ಕಾರ್ಯಕ್ರಮದಲ್ಲಿ ನಾಪಂಡ ಮುತ್ತಪ್ಪ ಅವರನ್ನು ಸನ್ಮಾನಿಸಲಾಯಿತು. ಡಾ.ಮಂತರ್ ಗೌಡ, ಲಕ್ಷ್ಮಿ ವೆಂಕಟೇಶ್, ವಿ.ಪಿ.ಶಶಿಧರ್ ಇತರರಿದ್ದರು. 
ಕೊಡಗು

ಕಾರ್ಮಿಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಸತಿ ಶಾಲೆ

ಪ್ರಮುಖ ಮುಖ್ಯಾಂಶಗಳು

  • ಕಾರ್ಮಿಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಸತಿ ಶಾಲೆ
  • ಕಾರ್ಮಿಕರ ತಾಲ್ಲೂಕು ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂತರ್ ಗೌಡ

ಕುಶಾಲನಗರ: ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗುವಂತೆ ಕೊಡಗಿನಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.

ಕೂಡುಮಂಗಳೂರಿನಲ್ಲಿ ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ, ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಶನ್‌ನ ಕುಶಾಲನಗರ ತಾಲ್ಲೂಕು ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಕೂಲಿ ಕಾರ್ಮಿಕರು ದೇಶದ ಬೆನ್ನೆಲುಬು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟನೆ ಅಗತ್ಯ. ಕಾರ್ಮಿಕರು ಕೆಲಸ ನಿರ್ವಹಣೆ ಸಂದರ್ಭ ಸುರಕ್ಷತೆ ಬಗ್ಗೆ ಗಮನ ಹರಿಸಬೇಕಿದೆ. ಶ್ರಮಿಕರು ಕಡ್ಡಾಯವಾಗಿ ಇ ಶ್ರಮ್ ಕಾರ್ಡ್ ಹೊಂದುವುದು ಅಗತ್ಯ. ಕನಿಷ್ಠ ವೇತನ ತಾರತಮ್ಯದ ಬಗ್ಗೆ ಸೂಕ್ತ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದ ಅವರು, ಸರ್ಕಾರದ ಪಂ ಗ್ಯಾರೆಂಟಿ ಯೋಜನೆಗಳ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಿದೆ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಇಂಟೆಕ್ ರಾಜ್ಯಾಧ್ಯಕ್ಷ ಲಕ್ಷ್ಮಿ ವೆಂಕಟೇಶ್ ಮಾತನಾಡಿ, ಕಾರ್ಮಿಕರು ಮಾಲೀಕರ ನಡುವೆ ಐಎನ್‌ಟಿಯುಸಿ ಕಾರ್ಯ ನಿರ್ವಹಿಸಲಿದೆಯಾದರೂ ಕಾರ್ಮಿಕರ ಪರವಾಗಿಯೇ ಎಂದಿಗೂ ಸೇವೆ ಸಲ್ಲಿಸಲಿದೆ. ಕಾರ್ಮಿಕ ಮುಖಂಡರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಳ್ಳದ್ೆ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಬೇಕಿದೆ ಎಂದರು.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕಾರ್ಮಿಕರು ಸರಕಾರದ ಸೌಲಭ್ಯಗಳನು, ತಮ್ಮ ಹಕ್ಕುಗಳ ಬಗ್ಗೆ ಕನಿಷ್ಠ ಜ್ಞಾನ ಹೊಂದುವ ಅಗತ್ಯವಿದೆ ಎಂದರು.
ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಕಾರ್ಮಿಕರ ಕಲ್ಯಾಣಕ್ಕಾಗಿಯೇ ಇರುವ ನಿಧಿಗಳನ್ನು ಬಳಸಿಕೊಳ್ಳಲು ಸಂಘಟನೆಗಳು ಸದಸ್ಯರಿಗೆ ಮಾರ್ಗದರ್ಶನ್ ನೀಡಬೇಕಿದೆ. ಹೆಚ್ಚು ಸಂಘಗಳ ಸ್ಥಾಪನೆ ಬದಲು ಒಂದೇ ವೇದಿಕೆಯಡಿ ಎಲ್ಲರೂ ಕಾರ್ಯನಿರ್ವಹಿಸಿದಾಗ ಹಾದಿ ಸುಗಮವಾಗಲಿದೆ ಎಂದರು.

ಕಾರ್ಮಿಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ಎಂ.ಯಲ್ಲಪ್ಪ ಮುಖ್ಯ ಭಾಷಣ ಮಾಡಿದರು. ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಅರುಣ್ ರಾವ್, ಜಿಲ್ಲಾ ಸಂಘಟಿತ ಕಾರ್ಮಿಕ ಸಂಘದ ಅಧ್ಯಕ್ಷ ಟಿ.ಪಿ.ಹಮೀದ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ತ್ರಿನೇಶ್, ಫೆಡರೇಷನ್ ತುಮಕೂರು ಜಿಲ್ಲಾಧ್ಯಕ್ಷ ಗೋವಿಂದರಾಜು, ಗುತ್ತಿಗೆದಾರ ಚಂದ್ರು, ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ, ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಶನ್‌ನ ಕುಶಾಲನಗರ ತಾಲೂಕು ಸಂಘದ ಕಾರ್ಯಾಧ್ಯಕ್ಷ ಮಂಜು, ಅಧ್ಯಕ್ಷ ರಂಜಿತ್, ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಖಜಾಂಚಿ ಪ್ರಕಾಶಾಚಾರಿ ಹಾಗೂ ಪದಾಧಿಕಾರಿಗಳು ಇದ್ದರು.