಯನ್ನು ಎಳೆದುಕೊಂಡು ಹೋಗಲು ಯತ್ನಿಸಿದೆ. ಗ್ರಾಮದ ಜಿ.ಎನ್.ವಸಂತ್ ಅವರ ಮನೆಯಲ್ಲಿನ ಸಾಕು ನಾಯಿಯೊಂದು ನಾಪತ್ತೆಯಾಗಿದ್ದು, ಮನೆ ಅಂಗಳದಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತು ಪತ್ತೆಯಾಗಿವೆ.