ಮಡಿಕೇರಿ ಗೌಡ ಸಮಾಜದ ವತಿಯಿಂದ ಹುತ್ತರಿ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಪೊನ್ನಚನ ಮಧು, ಪ್ರೀತು, ಬೈತಡ್ಕ ದಿನೇಶ್, ಪುದಿಯನೆರವನ ರೇವತಿ ರಮೇಶ್ ಮತ್ತಿತರರು ಇದ್ದರು. 
ಕೊಡಗು

ಮಡಿಕೇರಿಯಲ್ಲಿ ಹುತ್ತರಿ ಹಬ್ಬದ ಸಂಭ್ರಮ

ಮಡಿಕೇರಿ:
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೊಡಗಿನಾದ್ಯಂತ ಗುರುವಾರ ರಾತ್ರಿ ಸುಗ್ಗಿ ಹಬ್ಬ ಹುತ್ತರಿಯನ್ನು (ಪುತ್ತರಿ) ಸಂಭ್ರಮದಿAದ ಆಚರಿಸಲಾಯಿತು. ದಕ್ಷಿಣ ಕೊಡಗಿನ ಬಹುತೇಕ ಭಾಗಗಳಲ್ಲಿ ಶುಕ್ರವಾರ ಬೆಳಗ್ಗೆ ಹಬ್ಬಾಚರಣೆ ಮಾಡಿದರು. ಮಡಿಕೇರಿಯಲ್ಲಿ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಸಂಪ್ರದಾಯದAತೆ ಕದಿರು ತೆಗೆದು ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ವಿತರಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಸೇರಿದಂತೆ ಪ್ರಮುಖರು ಈ ಸಂದರ್ಭ ಇದ್ದರು. ಮಡಿಕೇರಿ ಗೌಡ ಸಮಾಜದಲ್ಲೂ ವಿಜೃಂಭಣೆಯಿAದ ಹುತ್ತರಿ ಹಬ್ಬದ ಆಚರಣೆ ನಡೆಯಿತು. ನಗರದಲ್ಲಿ ವಾಸ ಇರುವ ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಾಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಂಡರು. ಪೂಜೆ ಸಲ್ಲಿಸಿ ಎಲ್ಲರಿಗೂ ಕದಿರು ವಿತರಿಸಲಾಯಿತು.