ಚಿಕ್ಕತ್ತೂರು ಗ್ರಾಮದಲ್ಲಿ ನಡೆದ ಹುಲಿಮಿತ್ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ದುಬಾರೆ ಟೈಗರ್ ತಂಡಕ್ಕೆ ಎ.ಸಿ.ಎಫ್. ಎ.ಎ. ಗೋಪಾಲ ಬಹುಮಾನ ವಿತರಿಸಿದರು. ವಾಂಚಿರ ಮನು ನಂಜುAಡ, ಆರ್. ರಕ್ಷಿತ್, ಕೆ.ಆರ್. ಚೇತನ್ ಮತ್ತಿತರರು ಇದ್ದರು.
ಅರಣ್ಯದಂಚಿನ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮಧ್ಯೆ ವಿಶ್ವಾಸ ಮೂಡಿಸುವ ಉದ್ದೇಶ ಇಟ್ಟುಕೊಂಡು ಕುಶಾಲನಗರ ವಲಯ ಅರಣ್ಯ ಇಲಾಖೆಯ ವತಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಸೋಮವಾರ ಹುಲಿಮಿತ್ರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಕುಶಾಲನಗರ ತಾಲೂಕು ಮಟ್ಟದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಸ್ಥಳೀಯ ಯುವಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಒಳಗೊಂಡ 12 ತಂಡಗಳು ಪಾಲ್ಗೊಂಡಿದ್ದವು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಈ ಪಂದ್ಯಾವಳಿ ಉದ್ಘಾಟಿಸಿದರು. ನಂತರ ಮಾತನಾಡಿ ಗ್ರಾಮಾಂತರ ಪ್ರದೇಶದ ಯುವಕರು ಅರಣ್ಯ ಇಲಾಖೆಯೊಂದಿಗೆ ಸೌಹಾರ್ದ ಮನೋಭಾವ ಬೆಳೆಸಿಕೊಳ್ಳಬೇಕು. ಈ ಮೂಲಕ ಗ್ರಾಮದ ಅಭಿವೃದ್ಧಿ ಮತ್ತು ಇಲಾಖೆಗೆ ಸಹಕಾರಿಯಾಗುವ ಸ್ನೇಹ ಸಂಬAಧ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಆಯೋಜನೆಗೊಂಡಿರುವ ಕ್ರೀಡಾಕೂಟ ಅಭಿನಂದನಾರ್ಹ. ಇಂಥ ಚಟುವಟಿಕೆಗಳು ಯುವಕರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪೂರಕವಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತಾನಾಡಿ ಕ್ರೀಡಾಕೂಟದ ಮೂಲಕ ಒಗ್ಗೂಡುವಿಕೆ ಸಾಧ್ಯವಾಗುತ್ತದೆ. ಸಮಾಜಕ್ಕೆ ಪೂರಕವಾಗುವ ಆದರ್ಶ, ಜೀವನ ಮೌಲ್ಯಗಳನ್ನು ಕಲಿಸಿಕೂಡುತ್ತದೆ ಎಂದು ಹೇಳಿದರು.
ಮಾಜಿ ಸೈನಿಕ ವಾಂಚಿರ ಮನು ನಂಜುAಡ, ಡಿ.ಸಿ.ಎಫ್. ವಿ. ಅಭಿಷೇಕ್, ಎ.ಸಿ.ಎಫ್. ಎ.ಎ. ಗೋಪಾಲ, ಮಂಜುನಾಥ, ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್. ರಕ್ಷಿತ್, ಗಸ್ತು ಅರಣ್ಯ ಪಾಲಕ ಕೆ.ಆರ್. ಚೇತನ್, ಚಿಕ್ಕತ್ತೂರು ಯುವಕ ಸಂಘದ ಅಧ್ಯಕ್ಷ ಸಿ.ಸಿ. ಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕ ಚೇತನ್, ದೊಡ್ಡತ್ತೂರು ಯೋಗೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಉಮೇಶ್, ವೆಂಕಟೇಶ್, ಗಸ್ತು ಅರಣ್ಯ ಪಾಲಕರಾದ ಮಲ್ಲನಗೌಡ ಪಾಟೀಲ್, ಸಂಪತ್ ಕುಮಾರ್, ಅರುಣ್, ಸುನಿಲ್, ಕುಡಲಪ್ಪ ಸೇರಿದಂತೆ ಇಲಾಖೆಯ ಸಿಬ್ಬಂದಿ, ಸ್ಥಳೀಯ ಯುವಕರು ಹಾಗೂ ಗ್ರಾಮಸ್ಥರು ಇದ್ದರು.
ಈ ಪಂದ್ಯಾಟದಲ್ಲಿ ದುಬಾರೆ ಟೈಗರ್ ತಂಡ ಪ್ರಥಮ ಸ್ಥಾನ ಪಡೆಯಿತು, ದ್ವೀತಿಯ ಸ್ಥಾನ ಹಾತಿ ಮೇರೆ ಸಾಥಿ, ತೃತೀಯ ಸ್ಧಾನ ಕಂಬಿಬಾಣಿ ರಾಯಲ್ ತಂಡ ಪಡೆದುಕೊಂಡಿತು. ಎ.ಸಿ.ಫ್. ಎ.ಎ. ಗೋಪಾಲ, ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್. ರಕ್ಷಿತ್ ಬಹುಮಾನ ವಿತರಣೆ ನೆರವೇರಿಸಿದರು.