ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ಹಾಗೂ ಕಾವೇರಿ ಕಾಲೇಜು ವಿರಾಜಪೇಟೆ ಸಂಯಕ್ತ ಆಶ್ರಯದಲ್ಲಿ ಕಾನೂನಿನ ಅರಿವು ಕಾರ್ಯಕ್ರಮ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮಡಿಕೇರಿ ಡಿ.ಎಲ್.ಎಸ್. ಎ ಸದಸ್ಯ ಕಾರ್ಯದರ್ಶಿ ಶುಭಾ ವೇದಿಕಾ ರೆಡ್ಡಿ , ಬೆನೆಡಿಕ್ಟ್ ಆರ್ ಸಲ್ಡಾನಾ , ಹಾಜ್ಹೀರ , ವಿನೀತಾ , ಪ್ರಶಾಂತ್ ಇದ್ದರು. 
ಕೊಡಗು

ಸಂಸ್ಕೃತಿ ಮರೆತರೆ ದೇಶದ ವಿನಾಶಕ್ಕೆ ನಾಂದಿ

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಸಿವಿಲ್ ನ್ಯಾಯಾಧೀಶೆ ಶುಭಾ ಹೇಳಿಕೆ
ವಿರಾಜಪೇಟೆ:ಮನುಷ್ಯ ತನ್ನ ಸಂಸ್ಕೃತಿಯನ್ನು ಎಂದಿಗೂ ಬಿಡಬಾರದು ಸಂಸ್ಕೃತಿಯನ್ನು ಮರೆಯುವುದು ದೇಶದ ವಿನಾಶಕ್ಕೆ ನಾಂದಿ ಹಾಡಿದಂತೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮಡಿಕೇರಿ ಡಿ.ಎಲ್.ಎಸ್. ಎ ಸದಸ್ಯ ಕಾರ್ಯದರ್ಶಿ ಶುಭಾ ಅಭಿಪ್ರಾಯ ಪಟ್ಟರು.
ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ, ವಿರಾಜಪೇಟೆ ಹಾಗೂ ಕಾವೇರಿ ಕಾಲೇಜು ವಿರಾಜಪೇಟೆ ಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಇದಕ್ಕೆ ಮುಖ್ಯ ಕಾರಣವಾಗಿ ನಿಂತಿರುವುದು ಮಾದಕ ವಸ್ತುಗಳ ಬಳಕೆ ಹಾಗೂ ಮೊಬೈಲ್ ಬಳಕೆ ಎಂದು ಬೇಸರ ವ್ಯಕ್ತಪಡಿಸಿದರು.
 ಸಮಾಜವಿಂದು ಕೆಟ್ಟದುರ ಕಡೆಗೆ ಸಾಗುತ್ತಿದೆ. ಯುವಜನರಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಸಮಾಜದಲ್ಲಿ ಹೆಚ್ಚಿನವರಿಗೆ ಕಾನೂನಿನ ಅರಿವಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನಿನ ಸೇವೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಕಾನೂನು ಪ್ರಾಧಿಕಾರವನ್ನು ಆರಂಭಿಸಲಾಗಿದೆ. ಸಾಮಾನ್ಯ ವ್ಯಕ್ತಿಗೂ ಕಾನೂನಿನ ಸೇವೆ ಒದಗಿಸಿ ಅಸಮಾನತೆಯನ್ನು ಹೋಗಲಾಡಿಸುವುದು ಇದರ ಮೂಲ ಉದ್ದೇಶವಾಗಿದೆ. ಆರ್ಥಿಕ ಸಾಮಾಜಿಕವಾಗಿ ಹಿಂದುಳಿದಿರುವ ವ್ಯಕ್ತಿಗೆ ವಕೀಲರನ್ನು ನೇಮಕ ಮಾಡುವುದರೊಂದಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಸಾಧ್ಯವಾದಷ್ಟು ಕಾನೂನು ಪದವಿ ಪಡೆಯುವವರು ಹಾಗೂ ಯುವಜನತೆ ಬುಡಕಟ್ಟು ಜನರಿಂದ ಹಿಡಿದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನಿನ ಅರಿವನ್ನು ಮೂಡಿಸುವುದರೊಂದಿಗೆ ಸಮಾಜದ ಮುನ್ನಡೆಗೆ ತರಲು ಶ್ರಮಿಸಬೇಕೆಂದರು. 
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಡಿಕೇರಿ ಡೆಪ್ಯುಟಿ ಲೀಗಲ್ ಏಡ್ ಡಿಪೆಸ್ಸ್ ಕೌನ್ಸಲ್ ಎ.ಹಾಜ್ಹೀರ ಪ್ರಸ್ತುತ ಸಮಾಜದಲ್ಲಿ ಹೆಚ್ಚಿನವರು ಕಾನೂನಿನ ತತ್ವಗಳನ್ನು ಗಾಳಿಗೆ ತೂರಿ ಜೀವನವನ್ನು ನಡೆಸುತ್ತಿದ್ದಾರೆ. ವಿದ್ಯಾರ್ಥಿ ಜೀವನದಿಂದಲೇ ಕಾನೂನಿನ ಅರಿವಿನಂತಹ ಕಾರ್ಯಕ್ರಮಗಳು ನಡೆದಾಗ ಮುಂದೆ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ. ಜಿಲ್ಲಾ ಕಾನೂನು ಸಲಹೆಗಳ ಪ್ರಾಧಿಕಾರ ಮಹಿಳೆಯರಿಗೆ, ಮಕ್ಕಳಿಗೆ ,ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗ ,ಹಿರಿಯ ನಾಗರಿಕರಿಗೆ , ಬಂದಿತ ಖೈದಿಗಳಿಗೆ, ಮಾಜಿ ಸೈನಿಕರಿಗೆ ಉಚಿತವಾಗಿ ಕಾನೂನು ಸೇವೆಗಳನ್ನು ನೀಡುವುದರೊಂದಿಗೆ. ದುರ್ಬಲ ವರ್ಗದವರಿಗೆ ತ್ವರಿತ ಗತಿಯಲ್ಲಿ ನ್ಯಾಯ ಒದಗಿಸಿಕೊಡುವ ಕೆಲಸವನ್ನು ಮಾಡುತ್ತಿದೆ. ಸಮಾಜದಲ್ಲಿ ಕಾನೂನಾತ್ಮಕವಾಗಿ ನಡೆಯಬೇಕಾದ ಸೇವೆಗಳನ್ನು ಈ ವರ್ಗದವರಿಗೆ ಸಮರ್ಪಕವಾಗಿ ಒದಗಿಸುವುದರೊಂದಿಗೆ ಸಮಸ್ಯೆ ನಿವಾರಣೆ ಪ್ರಾಧಿಕಾರ ಸದಾ ಸಿದ್ಧವಾಗಿರುತ್ತದೆ ಎಂದರು.
ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ವಿರಾಜಪೇಟೆ ಯ ಕಾರ್ಯದರ್ಶಿ ವೇದಿಕಾ ರೆಡಿ,್ಡ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ , ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ಕಾಲೇಜಿನ ಟ್ರಸ್ಟಿ ಪ್ರಶಾಂತ್ , ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ಕಾಲೇಜಿನ ಪ್ರಾಂಶುಪಾಲೆ ಪಿ.ಕೆ .ವಿನೀತಾ, ಕಾನೂನು ಪದವಿ ವಿದ್ಯಾರ್ಥಿಗಳು , ಉಪನ್ಯಾಸಕರು , ಕಾವೇರಿ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.